Tecno Spark 9T
ಭಾರತದಲ್ಲಿ ಬಜೆಟ್ ಬೆಲೆಯ ಫೋನ್ಗಳಿಗ (Budget Phone) ಎಲ್ಲಿಲ್ಲದ ಬೇಡಿಕೆ ಇದೆ. 15,000, 10,000 ರೂ. ಒಳಗಡೆ ಆಕರ್ಷಕ ಫೀಚರ್ಗಳುಳ್ಳ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಯಿತು ಎಂದಾದರೆ ಅದು ಎಗ್ಗಿಲ್ಲದೆ ಸೇಲ್ ಕಾಣುತ್ತದೆ. ಹೀಗಾಗಿ ದೇಶದಲ್ಲಿ ಕಡಿಮೆ ಬೆಲೆಯ ಫೋನ್ಗಳ ಬಿಡುಗಡೆ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಸಾಲಿಗೆ ಇದೀಗ ಟೆಕ್ನೋ ಕಂಪನಿ ಕೂಡ ಸೇರಿಕೊಂಡಿದೆ. ಹೌದು, ಪ್ರಸಿದ್ಧ ಟೆಕ್ನೋ ಕಂಪನಿ ದೇಶದಲ್ಲಿ ಹೊಸ ಟೆಕ್ನೋ ಸ್ಪಾರ್ಕ್ 9ಟಿ (Tecno Spark 9T) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಅಚ್ಚರಿ ಎಂಬಂತೆ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಈ ಸ್ಮಾರ್ಟ್ಫೋನ್ನಲ್ಲಿ (Smartphone) 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ನೀಡಲಾಗಿದೆ. ಅಷ್ಟೇ ಅಲ್ಲದೆ ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಹಾಗಾದ್ರೆ ಈ ಫೋನಿನ ಇತರೆ ಫೀಚರ್ಸ್ ಏನೇನು?, ಬೆಲೆ ಎಷ್ಟು? ಎಂಬುದನ್ನು ನೋಡೋಣ.
- ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 9,299 ರೂ. ನಿಗದಿ ಮಾಡಲಾಗಿದೆ.
- ಈ ಸ್ಮಾರ್ಟ್‌ಫೋನ್ ಅನ್ನು ನೀವು ಟರ್ಕೋಯಿಸ್ ಸಯಾನ್, ಅಟ್ಲಾಂಟಿಕ್ ಬ್ಲೂ, ಐರಿಸ್ ಪರ್ಪಲ್ ಮತ್ತು ಟಹೀಟಿ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಇನ್ನು ಟೆಕ್ನೋ ಸ್ಪಾರ್ಕ್ 9T ಆಗಸ್ಟ್ 5ರಿಂದ ಅಮೆಜಾನ್‌ನ್ ಸೈಟ್‌ನಲ್ಲಿ ತನ್ನ ಮೊದಲ ಸೇಲ್ ಕಾಣಲಿದೆ.
- ಈ ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080×2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
- ಮೀಡಿಯಾಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 11 ಅನ್ನು ಆಧರಿಸಿ HiOS 7.6 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 4GB RAM ಜೊತೆಗೆ 3GB ವರ್ಚುವಲ್ RAM ಅನ್ನು ವಿಸ್ತರಿಸಬಹುದಾಗಿದೆ.
- ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದಿದ್ದರೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಪೋಟ್ರೇಟ್ ಯೂನಿಟ್ ಮತ್ತು ಮೂರನೇ ಕ್ಯಾಮೆರಾ AI ಲೆನ್ಸ್ ಅನ್ನು ಒಳಗೊಂಡಿದೆ.
- ಹಿಂಭಾಗದಲ್ಲಿರುವ ಕ್ಯಾಮೆರಾಕ್ಕೆ ಎಲ್ಇಡಿ ಫ್ಲ್ಯಾಷ್ ನೀಡಲಾಗಿದೆ. ಇದಲ್ಲದೆ 8ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಫ್ರಂಟ್ ಫೇಸಿಂಗ್ ಸೆಲ್ಫಿ ಕ್ಯಾಮೆರಾ ಇದೆ.
- ಟೆಕ್ನೋ ಸ್ಪಾರ್ಕ್ 9T ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ಬ್ಲೂಟೂತ್ 5.0, ವೈಫೈ, ಯುಎಸ್‌ಬಿ ಸಿ ಪೋರ್ಟ್ ಬೆಂಬಲ ಪಡೆದುಕೊಂಡಿದೆ.