Tech Tips: ಕಾಲ್ ರೆಕಾರ್ಡ್ ಮಾಡಲು ಥರ್ಡ್ ಪಾರ್ಟಿ ಆ್ಯಪ್ ಬೇಡ: ಈ ಟ್ರಿಕ್ ಫಾಲೋ ಮಾಡಿ

Call Recording App: ನಿಮ್ಮ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಆಯ್ಕೆಯನ್ನು ನೀಡಿದ್ದರೂ ನೀವು ಕಾಲ್‌ ರೆಕಾರ್ಡಿಂಗ್‌ ಮಾಡಬಹುದಾಗಿದೆ. ಹಾಗಾದ್ರೆ ಗೂಗಲ್‌ ಪೋನ್‌ ಅಪ್ಲಿಕೇಶನ್‌ ಬಳಸಿಕೊಂಡು ಕರೆ ರೆಕಾರ್ಡ್‌ ಮಾಡುವುದು ಹೇಗೆ ಎಂಬುದನ್ನು ನೋಡೋಣ.

Tech Tips: ಕಾಲ್ ರೆಕಾರ್ಡ್ ಮಾಡಲು ಥರ್ಡ್ ಪಾರ್ಟಿ ಆ್ಯಪ್ ಬೇಡ: ಈ ಟ್ರಿಕ್ ಫಾಲೋ ಮಾಡಿ
Call Recording
Follow us
TV9 Web
| Updated By: Vinay Bhat

Updated on: Sep 25, 2022 | 6:04 AM

ಆ್ಯಂಡ್ರಾಯ್ಡ್‌ ಸ್ಮಾರ್ಟ್​​ಫೋನ್​​ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೆ ಗೂಗಲ್‌ (Goolge) ಹಲವು ಕ್ರಮಗಳನ್ನು ಕೈಗೊಂಡಿದ್ದು ಇದರಲ್ಲಿ ಪ್ರಮುಖವಾಗಿ ಕಾಲ್‌ ರೆಕಾರ್ಡಿಂಗ್‌ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಿದೆ. ಅಂದರೆ, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ. ಇದರಲ್ಲಿ ಟ್ರೂ ಕಾಲರ್ (True Caller) ಕೂಡ ಒಳಗೊಂಡಿದೆ. ಈಗ ಟ್ರೂ ಕಾಲರ್‌ ಅಪ್ಲಿಕೇಶನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಥರ್ಡ್ ಪಾರ್ಟಿ ವ್ಯಕ್ತಿಗಳಿಂದ ಅಭಿವೃದ್ಧಿಪಡಿಸಲಾದ ಧ್ವನಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬಳಕೆದಾರರ ಗೌಪ್ಯತೆಯ ಮೇಲೆ ಆಕ್ರಮಣ ಎಂದು ಪರಿಗಣಿಸಿ ಗೂಗಲ್ ಇಂತಹದೊಂದು ಮಹತ್ತರ ಕ್ರಮ ಕೈಗೊಂಡಿದೆ. ಆದರೆ, ನಿಮ್ಮ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಆಯ್ಕೆಯನ್ನು ನೀಡಿದ್ದರೂ ನೀವು ಕಾಲ್‌ ರೆಕಾರ್ಡಿಂಗ್‌ (Call Reocrding) ಮಾಡಬಹುದಾಗಿದೆ. ಹಾಗಾದ್ರೆ ಗೂಗಲ್‌ ಪೋನ್‌ ಅಪ್ಲಿಕೇಶನ್‌ ಬಳಸಿಕೊಂಡು ಕರೆ ರೆಕಾರ್ಡ್‌ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಲ್‌ ರೆಕಾರ್ಡ್‌ ಮಾಡುವ ಆಯ್ಕೆಯನ್ನು ಡಿಫಾಲ್ಟ್ ಆಗಿ ನೀಡಲಾಗಿದೆ. ಆದರೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಕಾಲ್‌ ರೆಕಾರ್ಡಿಂಗ್‌ ಆಯ್ಕೆಯನ್ನು ಹೊಂದಿಲ್ಲ ಎಂದಾದರೆ ಪ್ಲೇ ಸ್ಟೋರ್‌ನಿಂದ ಗೂಗಲ್​​ನ ಫೋನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರ ಮೂಲಕ ನಿಮ್ಮ ಕಾಲ್‌ ರೆಕಾರ್ಡ್‌ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಕ್ರಮ ಅನುಸರಿಸಿ.

  • ಇನ್​ಸ್ಟಾಲ್ ಆದ ಬಳಿಕ ಗೂಗಲ್‌ನ ಫೋನ್ ಅಪ್ಲಿಕೇಶನ್ ತೆರೆಯಿರಿ
  • ಇದರಲ್ಲಿ ಮೂರು-ಚುಕ್ಕೆಗಳ ಬಟನ್ > ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ.
  • ಇದೀಗ, ಕಾಲ್‌ ರೆಕಾರ್ಡಿಂಗ್‌ನಲ್ಲಿ ಮತ್ತೊಮ್ಮೆ ಟ್ಯಾಪ್ ಮಾಡಿ ಮತ್ತು “ನಿಮ್ಮ ಸಂಪರ್ಕಗಳಲ್ಲಿಲ್ಲದ ಸಂಖ್ಯೆಗಳು” ಅನ್ನು ಸಕ್ರಿಯಗೊಳಿಸಿ.
  • ಇದರಲ್ಲಿ ಆಟೋ-ಕಾಲ್‌ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ. ನೀವು ಅಪರಿಚಿತ ಸಂಖ್ಯೆಗಳನ್ನು ಮಾತ್ರ ರೆಕಾರ್ಡ್ ಮಾಡಲಾಗುತ್ತದೆ. ನಿಮ್ಮ ಫೋನ್‌ನಲ್ಲಿ ಸೇವ್‌ ಆಗಿರುವ ನಂಬರ್‌ನಿಂದ ಕರೆ ಬಂದರೆ ಕಾಲ್‌ ರೆಕಾರ್ಡಿಂಗ್‌ ಅನ್ನು ಆಕ್ಟಿವ್‌ ಮಾಡಬೇಕಾಗುತ್ತದೆ.

ಆಟೋ ರೆಕಾರ್ಡ್ ಆ್ಯಕ್ಟಿವ್ ಮಾಡುವುದು ಹೇಗೆ?

ಇದನ್ನೂ ಓದಿ
Image
ಫ್ಲಿಪ್​ಕಾರ್ಟ್​ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಐಫೋನ್ ಸರಣಿಗಳು: ಇಲ್ಲಿದೆ ಬೆಲೆಗಳ ಪಟ್ಟಿ
Image
5G Internet Launch: ಅ. 1ರಿಂದ ಭಾರತದಲ್ಲಿ 5G ಸೇವೆ ಆರಂಭ: ಪ್ರಧಾನಿ ಮೋದಿಯಿಂದ ಚಾಲನೆ
Image
Tecno Pova Neo 5G: ಭಾರತದಲ್ಲಿ ಅತಿ ಕಡಿಮೆ ದರಕ್ಕೆ ಆಕರ್ಷಕ 5G ಫೋನ್‌ ಬಿಡುಗಡೆ: ಯಾವುದು?, ಎಷ್ಟು ಬೆಲೆ?
Image
Realme Narzo 50i Prime: ರಿಯಲ್‌ ಮಿ ನಾರ್ಜೋ 50i ಪ್ರೈಮ್ ಫಸ್ಟ್ ಸೇಲ್: ಬಂಪರ್ ಆಫರ್ ಕೂಡ ಲಭ್ಯ
  • ಮೊದಲಿಗೆ ಗೂಗಲ್‌ ಫೋನ್ ಅಪ್ಲಿಕೇಶನ್ ತೆರೆಯಿರಿ > ಸೆಟ್ಟಿಂಗ್‌ಗಳು > ಕಾಲ್‌ ರೆಕಾರ್ಡಿಂಗ್.
  • ಇದೀಗ “ನಿಮ್ಮ ಸಂಪರ್ಕಗಳಲ್ಲಿ ಇಲ್ಲದ ಸಂಖ್ಯೆಗಳು” ಅನ್ನು ಟ್ಯಾಪ್ ಮಾಡಿ.
  • ನಂತರ “ಆಯ್ದ ಸಂಖ್ಯೆಗಳು” ಮೇಲೆ ಟ್ಯಾಪ್ ಮಾಡಿ > ಯಾವಾಗಲೂ ಆಯ್ಕೆಮಾಡಿದ ಸಂಖ್ಯೆಗಳನ್ನು ರೆಕಾರ್ಡ್ ಮಾಡಿ.
  • ಇದೀಗ “ಸಂಪರ್ಕವನ್ನು ಆರಿಸಿ” ಮೇಲೆ ಮತ್ತೊಮ್ಮೆ ಟ್ಯಾಪ್ ಮಾಡಿ.
  • ಈಗ ನಿಮ್ಮ ಫೋನ್‌ಗೆ ಬರುವ ಎಲ್ಲಾ ಅಪರಿಚಿತ ಸಂಖ್ಯೆಯ ಕರೆಗಳು ಮತ್ತು ನೀವು ಪಟ್ಟಿಯಲ್ಲಿ ಸೇರಿಸುವ ಕರೆಗಳು ಸ್ವಯಂಚಾಲಿತವಾಗಿ ರೆಕಾರ್ಡ್ ಆಗುತ್ತವೆ.

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ ನಿಜ ಹಾಗಂತೆ ಎಲ್ಲಾ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಪ್ಲಾಟ್‌ಫಾರ್ಮ್‌ನಿಂದ ಬ್ಯಾನ್‌ ಆಗುವುದಿಲ್ಲ. ಅಂದರೆ ಒನ್‌ಪ್ಲಸ್‌, ಶವೋಮಿ ಮತ್ತು ಸ್ಯಾಮ್‌ಸಂಗ್‌ ಕಂಪೆನಿಗಳು ನೀಡುವ ಇಂಟರ್‌ಬಿಲ್ಟ್‌ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳು ಬ್ಯಾನ್‌ ಆಗುವುದಿಲ್ಲ. ಇದಲ್ಲದೆ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸ್ವಂತ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ ಸಹ ಲಭ್ಯವಿರುತ್ತದೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್