Twitter New Logo: ಟ್ವಿಟ್ಟರ್​​ಗೆ ಹೊಸ ಲೋಗೋ: ಅತಿ ದೊಡ್ಡ ಘೋಷಣೆ ಮಾಡಿದ ಎಲಾನ್ ಮಸ್ಕ್

Elon Musk: "ಶೀಘ್ರದಲ್ಲೇ ನಾವು ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ," ಎಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ.

Twitter New Logo: ಟ್ವಿಟ್ಟರ್​​ಗೆ ಹೊಸ ಲೋಗೋ: ಅತಿ ದೊಡ್ಡ ಘೋಷಣೆ ಮಾಡಿದ ಎಲಾನ್ ಮಸ್ಕ್
ಎಲಾನ್‌ ಮಸ್ಕ್
Follow us
Vinay Bhat
|

Updated on: Jul 23, 2023 | 3:27 PM

ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಟ್ವಿಟ್ಟರ್ ಅನ್ನು ತನ್ನ ತೆಕ್ಕೆಗೆ ಪಡೆದುಕೊಂಡ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್​ನಲ್ಲಿ ಒಂದಲ್ಲ ಒಂದು ಬದಲಾವಣೆ ತರುತ್ತಲೇ ಇದ್ದಾರೆ. ಇದೀಗ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು ಶೀಘ್ರದಲ್ಲೇ ಟ್ವಿಟ್ಟರ್​ನ (Twitter) ಹೊಸ ಲೋಗೋವನ್ನು ಲಾಂಚ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಎಲಾನ್ ಮಸ್ಕ್ ಟ್ವೀಟ್ ಮಾಡುವ ಮೂಲಕ ಟ್ವಿಟರ್ ಲೋಗೋವನ್ನು (Twitter Logo) ಬದಲಾಯಿಸುವ ಉದ್ದೇಶವನ್ನು ಪ್ರಕಟಿಸಿದ್ದಾರೆ.

“ಶೀಘ್ರದಲ್ಲೇ ನಾವು ಟ್ವಿಟ್ಟರ್ ಬ್ರ್ಯಾಂಡ್‌ಗೆ ಮತ್ತು ಎಲ್ಲಾ ಪಕ್ಷಿಗಳಿಗೆ ವಿದಾಯ ಹೇಳುತ್ತೇವೆ,” ಎಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ. ಪ್ರಸ್ತುತ ಟ್ವಿಟರ್‌ನ ಲೋಗೋ ಪಕ್ಷಿ ಆಗಿದ್ದು ಸದ್ಯದಲ್ಲೇ ಇದು ಬದಲಾವಣೆ ಆಗಲಿದೆ. ಎಲಾನ್‌ ಮಸ್ಕ್ ಈರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಇದಕ್ಕೆ ಸಾಕಷ್ಟು ಕಮೆಂಟ್​ಗಳು ಬಂದಿದ್ದು, ಪರ-ವಿರೋಧದ ಚರ್ಚೆಗಳು ಆರಂಭವಾಗಿದೆ. ಅನೇಕರು ಟ್ವಿಟ್ಟರ್ ಲೋಗೋವನ್ನು ಬದಲಾಯಿಸ ಬೇಡಿ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ
Image
Moto G13: 13,999 ರೂ. ಬೆಲೆಯ ಈ ಸ್ಮಾರ್ಟ್​ಫೋನ್ ಅನ್ನು ಕೇವಲ 9,999 ರೂ. ಗೆ ಖರೀದಿಸಿ
Image
Smartphones under Rs. 15000: 15,000 ರೂ. ಒಳಗಡೆ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
Realme C51: ರಿಯಲ್ ಮಿ C ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಸ್ಮಾರ್ಟ್​ಫೋನ್: ಈ ಬಾರಿಯ ಕ್ಯಾಮೆರಾ ಎಷ್ಟು MP ಗೊತ್ತೇ?
Image
Vu Masterpiece QLED: ವ್ಯೂ 98 ಇಂಚಿನ ಲೇಟೆಸ್ಟ್ ಒಎಲ್‌ಇಡಿ ಟಿವಿ ಬೆಲೆ ₹6 ಲಕ್ಷ ಮಾತ್ರ!

Realme GT 2: 40,000 ರೂ. ವಿನ ಈ ಸ್ಮಾರ್ಟ್​ಫೋನ್ ಬೆಲೆ ಈಗ ಕೇವಲ 27,999 ರೂ.

ಇದರ ಜೊತೆಗೆ ತನ್ನ ಮೆಚ್ಚುನ ‘ಎಕ್ಸ್’ ಆ್ಯಪ್ ಬಗ್ಗೆಯೂ ಟ್ವೀಟ್ ಮಾಡಿರುವ ಮಸ್ಕ್, ನಾಳೆಯೇ ನಾವು ಜಗತ್ತಿನಾದ್ಯಂತ ಲೈವ್ ಹೋಗಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಆ್ಯಪ್ ಸಾಕಷ್ಟು ವಿಶೇಷವಾಗಿದ್ದು, ಜನರು ತಮ್ಮ ಅನಿಸಿಕೆಗಳನ್ನು ವಿಶ್ವದ ಮುಂದೆ ತೆರೆದಿಟ್ಟುಕೊಳ್ಳಲು ಇರುವ ಒಂದು ಅತ್ಯುತ್ತಮ ವೇದಿಕೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಎಲಾನ್ ಮಸ್ಕ್ ಅವರ ಪೋಸ್ಟ್​ಗೆ ಟ್ವಿಟ್ಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತದೆ. ಅದು ಈ ಬಾರಿ ಕೂಡ ಮುಂದುವರೆದಿದೆ, ಕೆಲವರು ಮುಂಬರುವ ಬದಲಾವಣೆಯ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು ಈ ತಪ್ಪನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ಲಾ ಏಜೆನ್ಸಿ ವಿರುದ್ಧ ಎಲಾನ್ ಮಸ್ಕ್ ಕೇಸ್

ಟ್ವಿಟ್ಟರ್ ಖರೀದಿಯಿಂದ ಹಿಂದಕ್ಕೆ ಸರಿಯುವ ತಮ್ಮ ಪ್ರಯತ್ನವನ್ನು ವಿಫಲಗೊಳಿಸಿದ್ದ ವಾಚ್​ಟೆಲ್, ಲಿಪ್ಟನ್, ರೋಸೆನ್ ಅಂಡ್ ಕಾಟ್ಜ್ ಎಂಬ ಲಾ ಏಜೆನ್ಸಿ ವಿರುದ್ಧ ಎಲಾನ್ ಮಸ್ಕ್ ಮೊಕದ್ದಮೆ ಹಾಕಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟ್​ನಲ್ಲಿ ಕಳೆದ ವಾರ ಎಕ್ಸ್ ಕಾರ್ಪ್ (X Corp) ಸಂಸ್ಥೆ ದೂರು ದಾಖಲಿಸಿದೆ. ಎಕ್ಸ್ ಕಾರ್ಪ್ ಎಂಬುದು ಎಲಾನ್ ಮಸ್ಕ್ ಮಾಲೀಕತ್ವದ ಕಂಪನಿ. ಟ್ವಿಟ್ಟರ್ ಖರೀದಿ ಒಪ್ಪಂದ ಪೂರ್ಣಗೊಳ್ಳುವಂತೆ ಮಾಡಲು ವಾಚ್​ಟೆಲ್ ಸಂಸ್ಥೆ 90 ಮಿಲಿಯನ್ ಡಾಲರ್​ನಷ್ಟು (740 ಕೋಟಿ ರೂ.) ದೊಡ್ಡ ಮೊತ್ತದ ಶುಲ್ಕವನ್ನು ಪಡೆದಿದೆ ಎಂಬುದು ಎಲಾನ್ ಮಸ್ಕ್ ಅವರ ಆರೋಪವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ