ತನ್ನ ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಫೇಸ್ಬುಕ್ (Facebook) ಒಡೆತನದ ವಾಟ್ಸ್ಆ್ಯಪ್ (WhatsApp) ಮೆಸೇಜಿಂಗ್ ಅಪ್ಲಿಕೇಶನ್ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್ಗಳನ್ನು ನೀಡಲು ಸಜ್ಜಾಗಿದೆ. ಈಗಾಗಲೇ ವಾಟ್ಸ್ಆ್ಯಪ್ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ ಹೀಗೆ ಅನೇಕ ಹೊಸ ಹೊಸ ಫೀಚರ್ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್ಆ್ಯಪ್ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆ ನೀಡಲು ಮುಂದಾಗಿದೆ. ಅದುವೇ ವಾಟ್ಸ್ಆ್ಯಪ್ Pause ಫೀಚರ್ (Whatsapp Pause Feature).
ಹೌದು, ವಾಟ್ಸ್ಆ್ಯಪ್ನಲ್ಲಿ ಈಗೀಗ ವಾಯ್ಸ್ ನೋಟ್ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಾಟ್ಸ್ಆ್ಯಪ್ ವಾಯ್ಸ್ ಮೆಸೇಜ್ ಪ್ರಿಯರಿಗಾಗಿ ಹೊಸ ಆಯ್ಕೆ ನೀಡುತ್ತಿದೆ. ಈ ಹೊಸ ಅಪ್ಡೇಟ್ನಲ್ಲಿ ನೀವು ವಾಯ್ಸ್ ಮೆಸೇಜ್ ಕಳುಹಿಸುವಾಗ ಪಾಜ಼್ (Pause) ಮಾಡುವ ಆಯ್ಕೆ ಒದಗಿಸುತ್ತದೆ. ಅಂದರೆ ನೀವು ವಾಯ್ಸ್ ರೆಕಾರ್ಡಿಂಗ್ ಬಟನ್ ಪ್ರೆಸ್ ಮಾಡಿ ಅರ್ಧದಲ್ಲಿ ವಿರಾಮ ಪಡೆದು ನಂತರ ಅದನ್ನು ಮುಂದುವರೆಸಿ ಕಳುಹಿಸಬಹುದು.
ಸದ್ಯ ಈ ಹೊಸ ಆಯ್ಕೆ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ. ಇದರ ಜೊತೆಗೆ ವಾಟ್ಸ್ಆ್ಯಪ್ ಮತ್ತೊಂದು ಅಪ್ಡೇಟ್ ನೀಡಲು ಮುಂದಾಗಿದೆ. ಅದುವೇ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಫೀಚರ್. ವಾಬೇಟಾ ಇನ್ಫೋ ವರದಿ ಪ್ರಕಾರ, ವಾಟ್ಸ್ಆ್ಯಪ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಟ್ರಾನ್ಸ್ಕ್ರಿಪ್ಶನ್ ಎಂಬ ಫೀಚರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ವೈಶಿಷ್ಟ್ಯವು ಹೊಸತನದಿಂದ ಕೂಡಿದೆ ಎಂದಿದೆ.
ವಾಟ್ಸ್ಆ್ಯಪ್ ಪರಿಚಯಿಸಲಿರುವ ಹೊಸ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಫೀಚರ್ನಲ್ಲಿ ಬಳಕೆದಾರರಿಗೆ ಧ್ವನಿ ಸಂದೇಶದ ವಿಷಯವನ್ನು ಓದಬಲ್ಲ ರೂಪದಲ್ಲಿ ನೀಡುತ್ತದೆ. ಅಂದರೆ ಇದು ಇದು ಪಠ್ಯ ರೂಪದಲ್ಲಿ ಸಿಗಲಿದೆ. ಈ ಫೀಚರ್ ಅನ್ನು ಆಯ್ಕೆಯ ಆಧಾರ ಮೇಲೆ ನೀಡಲಾಗುತ್ತದೆ. ಅಂದರೆ ಈ ಫೀಚರ್ ಟ್ರಾನ್ಸ್ಕ್ರಿಪ್ಶನ್ ಮಾಡಲು ಅನುಮತಿಸಿದಾಗ ಮಾತ್ರ ಸೇವೆ ಸಿಗಲಿದೆ. ವಾಟ್ಸ್ಆ್ಯಪ್ ಕ್ಯಾಮೆರಾ, ಮೈಕ್ರೋಫೋನ್ಗೆ ಅನುಮತಿ ನೀಡಿದಂತೆ ಇದಕ್ಕೂ ಅನುಮತಿ ಕೇಳುತ್ತದೆ.
ಮಾಹಿತಿ ಪ್ರಕಾರ ವಾಟ್ಸ್ಆ್ಯಪ್ ಬಳಕೆದಾರರ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಅನ್ನು ಫೇಸ್ಬುಕ್ ಸರ್ವರ್ಗೆ ಹಂಚಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಕೇವಲ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವಲ್ಲದೆ ಐಫೊನ್ ಬಳಕೆದಾರರಿಗೂ ಈ ಸೇವೆ ಸಿಗಲಿದೆ. ಧ್ವನಿ ಸಂದೇಶ ಲಿಪ್ಯಾಂತರ ಮಾಡುವುದು, ಭಾಷಣವನ್ನು ಗುರುತಿಸುವ ಸೇವೆಯನ್ನು ಒದಗಿಸಲಿದೆ. ಇದು ಬಳಕೆದಾರರಿಗೆ ಹೆಚ್ಚು ಸಹಾಯಕವಾಗಲಿದೆ.
Amazon Great Indian Festival: ಅಮೆಜಾನ್ನಲ್ಲಿ ಫ್ರಿಡ್ಜ್ ಮೇಲೆ ಬಂಪರ್ ಡಿಸ್ಕೌಂಟ್: ಇಂದೇ ಖರೀದಿಸಿ
Realme GT Neo 2: ಬಿಡುಗಡೆಗೆ ಕೇವಲ ಮೂರೇ ದಿನ ಬಾಕಿ: ಈ ಸ್ಮಾರ್ಟ್ಫೋನ್ಗಾಗಿ ಕಾದುಕುಳಿತಿರುವ ಮೊಬೈಲ್ ಪ್ರಿಯರು
(WhatsApp is reportedly working on new pause feature a voice message while recording)
Published On - 1:32 pm, Mon, 11 October 21