ಬೆಂಗಳೂರು (ಮಾ. 23): ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಂದು ಇರುವ ಬಹುದೊಡ್ಡ ಕೆಲಸ ಎಂದರೆ ತಮ್ಮ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡುವುದು. ಏಕೆಂದರೆ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನನಿತ್ಯದ ಹೆಚ್ಚಿನ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಸ್ವಲ್ಪ ಸಮಯದವರೆಗೆ ಅದನ್ನು ದೂರವಿಡುವುದು ತುಂಬಾ ಕಷ್ಟ. ಸಾಮಾನ್ಯವಾಗಿ ನೀವು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್‌ಗೆ ಹಾಕಿದರೆ, ಫೋನ್ ಚಾರ್ಜ್ ಆಗುತ್ತದೆ, ಆದರೆ ಇದಾದ ಬಳಿಕ ಅನೇಕರು ಸಮಸ್ಯೆಯನ್ನು ಅನುಭವಿಸುತ್ತಾರೆ. ಅದೇನೆಂದರೆ ಫೋನ್ ಬೇಗನೆ ಡಿಸ್ಚಾರ್ಜ್ ಆಗುತ್ತದೆ. ಅಂದರೆ ಚಾರ್ಜ್ ಫುಲ್ ಆಗಿ ತೆಗೆದ ತಕ್ಷಣ ಚಾರ್ಜ್ ಖಾಲಿ ಯಾಗಲು ಶುರು ಮಾಡುತ್ತದೆ. ಈ ಸಮಸ್ಯೆ ನೀವು ಅನುಭವಿಸುತ್ತಿದ್ದರೆ, ಈ ಸುದ್ದಿ ಮಾತ್ರ. ಇದನ್ನು ನಿಭಾಯಿಸಲು ಕೆಲವು ಮಾರ್ಗಗಳನ್ನು ನಾವು ನಿಮಗೆ ಹೇಳುತ್ತೇವೆ.
ನಿಮ್ಮ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಅದರ ಬ್ಯಾಟರಿ ಬೇಗನೆ ಖಾಲಿಯಾದರೆ, ಅದಕ್ಕೆ ಹಲವು ಕಾರಣಗಳಿವೆ. ಫೋನ್‌ನ ಬ್ಯಾಟರಿ ಬೇಗ ಖಾಲಿಯಾಗಲು ಕಾರಣಗಳು ಮತ್ತು ಈ ಸಮಸ್ಯೆಯನ್ನು ಹೇಗೆ ತೊಡೆದುಹಾಕುವುದು ಮತ್ತು ಫೋನ್‌ನ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಹೊಸ ಫೋನ್ ಆದಾಗ, ಅದರ ಬ್ಯಾಟರಿ ಗಂಟೆಗಳ ಕಾಲ ಬಾಳಿಕೆ ಬರುತ್ತದೆ. ಆದರೆ ಅದು ಹಳೆಯದಾಗುತ್ತಿದ್ದಂತೆ. ಇದರ ಬ್ಯಾಟರಿ ಬೇಗನೆ ಡಿಸ್ಚಾರ್ಜ್ ಆಗಲು ಪ್ರಾರಂಭಿಸುತ್ತದೆ. ಇದರ ಹಿಂದಿನ ಒಂದು ಕಾರಣವೆಂದರೆ ಬ್ಯಾಟರಿ ಹಳೆಯದಾಗಿರುವುದು. ಇದರೊಂದಿಗೆ, ಕೆಲವು ಅಪ್ಲಿಕೇಶನ್‌ಗಳು ಫೋನ್‌ನ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುತ್ತವೆ, ಇದರಿಂದಾಗಿ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹೆಚ್ಚಿನ ಬ್ರೈಟ್ನೆಸ್ ಮತ್ತು ನೋಟಿಫಿಕೇಷನ್ ಆನ್ ಆಗಿರುವುದರಿಂದ ಕೂಡ ಫೋನ್ ಬೇಗನೆ ಡಿಸ್ಚಾರ್ಜ್ ಆಗುತ್ತದೆ.
WhatsApp Ban: ಒಂದಲ್ಲ.. ಎರಡಲ್ಲ..: ಭಾರತದಲ್ಲಿ ಬರೋಬ್ಬರಿ 99 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಚಾರ್ಜಿಂಗ್ ವಿಷಯಕ್ಕೆ ಬಂದರೆ, ತಮ್ಮ ಫೋನ್ನಲ್ಲಿ ಬ್ಯಾಟರಿ ಸ್ವಲ್ಪ ಖಾಲಿಯಾದ ತಕ್ಷಣ ಅದನ್ನು ಚಾರ್ಜಿಂಗ್‌ಗೆ ಹಾಕುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. ನಿಮಗೂ ಈ ಅಭ್ಯಾಸವಿದ್ದರೆ ನಿಮ್ಮ ಫೋನ್ ಬೇಗ ಕೆಟ್ಟು ಹೋಗಬಹುದು. ಫೋನಿನಲ್ಲಿ ಶೇ. 20 ಚಾರ್ಜ್ ಉಳಿದಿರುವಾಗ ಫೋನ್ ಚಾರ್ಜ್ ಮಾಡಬೇಕು ಮತ್ತು ಶೇ. 80 ಚಾರ್ಜ್ ಆದ ತಕ್ಷಣ ಹೊರತೆಗೆಯಬೇಕು. ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್ಚಾರ್ಜ್ ಮಾಡುವುದನ್ನು ತಪ್ಪಿಸಿ. ನೀವು 45-75 ನಿಯಮವನ್ನು ಸಹ ಅನುಸರಿಸಬಹುದು. ಅಂದರೆ, ಫೋನ್‌ನ ಬ್ಯಾಟರಿ ಶೇ. 45 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ನೀವು ಚಾರ್ಜ್ ಹಾಕಬಹುದು ಮತ್ತು ಅದು ಶೇ. 75 ರಷ್ಟು ತಲುಪಿದಾಗ ಚಾರ್ಜಿಂಗ್ ಅನ್ನು ತೆಗೆದುಹಾಕಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ