Clubhouse App: ಕ್ಲಬ್​ ಹೌಸ್​ ಆ್ಯಪ್​ಗೆ ಅಂತೂ ಬಂತು ಬಹು ಬೇಡಿಕೆಯ ಫೀಚರ್; ಗ್ರಾಹಕರ ಆ ಮನವಿ ಏನು?

| Updated By: Srinivas Mata

Updated on: Jun 05, 2021 | 5:08 PM

ಬಹಳ ಮಂದಿ ಬಳಕೆದಾರರಿಂದ ಬೇಡಿಕೆಯಲ್ಲಿದ್ದ ಟ್ವಿಟ್ಟರ್, ಇನ್​ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಕ್ಲಬ್​ ಹೌಸ್​ ಆ್ಯಪ್​ಗೆ ಸೇರ್ಪಡೆ ಮಾಡಲು ಸಾಧ್ಬೇಯವಾಗಬೇಕು ಎಂಬುದು ಅಂತೂ ಸದ್ಯದಲ್ಲೇ ನಿಜವಾಗಲಿದೆ.

Clubhouse App: ಕ್ಲಬ್​ ಹೌಸ್​ ಆ್ಯಪ್​ಗೆ ಅಂತೂ ಬಂತು ಬಹು ಬೇಡಿಕೆಯ ಫೀಚರ್; ಗ್ರಾಹಕರ ಆ ಮನವಿ ಏನು?
ಸಾಂದರ್ಭಿಕ ಚಿತ್ರ
Follow us on

ಆಡಿಯೋ ಓನ್ಲಿ ಸೋಷಿಯಲ್ ನೆಟ್​ವರ್ಕಿಂಗ್ ಅಪ್ಲಿಕೇಷನ್ ಕ್ಲಬ್​ಹೌಸ್ ಕಳೆದ ತಿಂಗಳು ಅಂತೂ ಭಾರತದಲ್ಲಿ ಆಂಡ್ರಾಯಿಡ್​ನಲ್ಲಿ ಆರಂಭವಾಗಿದೆ. ಕ್ಲಬ್​ಹೌಸ್ ಆ್ಯಪ್ ಹೊಸ ಫೀಚರ್​ಗಳೊಂದಿಗೆ ಇರುವುದರಿಂದ ಡೌನ್​ಲೋಡ್​ ಪ್ರಮಾಣ ಹೆಚ್ಚಾಗಿದೆ. ಟ್ವಿಟ್ಟರ್​ ಸ್ಪೇಸ್​ಗಳಂಥ ಪ್ರತಿಸ್ಪರ್ಧಿಗಳ ಜತೆಗೆ ಸ್ಪರ್ಧಿಸುತ್ತಿದೆ. ಈಚಿನ ಟೌನ್​ಹಾಲ್ ಸಭೆಯಲ್ಲಿ ಕಂಪೆನಿ ಖಾತ್ರಿಪಡಿಸಿರುವ ಪ್ರಕಾರ, ಸದ್ಯದಲ್ಲೇ ಆಹ್ವಾನ ವ್ಯವಸ್ಥೆ (Invite system) ಕೊನೆಯಾಗಲಿದೆ. ಆಂಡ್ರಾಯಿಡ್ ಬಳಕೆದಾರರಿಗೆ ಕಂಪೆನಿಯಿಂದ ಹೊಸ ಅಪ್​ಡೇಟ್​ ಜಾರಿಗೆ ತರಲಾಗಿದೆ. ಈ ಅಪ್​ಡೇಟ್ ನಂತರ ಬಳಕೆದಾರರು ತಮ್ಮ ಇನ್​ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆ ಜತೆಗೆ ಪ್ರೊಫೈಲ್ ಸೇರ್ಪಡೆ ಮಾಡಬಹುದು. ಬಿಡುಗಡೆ ಮಾಡಿರುವ ಮಾಹಿತಿಯ ಅನುಸಾರ, ಈ ಫೀಚರ್​ ಬಗ್ಗೆ ಅತಿ ಹೆಚ್ಚು ಗ್ರಾಹರಿಂದ ಮನವಿ ಸಲ್ಲಿಸಲಾಗಿತ್ತು.

ಕ್ಲಬ್​ಹೌಸ್ ಪ್ರೊಫೈಲ್​ಗೆ ಟ್ವಿಟ್ಟರ್ ಮತ್ತು ಇನ್​ಸ್ಟಾಗ್ರಾಮ್ ಖಾತೆ ಸೇರ್ಪಡೆ ಮಾಡುವುದಕ್ಕೆ ಆ್ಯಪ್​ನಲ್ಲಿ ಇರುವಂಥ “Add Twitter” ಅಥವಾ “Add Instagram” ಆಯ್ಕೆಯ ಮೇಲೆ ಒತ್ತಬೇಕು. ಕಂಪೆನಿ ಹೇಳಿರುವಂತೆ, ನಾವು ತುಂಬ ಸ್ಪಷ್ಟವಾಗಿ ಹಾಗೂ ಗಟ್ಟಿಯಾಗಿ ಹೇಳುತ್ತಿದ್ದೇವೆ. ಇದು ಬಹಳ ಬೇಡಿಕೆಯಲ್ಲಿನ ಆಂಡ್ರಾಯಿಡ್ ಫೀಚರ್ ಹಾಗೂ ಅದೀಗ ಇಲ್ಲಿದೆ. ಸೋಷಿಯಲ್ ಖಾತೆಗಳನ್ನು ಪ್ರೊಫೈಲ್​ಗಳನ್ನು ಸೇರ್ಪಡೆ ಮಾಡುವುದರಿಂದ ಕ್ಲಬ್​ಹೌಸ್​ನಲ್ಲಿ ಜನರು ನಿಮ್ಮನ್ನು ತಿಳಿಯಲು ಹೆಚ್ಚು ಅನುಕೂಲ ಆಗುತ್ತದೆ. ನಿಮ್ಮ ಇತರ ಅಕೌಂಟ್​ಗಳನ್ನು ಅನುಸರಿಸಲು ಸಹಾಯ ಆಗುತ್ತದೆ ಎಂದು ಹೇಳಲಾಗಿದೆ.

ಇದರೊಂದಿಗೆ ಕ್ಲಬ್​ಹೌಸ್​ನಿಂದ ಕ್ಲಬ್​ಗಳು ಮತ್ತು ಸ್ಪೀಕರ್​ಗಳು ನೇರವಾಗಿ ತಮ್ಮ ರೂಮ್​ಗಳಿಂದ ಫಾಲೋ ಮಾಡಲು ಸುಲಭವಾಗುತ್ತದೆ. ಕೆಲವು ನಿಮಿಷಗಳ ಕಾಲ ರೂಮ್​ನಲ್ಲಿ ಇದ್ದ ಮೇಲೆ ಕ್ಲಬ್ ಅಥವಾ ಸ್ಪೀಕರ್​ಗಳನ್ನು ರೂಮ್​ನಲ್ಲಿ ಫಾಲೋ ಮಾಡುವುದಕ್ಕೆ ನೆನಪಿಸಲಾಗುತ್ತದೆ. ಸ್ಕ್ರೀನ್​ನ ಕೆಳಭಾಗದಲ್ಲಿ ಇದು ಕಾಣಿಸುತ್ತದೆ. “Follow” ಎಂಬುದರ ಮೇಲೆ ಒತ್ತಿದರೆ ಭವಿಷ್ಯದ ರೂಮ್​ಗಳನ್ನು ನೋಡಬಹುದು ಮತ್ತು ಅವರು ಯಾವಾಗೆಲ್ಲ ಲೈವ್ ಹೋಗುತ್ತಾರೆ ಆಗ ನೋಟಿಫಿಕೇಷನ್ ಬರುತ್ತದೆ.

ಕೊನೆಯದಾಗಿ, ಕ್ಲಬ್​ಹೌಸ್​ ಆ್ಯಪ್​ನಿಂದ ಆಂಡ್ರಾಯಿಡ್​ನಲ್ಲಿ ಕ್ಲಬ್​ಹೌಸ್ ಪೇಜ್​ ಮೂಲಕ ಮುಂದೆ ಇರುವ ಕಾರ್ಯಕ್ರಮಗಳನ್ನು ಸೇರಿಸಲಾಗುತ್ತದೆ. ಈಗಂತೂ ಒಂದಕ್ಕೂ ಹೆಚ್ಚಿನ ಕಾರ್ಯಕ್ರಮ ಇದ್ದಲ್ಲಿ ಸುಲಭವಾಗಿ ಕಂಡುಹಿಡಿಯಬಹುದು. ಕ್ಲಬ್ ಪೇಜ್​ಗೆ ಹೋಗಿ, ಎಲ್ಲ ಮುಂಬರುವ ಕಾರ್ಯಕ್ರಮಗಳನ್ನು ನೋಡಬಹುದು. ಒಂದಕ್ಕಿಂತ ಹೆಚ್ಚಿದ್ದಲ್ಲಿ ಸ್ಕ್ರಾಲ್ ಮಾಡಬಹುದು. ಒಂದು ವೇಳೆ ಕಾರ್ಯಕ್ರಮ ಆಸಕ್ತಿಕರವಾಗಿ ಇದ್ದಲ್ಲಿ ಗಂಟೆಯ ಗುರುತಿನ ಮೇಲೆ ಒತ್ತಿದರೆ, ಆ ಕಾರ್ಯಕ್ರಮ ಶುರುವಾಗುತ್ತಿದ್ದಂತೆಯೇ ಆ ಬಗ್ಗೆ ಮಾಹಿತಿ ಬರುತ್ತದೆ.

ಕ್ಲಬ್​ಹೌಸ್ ಎಂಬುದು ಇನ್ವಿಟೇಷನ್ ಓನ್ಲಿ ಸೋಷಿಯಲ್ ಮೀಡಿಯಾ ಆ್ಯಪ್. ಇದರ ಮೂಲಕವಾಗಿ ಚಾಟ್​ ರೂಮ್​ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಬಹುದು. ಇದರಲ್ಲಿ 5000 ಮಂದಿಯ ತನಕ ಒಂದು ಗುಂಪಾಗಿ ಚಾಟಿಂಗ್​ಗೆ ಅವಕಾಶ ಇದೆ. ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್​ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು. ಈ ಆ್ಯಪ್​ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ​

ಇದನ್ನೂ ಓದಿ: Clubhouse appನಲ್ಲಿ ಕಿಕ್ಕಿರಿದಿರುವ ಮಲಯಾಳಿಗಳದೇ ಪಾರಮ್ಯ; ಭಾರತದಲ್ಲಿ ಎಷ್ಟು ಡೌನ್​ಲೋಡ್ ಆಗಿದೆ ಗೊತ್ತಾ?

ಇದನ್ನೂ ಓದಿ: Clubhouse app: ಕ್ಲಬ್ ಹೌಸ್ ಆ್ಯಪ್ ಈಗ ಭಾರತದಲ್ಲೂ ಲಭ್ಯ; ಏನಿದರ ವೈಶಿಷ್ಟ್ಯ, ಯಾವುದಕ್ಕೆ ಪ್ರಯೋಜನ ಎಂಬ ಮಾಹಿತಿ ಇಲ್ಲಿದೆ

(Twitter, Instagram profile can add to Clubhouse audio only social media app)

Published On - 5:07 pm, Sat, 5 June 21