Kannada News Technology Tecno Pova 3 A 7,000mAh Battery 50-Megapixel Primary Camera Launched in India just RS 11499
Tecno Pova 3: 7000mAh ಬ್ಯಾಟರಿ, 50MP ಕ್ಯಾಮೆರಾ: 11,499 ರೂ.ಗೆ ಬಿಡುಗಡೆ ಆಗಿದೆ ಟೆಕ್ನೋ ಪೊವಾ 3
ಭಾರತದಲ್ಲಿ ಬಹುನಿರೀಕ್ಷಿತ ಟೆಕ್ನೋ ಪೊವಾ 3 (Tecno Pova 3) ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಅತ್ಯಂತ ದೊಡ್ಡದಾದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ (Budget Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ(Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ವಿಶೇಷವಾದ ಫೋನೊಂದನ್ನು ಅನಾವರಣ ಮಾಡಿದೆ. ಅದುವೆ ಟೆಕ್ನೋ ಪೊವಾ 3 (Tecno Pova 3) ಸ್ಮಾರ್ಟ್‌ಫೋನ್. ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಅತ್ಯಂತ ದೊಡ್ಡದಾದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇದಿಷ್ಟೇ ಅಲ್ಲದೆ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. ಹಾಗಾದ್ರೆ ಈ ಬಜೆಟ್ ಬೆಲೆಯ ಫೋನಿನ ಇತರೆ ಫೀಚರ್ಸ್ ಏನು ಎಂಬುದನ್ನು ನೋಡೋಣ.
ಟೆಕ್ನೋ ಪೊವಾ 3 ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಸ್ಟೋರೆಜ್ ಸಾಮರ್ಥ್ಯದ ಬೆಲೆ 11,499 ರೂ. ಆಗಿದೆ. ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಈ ಫೋನ್ ಜೂನ್ 27 ರಿಂದ ಖರೀದಿಗೆ ಸಿಗಲಿದೆ.
ಈ ಸ್ಮಾರ್ಟ್‌ಫೋನ್ 1080 × 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.9 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರೀಫ್ರೇಶ್ ರೇಟ್ನಿಂದ ಕೂಡಿದ್ದು, 480ನಿಟ್ಸ್ ಬ್ರೈಟ್‌ನೆಶ್ ಅನ್ನು ನೀಡುತ್ತದೆ.
ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G88 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ.
ಟೆಕ್ನೋ ಪೊವಾ 3 ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
ಇದನ್ನೂ ಓದಿ
Poco F4 5G: ಪೋಕೋ ರಿಲೀಸ್ ಮಾಡುತ್ತಿದೆ ಹೊಸ ಸ್ಮಾರ್ಟ್‌ಫೋನ್: ಇದರ ಕ್ಯಾಮೆರಾಕ್ಕೆ ಫಿದಾ ಆಗ್ತೀರ
ಭರ್ಜರಿ ಕ್ಯಾಮೆರಾ, ಬೊಂಬಾಟ್ ಬ್ಯಾಟರಿ: 30,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಗಳು ಇದುವೇ ನೋಡಿ
Best Smartphone: 30,000 ರೂ. ಗಿಂತ ಕಡಿಮೆ ಬೆಲೆಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ ನೋಡಿ
Signal Problem: ನೀವಿರುವ ಜಾಗದಲ್ಲಿ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ವಾ?: ಇಲ್ಲಿದೆ ಸಿಂಪಲ್ ಈ ಟ್ರಿಕ್
ದೀರ್ಘ ಸಮಯ ಬಾಳಿಕ ಬರುವ 7,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿರಲಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು 40 ನಿಮಿಷಗಳಲ್ಲಿ ಶೇ. 50 ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ.