Smartphone Symbols: ಸ್ಮಾರ್ಟ್​ಫೋನ್​ನಲ್ಲಿ ತೋರಿಸುವ ಈ ಸಿಂಬಲ್​ಗಳ ಬಗ್ಗೆ ನಿಮಗೆಷ್ಟು ಗೊತ್ತು?: ಇದರ ಅರ್ಥವೇನು?

ಕೆಲವೊಂದು ಬಾರಿ ನಿಮಗೆ ತಿಳಿಯದೆ ಇರುವ, ನೋಡದೇ ಇರುವ ಸಿಂಬಲ್ ಕೂಡ ಫೋನ್ ಡಿಸ್ ಪ್ಲೇ ಮೇಲ್ಬಾಗದಲ್ಲಿ ಗೋಚರಿಸುತ್ತಿರುತ್ತದೆ. ಹಾಗಾದರೆ, ಈ ಸ್ಮಾರ್ಟ್​ಫೋನ್​ಗಳಲ್ಲಿರುವ ಸಿಂಬಲ್​ ಏನನ್ನು ಸೂಚಿಸುತ್ತದೆ?, ಅದರ ಅರ್ಥವೇನು? ಎಂಬುದನ್ನು ನೋಡೋಣ

Smartphone Symbols: ಸ್ಮಾರ್ಟ್​ಫೋನ್​ನಲ್ಲಿ ತೋರಿಸುವ ಈ ಸಿಂಬಲ್​ಗಳ ಬಗ್ಗೆ ನಿಮಗೆಷ್ಟು ಗೊತ್ತು?: ಇದರ ಅರ್ಥವೇನು?
Smartphone symbol
Follow us
Vinay Bhat
|

Updated on: Jul 21, 2023 | 12:03 PM

ಇಂದಿನ ವೇಗದ ಜಗತ್ತಿನಲ್ಲಿ ಸ್ಮಾರ್ಟ್​ಫೋನ್ (Smartphone) ಬಳಸದೆ ಇರುವವ ಸಂಖ್ಯೆ ತೀರಾ ಕಡಿಮೆ. ಇತ್ತೀಚೆಗಷ್ಟೆ ಪ್ರಕಟವಾದ ವರದಿಯೊಂದರ ಪ್ರಕಾರ ಇಡೀ ವಿಶ್ವದಲ್ಲಿ ಶೇ. 93 ರಷ್ಟು ಮಂದಿ ಸ್ಮಾರ್ಟ್​ಫೋನ್​ಗಳನ್ನು ಹೊಂದಿದ್ದಾರಂತೆ. ಸ್ಮಾರ್ಟ್​ಫೋನ್ ಹೊಂದಿರುವವರು ತಮ್ಮ ಡಿಸ್ ಪ್ಲೇ (Display) ಮೇಲೆ ಅನೇಕ ಐಕಾನ್ ಅಥವಾ ಸಿಂಬಲ್​ಗಳನ್ನು ನೀಡಿರುತ್ತೀರಿ. ಕೆಲವೊಂದು ಬಾರಿ ನಿಮಗೆ ತಿಳಿಯದೆ ಇರುವ, ನೋಡದೇ ಇರುವ ಸಿಂಬಲ್ ಕೂಡ ಫೋನ್ ಡಿಸ್ ಪ್ಲೇ ಮೇಲ್ಬಾಗದಲ್ಲಿ ಗೋಚರಿಸುತ್ತಿರುತ್ತದೆ. ಹಾಗಾದರೆ, ಈ ಸ್ಮಾರ್ಟ್​ಫೋನ್​ಗಳಲ್ಲಿರುವ ಸಿಂಬಲ್ (Symbol)​ ಏನನ್ನು ಸೂಚಿಸುತ್ತದೆ?, ಅದರ ಅರ್ಥವೇನು? ಎಂಬುದನ್ನು ನೋಡೋಣ.

ಬ್ಯಾಟರಿ ಐಕಾನ್:

ಬ್ಯಾಟರಿ ಐಕಾನ್

ಮೇಲೆ ತೋರಿಸುವ ಚಿತ್ರದಲ್ಲಿರುವ ಐಕಾನ್ ನಿಮ್ಮ ಸ್ಮಾರ್ಟ್​ಫೋನ್​ನ ಬ್ಯಾಟರಿ ಬಗ್ಗೆ ಮಾಹಿತಿ ನೀಡುತ್ತದೆ. ಬಹುಶಃ ಇದರ ಬಗ್ಗೆ ಎಲ್ಲರಿಗೂ ತಿಳಿದಿರಬಹುದು. ನೀವು ಮೊಬೈಲ್ ಚಾರ್ಜ್​ಗೆ ಹಾಕಿದಾಗ ಇದು ಎಷ್ಟು ಶೇಕಡ ಚಾರ್ಜ್ ಆಗಿದೆ ಎಂಬ ಸಿಂಬಲ್ ಅನ್ನು ಪ್ರದರ್ಶಿಸುತ್ತದೆ. ಬ್ಯಾಟರಿ ಸೇವ್ ಮೋಡ್, ಲೋ ಬ್ಯಾಟರಿ ಮೋಡ್ ಸಿಂಬಲ್ ಅನ್ನು ಕೂಡ ನೀವು ಕಾಣಬಹುದು.

ಇದನ್ನೂ ಓದಿ
Image
Honor Play 40C: ಹಾನರ್ ಕಂಪನಿ ಬಿಡುಗಡೆ ಮಾಡಿದೆ ಬಜೆಟ್ ದರದ ಸೂಪರ್ ಸ್ಮಾರ್ಟ್​ಫೋನ್
Image
Apple iPhone: 200 ಪಟ್ಟು ಅಧಿಕ ಮೊತ್ತಕ್ಕೆ ಆ್ಯಪಲ್ ಐಫೋನ್ ಹರಾಜು!
Image
Realme C53: 10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ
Image
Tech Tips: ನಿಮ್ಮ ಸ್ಮಾರ್ಟ್​ಫೋನ್ ಡಿಸ್ ಪ್ಲೇ ಸ್ಕ್ರಾಚ್ ಆಗಿದ್ರೆ ಜಸ್ಟ್ ಹೀಗೆ ಮಾಡಿ ಸಾಕು

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್: ಸೇವ್ ಮಾಡದೆ ಅನೌನ್ ನಂಬರ್​ಗೆ ಮೆಸೇಜ್ ಮಾಡಿ

ನೆಟ್​ವರ್ಕ್ ಮತ್ತು ಡೇಟಾ ಐಕಾನ್:

ನೆಟ್​ವರ್ಕ್ ಮತ್ತು ಡೇಟಾ ಐಕಾನ್

ಈ ಚಿತ್ರದಲ್ಲಿ ನೆಟ್​ವರ್ಕ್​ಗೆ ಸಂಬಂಧಿಸಿದ ಐಕಾನ್ ಅನ್ನು ಕಾಣಬಹುದು. ವಿರುದ್ಧ ದಿಕ್ಕಿನಲ್ಲಿ ತೋರಿಸುವ ಲಂಬ ಬಾಣಗಳು ಮೊಬೈಲ್ ಡೇಟಾದ ಮಾಹಿತಿ ನೀಡುತ್ತದೆ. ನಾಲ್ಕು ಗೆರೆಗಳು ನಿಮ್ಮ ಸಿಗ್ನಲ್ ಸ್ಟ್ರೆಂತ್ ಅನ್ನು ತೋರಿಸುತ್ತದೆ. ಇದರ ಮೇಲೆ 5ಜಿ ಎಂದು ಬರೆದಿದ್ದರೆ, ನಿಮ್ಮ ಮೊಬೈಲ್​ನಲ್ಲಿ 5ಜಿ ನೆಟ್​ವರ್ಕ್ ಸಕ್ರಿಯವಾಗಿದೆ ಎಂಬುದನ್ನು ಸೂಚಿಸುತ್ತದೆ. ವೃತ್ತಾಕಾರದ ಒಳಗಡೆ ಪ್ಲಸ್ ಸಿಂಬಲ್ ಕಾಣಿಸಿಕೊಂಡರೆ ಅದು ಡೇಟಾ ಉಳಿಸುವಿಕೆಯನ್ನು ಸಕ್ರಿಯಗೊಳಿಸಲಾಗಿದೆ ಎಂದು ಅರ್ಥ.

ಕರೆಗಳು, ವಾಲ್ಯೂಮ್ ಮತ್ತು ಅಲಾರಮ್‌:

ಕರೆಗಳು, ವಾಲ್ಯೂಮ್ ಮತ್ತು ಅಲಾರಮ್‌

ಕಾಲ್ ಮಾಡುವ ಸಂದರ್ಭ ನಿಮ್ಮ ಮೈಕ್ರೊಫೋನ್ ಮ್ಯೂಟ್ ಆಗಿದ್ದರೆ ಸ್ಟೇಟಸ್ ಬಾರ್‌ನಲ್ಲಿ ಕ್ರಾಸ್-ಔಟ್ ಮೈಕ್ರೊಫೋನ್ ಸಿಂಬಲ್ ಕಾಣಿಸುತ್ತದೆ. ಸ್ಪೀಕರ್‌ ಸಿಂಬಲ್ ಮೇಲೆ ಗೆರೆಯಿದ್ದು ಅಂಕುಡೊಂಕಾದ ರೇಖೆಯನ್ನು ಕಂಡರೆ ನಿಮ್ಮ ಮೊಬೈಲ್ ವೈಬ್ರೇಟ್ ಮೋಡ್​ನಲ್ಲಿದೆ ಎಂದರ್ಥ. ಸ್ಟೇಟಸ್ ಬಾರ್‌ನ ಬಲಭಾಗದಲ್ಲಿರುವ ಸಣ್ಣ ಅಲಾರಾಂ ಗಡಿಯಾರವಿದ್ದರೆ ನಿಮ್ಮ ಫೋನ್‌ನಲ್ಲಿ ನೀವು ಅಲಾರಾಂ ಆಯ್ಕೆಯನ್ನು ಆನ್ ಮಾಡಿರುತ್ತೀರಿ.

WhatsApp Down: ಮಧ್ಯರಾತ್ರಿ ವಾಟ್ಸ್​ಆ್ಯಪ್ ಬಳಕೆದಾರರಿಂದ ಏಕಾಏಕಿ ದೂರು: ಬೆಳಗಾಗುವಷ್ಟರಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ನೀಡಿದ ಕಂಪನಿ

ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ಸಿಂಬಲ್:

ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ಸಿಂಬಲ್

ನಿಮ್ಮ ಸ್ಮಾರ್ಟ್​ಫೋನ್ ಡಿಸ್ ಪ್ಲೇಯಲ್ಲಿ ಮೇಲಿನ ಬಾಣದ ಗುರುತು ಕಂಡರೆ ಗೂಗಲ್ ಡ್ರೈವ್‌ಗೆ PDF ನಂತಹ ಫೈಲ್ ಅನ್ನು ಅಪ್‌ಲೋಡ್ ಮಾಡುತ್ತಿದ್ದೀರಿ ಎಂದರ್ಥ. ಕೆಳಗಿನ ಬಾಣ ಇದ್ದರೆ ಡೌನ್‌ಲೋಡ್ ಅನ್ನು ಸೂಚಿಸುತ್ತದೆ. ಅಂತೆಯೆ ರೈಟ್ ಮಾರ್ಕ್ ಸಿಂಬಲ್ ಕಂಡುಬಂದರೆ ನಿಮ್ಮ ಫೈಲ್ ಡೌನ್​ಲೋಡ್ ಆಗಿರುತ್ತದೆ.

ಸಂಪರ್ಕ ಚಿಹ್ನೆಗಳು:

ಸಂಪರ್ಕ ಚಿಹ್ನೆಗಳು

ನಿಮ್ಮ ಸ್ಮಾರ್ಟ್​ಫೋನ್ ಬ್ಲೂಟೂತ್ ಮೂಲಕ ಇನ್ನೊಂದಕ್ಕೆ ಮೊಬೈಲ್​ಗೆ ಕನೆಕ್ಟ್ ಆಗಿದ್ದರೆ B ಐಕಾನ್ ಕಾಣಿಸಿಕೊಳ್ಳುತ್ತದೆ. ಯುಎಸ್‌ಬಿ ಚಿಹ್ನೆಯು ಗೋಚರಿಸಿದರೆ, ಯುಎಸ್‌ಬಿ ಸಂಪರ್ಕದ ಮೂಲಕ ನಿಮ್ಮ ಫೋನ್ ಇನ್ನೊಂದು ಸಾಧನಕ್ಕೆ ಸಂಪರ್ಕಗೊಂಡಿದೆ ಎಂದರ್ಥ. ನೀವು ನಿಮ್ಮ ಫೋನ್‌ನಿಂದ ನಿಮ್ಮ ನೆಟ್‌ವರ್ಕ್‌ನಲ್ಲಿರುವ ಇನ್ನೊಂದು ಸಾಧನಕ್ಕೆ ಕನೆಕ್ಟ್ ಮಾಡಿದಾಗ ಸಾಮಾನ್ಯವಾಗಿ ಬಾಕ್ಸ್‌ನ ಒಂದು ಮೂಲೆಯಲ್ಲಿ ವೈ-ಫೈ ಚಿಹ್ನೆ ಕಾಣಿಸಿಕೊಳ್ಳುತ್ತದೆ. ವಿಮಾನ ಐಕಾನ್ ಎಂದರೆ ನೀವು ಯಾವುದೇ ಸಂಪರ್ಕಗಳನ್ನು ಹೊಂದಿಲ್ಲ ಎಂದರ್ಥ. ಇದು ಏರ್‌ಪ್ಲೇನ್ ಮೋಡ್ ಅನ್ನು ಪ್ರತಿನಿಧಿಸುತ್ತದೆ. ಇದನ್ನು ಆನ್ ಮಾಡಿದರೆ ಕರೆ ಬರುವುದು ಅಥವಾ ಮಾಡಲು, ಮೆಸೇಜ್ ಕಳುಹಿಸಲು ಯಾವುದೂ ಸಾಧ್ಯ ಆಗುವುದಿಲ್ಲ.

ಇತರ ಚಿಹ್ನೆಗಳು:

ಇತರ ಚಿಹ್ನೆಗಳು

ಲೊಕೇಶನ್ ಸಿಂಬಲ್ ಎಲ್ಲರಿಗೂ ತಿಳಿದಿದೆ. ಇದನ್ನು ಆನ್ ಮಾಡುವ ಮೂಲಕ ಗೂಗಲ್ ಮ್ಯಾಪ್ ಉಪಯೋಗಿಸಬಹುದು. ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಅರ್ಧ ಚಂದ್ರನ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಇದ್ದರೆ ಡಾರ್ಕ್ ಮೋಡ್ ಆನ್ ಆಗಿದೆ ಎಂದರ್ಥ. ಇದನ್ನು ಆನ್ ಮಾಡಿದರೆ ನಿಮ್ಮ ಫೋನ್ ಸಂಪೂರ್ಣವಾಗಿ ಬಿಳಿ ಬಣ್ಣದಿಂದ ಗಾಢ ಬೂದು ಬಣ್ಣಕ್ಕೆ ತಿರುಗುತ್ತದೆ. ಫೋಕಸ್ ಮೋಡ್ ಎಂಬ ಆಯ್ಕೆಯ ಮೂಲಕ ನಿಮ್ಮ ಫೋನಿಗೆ ಬರುವ ನೋಟಿಫಿಕೇಶನ್ ಅನ್ನು ಆಯ್ದ ಆ್ಯಪ್​ಗಳಿಂದ ನಿರ್ಬಂಧಿಸಲು ಸಾಧ್ಯವಾಗುತ್ತದೆ. ಡು ನಾಟ್ ಡಿಸ್ಟರ್ಬ್ ಎಂದ ಐಕಾನ್ ನಿಮ್ಮ ಮೊಬೈಲ್​ಗೆ ಬರುವ ಎಲ್ಲ ನೋಟಿಫಿಕೇಶನ್ ಅನ್ನು ಬ್ಲಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು