ಆಂಡ್ರಾಯ್ಡ್-ಐಒಎಸ್ ಬಳಕೆದಾರರಿಗೆ ಹೊಸ ಆಯ್ಕೆ: ಕೂಡಲೇ ವಾಟ್ಸ್ಆ್ಯಪ್ ಅಪ್ಡೇಟ್ ಮಾಡಿ
WhatsApp HD Video Feature: ವಾಟ್ಸ್ಆ್ಯಪ್ ಫೋಟೋವನ್ನು HD ಯಲ್ಲಿ ಕಳುಹಿಸುವ ಆಯ್ಕೆ ನೀಡಿದ ಕೆಲವೇ ದಿನಗಳಲ್ಲಿ ಇದೀಗ ವಿಡಿಯೋವನ್ನು ಕೂಡ ಹೈ-ಕ್ವಾಲಿಟಿಯಲ್ಲಿ ಕಳುಹಿಸುವ ಆಯ್ಕೆ ನೀಡಿದೆ. ಈ ವಿಶೇಷ ಫೀಚರ್ ಸದ್ಯ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲೈವ್ ಆಗಿದೆ.
ವಾಟ್ಸ್ಆ್ಯಪ್ (WhatsApp) ಬಳಕೆದಾರರಿಗೆ ಈಗ HD ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಬಹುದಾದ ಆಯ್ಕೆಯನ್ನು ಮೆಟಾ ನೀಡಿದೆ. ಇದೀಗ ಬಳಕೆದಾರರು ಇತರರೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಬೇಕಾದರೆ ಗೂಗಲ್ ಡಾಕ್ಸ್ ಲಿಂಕ್‌ಗಳು ಅಥವಾ ಇತರ ಟ್ರಾಸ್ಫರ್ ಸೇವೆಗಳನ್ನು ಅವಲಂಬಿಸುವ ಅಗತ್ಯವಿಲ್ಲ. ವಾಟ್ಸ್ಆ್ಯಪ್ ಫೋಟೋವನ್ನು HD ಯಲ್ಲಿ ಕಳುಹಿಸುವ ಆಯ್ಕೆ ನೀಡಿದ ಕೆಲವೇ ದಿನಗಳಲ್ಲಿ ಇದೀಗ ವಿಡಿಯೋವನ್ನು ಕೂಡ ಹೈ-ಕ್ವಾಲಿಟಿಯಲ್ಲಿ ಕಳುಹಿಸುವ ಆಯ್ಕೆ ನೀಡಿದೆ. ಈ ವಿಶೇಷ ಫೀಚರ್ ಸದ್ಯ ಎಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲೈವ್ ಆಗಿದೆ.
ವಾಟ್ಸ್ಆ್ಯಪ್ನಲ್ಲಿ HD ವಿಡಿಯೋವನ್ನು ಕಳುಹಿಸುವುವ ವಿಧಾನ:
- ವಾಟ್ಸ್ಆ್ಯಪ್ನಲ್ಲಿ ಚಾಟ್ ತೆರೆಯಿರಿ ಮತ್ತು ಅಟ್ಯಾಚ್ಮೆಂಟ್ ಐಕಾನ್ > ಗ್ಯಾಲರಿ ಮೇಲೆ ಟ್ಯಾಪ್ ಮಾಡಿ.
- ನೀವು ಕಳುಹಿಸಲು ಬಯಸುವ ವಿಡಿಯೋವನ್ನು ಆಯ್ಕೆ ಮಾಡಿ ಮತ್ತು ಪ್ರಿವಿವ್ಯೂ ನೋಡಲು ಅದರ ಮೇಲೆ ಟ್ಯಾಪ್ ಮಾಡಿ.
- ಪರದೆಯ ಮೇಲ್ಭಾಗದಲ್ಲಿ ಸ್ಟಿಕ್ಕರ್, ಪಠ್ಯ ಮತ್ತು ಡ್ರಾಯಿಂಗ್ ಐಕಾನ್‌ಗಳ ಎಡಭಾಗದಲ್ಲಿ HD ಐಕಾನ್ ಕಾಣಿಸುತ್ತದೆ.
- HD ಗುಣಮಟ್ಟವನ್ನು ಆಯ್ಕೆಮಾಡಿ ಮತ್ತು ಹೆಚ್ಚಿದ ಫೈಲ್ ಗಾತ್ರವನ್ನು ಗಮನಿಸಿ, ನಂತರ ಡನ್ ಟ್ಯಾಪ್ ಮಾಡಿ.
- ವಿಡಿಯೋದಲ್ಲಿ ಏನಾದರು ಬದಲಾವಣೆಗಳು ಅಥವಾ ಎಡಿಟ್ ಮಾಡಿದ ನಂತರ, ಕೆಳಗಿನ ಬಲ ಮೂಲೆಯಲ್ಲಿರುವ ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ.
ಈ ಫೀಚರ್ನ ಮತ್ತೊಂದು ವಿಶೇಷತೆ ಎಂದರೆ, ಹೆಚ್ಡಿಯಲ್ಲಿ ಬಂದ ವಿಡಿಯೋವನ್ನು ಬಳಕೆದಾರರು ಡೌನ್‌ಲೋಡ್ ಮಾಡುವಾಗ ರೆಸಲ್ಯೂಶನ್ ಅನ್ನು ಕೂಡ ಆಯ್ಕೆ ಮಾಡಬಹುದು. HD ಯಲ್ಲಿ ವಿಡಿಯೋ ಮತ್ತು ಫೋಟೋ ಶೇರ್ ಆಯ್ಕೆ ವಾಟ್ಸ್ಆ್ಯಪ್ ವೆಬ್ ಆವೃತ್ತಿಯಲ್ಲಿ ಇನ್ನಷ್ಟೆ ಬರಬೇಕಿದೆ. ಆದಾಗ್ಯೂ, ಬಳಕೆದಾರರು ವೆಬ್ ಆವೃತ್ತಿಯ ಮೂಲಕ HD ಫೈಲ್‌ಗಳನ್ನು ಸ್ವೀಕರಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.
ಇದೀಗ ಖರೀದಿಗೆ ಸಿಗುತ್ತಿದೆ 108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G ಫೋನ್: ಆಫರ್ ಏನಿದೆ?
ಈ ವರ್ಷ ಒಂಧರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ನೀಡುತ್ತಿರುವ ವಾಟ್ಸ್ಆ್ಯಪ್ HD ಯಲ್ಲಿ ಫೋಟೋ-ವಿಡಿಯೋ ಹಂಚಿಕೊಳ್ಳಲು ಆಯ್ಕೆಯ ಜೊತೆಗೆ, ಈ ವರ್ಷ ಬಹು-ಫೋನ್ ಸಂಪರ್ಕ ಆಯ್ಕೆಯನ್ನು ಹೊರತಂದಿತ್ತು. ಹೆಚ್ಚು ಬೇಡಿಕೆಯಿರುವ ಈ ವೈಶಿಷ್ಟ್ಯವು ಬಳಕೆದಾರರಿಗೆ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ವಿವಿಧ ಸ್ಮಾರ್ಟ್‌ಫೋನ್‌ಗಳಲ್ಲಿ ಏಕಕಾಲದಲ್ಲಿ ಬಳಸಲು ಅನುಮತಿಸುತ್ತದೆ. ಇದರ ನಡುವೆ ಇನ್ನೂ ಅನೇಕ ಆಯ್ಕೆಗಳು ವಾಟ್ಸ್ಆ್ಯಪ್ನಲ್ಲಿ ಬರಲಿಕ್ಕಿದೆ.
72 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆ ಬ್ಯಾನ್
ವಾಟ್ಸ್ಆ್ಯಪ್ ಕಳೆದ ಜುಲೈ ತಿಂಗಳಲ್ಲಿ ಬರೋಬ್ಬರಿ 72 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಜುಲೈ 01-31ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 7,228,000 ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ