WhatsApp Web: ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ

|

Updated on: Jul 10, 2023 | 11:07 AM

WhatsApp Web: ಈವರೆಗೆ ವಾಟ್ಸ್​ಆ್ಯಪ್ ವೆಬ್​ನಲ್ಲಿ ಲಾಗಿನ್ ಆಗಬೇಕು ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಇದಕ್ಕೆ ಕ್ಯಾಮೆರಾ ಅವಶ್ಯಕ. ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸದವರು ಲಾಗಿನ್ ಆಗಲು ಕಷ್ಟ ಪಡುತ್ತಿದ್ದರು. ಈ ಬಗ್ಗೆ ಅನೇಕರು ದೂರು ಕೂಡ ನೀಡಿದ್ದರು.

WhatsApp Web: ವಾಟ್ಸ್​ಆ್ಯಪ್ ವೆಬ್ ಬಳಕೆದಾರರಿಗೆ ಭರ್ಜರಿ ಸುದ್ದಿ: ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ
Whatsapp Web
Follow us on

ಈ ಹಿಂದೆ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಹೆಚ್ಚು ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುತ್ತಿದ್ದ ವಾಟ್ಸ್​ಆ್ಯಪ್ ಇದೀಗ ವೆಬ್ (WhatsApp Web) ಬಳಕೆದಾರರಿಗೆ ಕೂಡ ಹೊಸ ಹೊಸ ಫೀಚರ್​ಗಳನ್ನು ನೀಡುತ್ತಿದೆ. ಇದಕ್ಕೆ ಕಾರಣ ವಾಟ್ಸ್​ಆ್ಯಪ್ ವೆಬ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆ ಆಗುತ್ತಿರುವುದು. ಇದನ್ನು ಮನಗಂಡು ಮೆಟಾ ಒಡೆತನದ ಪ್ರಸಿದ್ಧ ಮೆಸೀಜಿಂಗ್ ಅಪ್ಲಿಕೇಷನ್ ಇದೀಗ ಹೊಸ ಆಯ್ಕೆಯೊಂದನ್ನು ತರಲು ಸಜ್ಜಾಗಿದೆ. ವಾಟ್ಸ್​ಆ್ಯಪ್ ತನ್ನ ಬೀಟಾ ಚಾನಲ್‌ನಲ್ಲಿ ಈ ಕುರಿತ ಫೀಚರ್ ರಿಲೀಸ್ ಮಾಡಿದೆ. ಇದರ ಮೂಲಕ ಬಳಕೆದಾರರು ಇನ್ಮುಂದೆ ವಾಟ್ಸ್​ಆ್ಯಪ್ ವೆಬ್​ನಲ್ಲಿ ಮೊಬೈಲ್ ನಂಬರ್ (Mobile Number) ನಮೋದಿಸುವ ಮೂಲಕ ಲಾಗಿನ್ ಆಗಬಹುದಾಗಿದೆ.

ಈವರೆಗೆ ವಾಟ್ಸ್​ಆ್ಯಪ್ ವೆಬ್​ನಲ್ಲಿ ಲಾಗಿನ್ ಆಗಬೇಕು ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕಿತ್ತು. ಆದರೆ, ಇದಕ್ಕೆ ಕ್ಯಾಮೆರಾ ಅವಶ್ಯಕ. ಕ್ಯಾಮೆರಾ ಸರಿಯಾಗಿ ಕಾರ್ಯನಿರ್ವಹಿಸದವರು ಲಾಗಿನ್ ಆಗಲು ಕಷ್ಟ ಪಡುತ್ತಿದ್ದರು. ಈ ಬಗ್ಗೆ ಅನೇಕರು ದೂರು ಕೂಡ ನೀಡಿದ್ದರು. ಸದ್ಯ ಈ ಸಮಸ್ಯೆಗಳನ್ನು ಸರಿಪಡಿಸಲು ಕ್ಯೂಆರ್ ಕೋಡ್ ಅಥವಾ ಮೊಬೈಲ್ ನಂಬರ್ ಅನ್ನು ಹಾಕುವ ಮೂಲಕ ಲಾಗಿನ್ ಮಾಡಲು ಅವಕಾಶ ನೀಡುತ್ತಿದೆ.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ನಿರೀಕ್ಷೆಗೂ ಮೀರಿದ ಫೀಚರ್: ಚಾಟ್ ಲಿಸ್ಟ್​ನಲ್ಲಿ ಮಹತ್ವದ ಬದಲಾವಣೆ

ಇದನ್ನೂ ಓದಿ
Realme GT Neo 5 Pro: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಲಿಷ್ಠವಾದ ರಿಯಲ್‌ ಮಿ GT ನಿಯೋ 5 ಪ್ರೊ ಸ್ಮಾರ್ಟ್​ಫೋನ್
Samsung Event: ಜುಲೈ 26ಕ್ಕೆ ಸ್ಯಾಮ್​ಸಂಗ್​ನಿಂದ ಅತಿ ದೊಡ್ಡ ಈವೆಂಟ್: ಗ್ಯಾಲಕ್ಸಿ Z ಫೋಲ್ಡ್ ಸರಣಿ ಬಿಡುಗಡೆ
Amazon Prime Day: ಅಮೆಜಾನ್ ಪ್ರೈಮೆ ಡೇ ಸೇಲ್​ನಲ್ಲಿ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್ಸ್ ಇಲ್ಲಿದೆ ನೋಡಿ
Nothing Phone 1: ನಥಿಂಗ್ ಫೋನ್ 2 ಬಿಡುಗಡೆಗೆ ಕ್ಷಣಗಣನೆ: ನಥಿಂಗ್ ಫೋನ್ 1 ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್

WABetaInfo ಪ್ರಕಾರ, ಆಂಡ್ರಾಯ್ಡ್​ನ ಕೆಲ ಬೀಟಾ ಪರೀಕ್ಷಕರಿಗೆ ಈ ಫೀಚರ್ ಲಭ್ಯವಾಗುತ್ತಿದೆ. ವರದಿಯ ಪ್ರಕಾರ ‘2.23.14.18’ ಆವೃತ್ತಿ ಅಪ್ಡೇಟ್​ನಲ್ಲಿ ಈ ಆಯ್ಕೆ ಸಿಗಲಿದೆಯಂತೆ. ಕೆಲ ಅದೃಷ್ಟಶಾಲಿ ಬಳಕೆದಾರರಿಗೆ ಈ ಫೀಚರ್ ಈಗಾಗಲೇ ಲಭ್ಯವಾಗುತ್ತಿದೆ. ನಿಮಗೆ ಈ ಆಯ್ಕೆ ಲಭ್ಯವಿದೆಯೇ ಎಂದು ನೋಡಲು ಗೂಗಲ್ ಪ್ಲೇ ಸ್ಟೋರ್​ಗೆ ತೆರಳಿ ಅಪ್ಡೇಟ್ ಮಾಡುವ ಮೂಲಕ ಪರಿಶೀಲಿಸಬಹುದು.

ವಾಟ್ಸ್​ಆ್ಯಪ್ ವೆಬ್: ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಹೇಗೆ?:

  • ವಾಟ್ಸ್​ಆ್ಯಪ್ ವೆಬ್​ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • QR ಕೋಡ್‌ನಲ್ಲಿ ಕೆಳಗೆ ಇರಿಸಲಾಗಿರುವ ‘ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ’ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನೀವು ಲಿಂಕ್ ಮಾಡಲು ಬಯಸುವ ಖಾತೆಯ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದುವರಿಯಿರಿ
  • ಈಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ತೆರೆಯಿರಿ
  • ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಐಕಾನ್‌ನಿಂದ ‘ಲಿಂಕ್ ಮಾಡಲಾದ ಸಾಧನಗಳಿಗೆ’ ಹೋಗಿ
  • ‘ಲಿಂಕ್ ಎ ಡಿವೈಸ್’ ಮೇಲೆ ಟ್ಯಾಪ್ ಮಾಡಿ ಮತ್ತು ‘ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಿ’ ಆಯ್ಕೆಯ ಮೇಲೆ ಟ್ಯಾಪ್ ಮಾಡಿ
  • ಬ್ರೌಸರ್ ಪರದೆಯಲ್ಲಿ ಪ್ರದರ್ಶಿಸಲಾದ 8-ಅಕ್ಷರಗಳ ಕೋಡ್ ಅನ್ನು ನಮೂದಿಸಿದರೆ ಆಯಿತು

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ