ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಫೋನುಗಳಿಗೆ ಹೆಸರುವಾಸಿಯಾಗಿರುವ ಟೆಕ್ನೋ (Tecno) ಕಂಪನಿ ಅಪರೂಪಕ್ಕೆ ಕೆಲ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತದೆ. ಹೆಚ್ಚು ಜಾಹೀರಾತುಗಳನ್ನೆಲ್ಲ ನೀಡದೆ ಸೈಲೆಂಟ್ ಆಗಿ ಮೊಬೈಲ್ಗಳನ್ನು ಅನಾವರಣ ಮಾಡುವ ಟೆಕ್ನೋ ಇದೀಗ ತನ್ನ ಪೋವಾ ಸರಣಿ ಅಡಿಯಲ್ಲಿ ಹೊಸ ಟೆಕ್ನೋ ಪೋವಾ ನಿಯೋ 3 (Tecno Pova Neo 3) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾದ ಪೋವಾ ನಿಯೋ 2 ನ ಉತ್ತರಾಧಿಕಾರಿಯಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಪೋವಾ ನಿಯೋ 3 ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೆಚ್ಚಿನ RAM ಮತ್ತು ಹೊಸ OS ಅನ್ನು ನೀಡಲಾಗಿದೆ.
ಟೆಕ್ನೋ ಪೋವಾ ನಿಯೋ 3 ಹೊಸ Turbo Mecha ವಿನ್ಯಾಸವನ್ನು ಒಳಗೊಂಡಿದೆ. Mecha Black, Amber Gold ಮತ್ತು Hurricane Blue ನಂತಹ ಮೂರು ಬಣ್ಣಗಳಲ್ಲಿ ಬರುತ್ತದೆ. ಈ ಸ್ಮಾರ್ಟ್ಫೋನ್ 6.82-ಇಂಚಿನ IPS LCD ಪ್ಯಾನೆಲ್ ಅನ್ನು ಹೊಂದಿದ್ದು, ಇದು 1640 x 720 ಪಿಕ್ಸೆಲ್‌ಗಳ HD+ ರೆಸಲ್ಯೂಶನ್, 20.5:9 ಅನುಪಾತ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್ HiOS 13-ಆಧಾರಿತ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಈ ಸ್ಮಾರ್ಟ್ಫೋನ್ನಲ್ಲಿ ಮೀಡಿಯಾಟೆಕ್ ಹೀಲಿಯೊ G85 ಚಿಪ್‌ಸೆಟ್, 8 GB RAM ಮತ್ತು 128 GB ಸ್ಟೋರೇಜ್ ನೀಡಲಾಗಿದೆ. ಹೆಚ್ಚುವರಿ ಸಂಗ್ರಹಣೆಗಾಗಿ, ಇದು ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ 7,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ಸಾಧನದಲ್ಲಿ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.
ಪೋವಾ ನಿಯೋ 3 ಎಲ್ಇಡಿ ಫ್ಲ್ಯಾಷ್ನೊಂದಿಗೆ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದಲ್ಲಿ, ಇದು 16-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ರಚನೆ ಇದ್ದು ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಕೂಡ ಹೊಂದಿದೆ. ನಿಯೋ 3 ಡ್ಯುಯಲ್ ಸಿಮ್ ಬೆಂಬಲ, 4G VoLTE, Wi-Fi, ಬ್ಲೂಟೂತ್, GPS, USB-C ಪೋರ್ಟ್ ಮತ್ತು 3.5mm ಆಡಿಯೊ ಜಾಕ್‌ನಂತಹ ಇತರ ವೈಶಿಷ್ಟ್ಯತೆಗಳೊಂದಿಗೆ ಅನಾವರಣಗೊಂಡಿದೆ. ಈ ಫೋನಿನ ಬೆಲೆ ಮತ್ತು ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ