Vivo Y27: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯಿತು ವಿವೋ Y27 ಸ್ಮಾರ್ಟ್​ಫೋನ್: ಎಷ್ಟು ರೂ. ನೋಡಿ

|

Updated on: Jul 22, 2023 | 6:55 AM

ವಿವೋ Y27 ಭಾರತದಲ್ಲಿ 6GB+128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 14,999 ರೂ. ಆಗಿದೆ. ಈ ಫೋನಿನ ಬೆಲೆ, ಫೀಚರ್ಸ್, ಲಭ್ಯತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Vivo Y27: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಬಿಡುಗಡೆ ಆಯಿತು ವಿವೋ Y27 ಸ್ಮಾರ್ಟ್​ಫೋನ್: ಎಷ್ಟು ರೂ. ನೋಡಿ
Vivo Y27
Follow us on

ವಿದೇಶಿ ಮೂಲದ ಪ್ರಸಿದ್ಧ ವಿವೋ ಕಂಪನಿ (Vivo) ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು (Smartphones) ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಬಜೆಟ್ ಬೆಲೆಗೆ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಇರುವ ಮೊಬೈಲ್ ಲಾಂಚ್ ಮಾಡುವ ವಿವೋ ಇದೀಗ ಅಂಥಹದೆ ಮತ್ತೊಂದು ಫೋನ್ ಅನಾವರಣ ಮಾಡಿದೆ. ಇದರ ಹೆಸರು ವಿವೋ ವೈ27 (Vivo Y27). ಈ ಫೋನಿನ ಬೆಲೆ, ಫೀಚರ್ಸ್, ಲಭ್ಯತೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ವಿವೋ Y27 ಭಾರತದಲ್ಲಿ 6GB+128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 14,999 ರೂ. ಆಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಇ-ಸ್ಟೋರ್ ಸೇರಿದಂತೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಗೆ ಸಿಗುತ್ತಿದೆ. ಈ ಫೋನ್ ಗಾರ್ಡನ್ ಗ್ರೀನ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇದನ್ನೂ ಓದಿ
Best Camera Phones: ಮಾರುಕಟ್ಟೆಯಲ್ಲಿರುವ ಟ್ರೆಂಡಿಂಗ್ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Samsung Event: ಜುಲೈ 26ಕ್ಕೆ ಸ್ಯಾಮ್​ಸಂಗ್​ನಿಂದ ಅನ್​ಪ್ಯಾಕ್ಡ್ ಈವೆಂಟ್: ಗ್ಯಾಲಕ್ಸಿ Z ಫ್ಲಿಪ್ 5 ಬಿಡುಗಡೆ
Infinix GT 10 Pro: ಬಣ್ಣ ಬದಲಾಗುವ ಬ್ಯಾಕ್ ಪ್ಯಾನಲ್: ಇನ್ಫಿನಿಕ್ಸ್ ಜಿಟಿ 10 ಪ್ರೊ ಬಗ್ಗೆ ಹೊರಬಿತ್ತು ಮತ್ತೊಂದು ನ್ಯೂಸ್
Nothing Phone 2 Sale: ಇದೀಗ ನಥಿಂಗ್ ಫೋನ್ 2 ಖರೀದಿಗೆ ಲಭ್ಯ: ಸೋಲ್ಡ್​ಔಟ್ ಆಗುವ ಮುನ್ನ ಕಡಿಮೆ ದರಕ್ಕೆ ಖರೀದಿಸಿ

Smartphone Symbols: ಸ್ಮಾರ್ಟ್​ಫೋನ್​ನಲ್ಲಿ ತೋರಿಸುವ ಈ ಸಿಂಬಲ್​ಗಳ ಬಗ್ಗೆ ನಿಮಗೆಷ್ಟು ಗೊತ್ತು?: ಇದರ ಅರ್ಥವೇನು?

ಫೀಚರ್ಸ್ ಏನಿದೆ?:

  • ಡಿಸ್ ಪ್ಲೇ: ವಾಟರ್‌ಡ್ರಾಪ್ ನಾಚ್‌ನೊಂದಿಗೆ 6.64-ಇಂಚಿನ IPS LCD FHD+ ಡಿಸ್ ಪ್ಲೇ
  • ಹಿಂದಿನ ಕ್ಯಾಮೆರಾಗಳು: 50 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ + 2 ಮೆಗಾ ಪಿಕ್ಸೆಲ್ ಬೊಕೆ ಕ್ಯಾಮೆರಾ
  • ಸೆಲ್ಫಿ ಕ್ಯಾಮೆರಾ: ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್
  • ಪ್ರೊಸೆಸರ್: ಮೀಡಿಯಾ ಟೆಕ್ ಹೆಲಿಯೊ ಜಿ85
  • OS: ಆಂಡ್ರಾಯ್ಡ್ 13 ಆಧಾರಿತ FunTouch OS 13
  • ಬ್ಯಾಟರಿ: 44W ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಇದೆ
  • IP ರೇಟಿಂಗ್: IP54 ರೇಟಿಂಗ್, ಅಂದರೆ ಇದು ಸಣ್ಣ ಪ್ರಮಾಣದ ಧೂಳು ಮತ್ತು ಕಣಗಳಿಂದ ರಕ್ಷಿಸುತ್ತದೆ
  • ಇತರ ವೈಶಿಷ್ಟ್ಯಗಳು: ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್, ಬ್ಲೂಟೂತ್ 5.0, ವೈ-ಫೈ 2.4 GHz / 5 GHz, USB ಟೈಪ್-C ಪೋರ್ಟ್

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ