WhatsApp New Feature: ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್

|

Updated on: Jun 18, 2023 | 1:04 PM

ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ತೆರೆಯುವ ಆಯ್ಕೆ ನೀಡುತ್ತಿದೆ. ಅಂದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಎರಡು ಸಿಮ್​ಗಳಿದ್ದರೆ ಈ ಎರಡೂ ಸಿಮ್​ಗೆ ಒಂದೇ ಮೊಬೈಲ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ತೆರೆಯಬಹುದು.

WhatsApp New Feature: ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್
WhatsApp Update
Follow us on

ಮೆಟಾ ಒಡೆತನದ ಪ್ರಸಿದ್ಧ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಬಳಸದೇ ಇರುವವರ ಸಂಖ್ಯೆ ತೀರಾ ಕಡಿಮೆ. ಕೇವಲ ಭಾರತದಲ್ಲೇ (India) ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಇದಕ್ಕಾಗಿ ಇದು ಇಂದು ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಆಗಿ ಬೆಳೆದು ನಿಂತಿದೆ. ಅನೇಕ ಅಪ್ಡೇಟ್​ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಅಪ್ಲಿಕೇಷನ್ ಆಗಿರುವ ವಾಟ್ಸ್​ಆ್ಯಪ್​ನಲ್ಲಿ ವಾರಕ್ಕೊಂದು ನೂತನ ಫೀಚರ್​ಗಳ ಕುರಿತು ಘೋಷಣೆ ಆಗುತ್ತಿದೆ. ಮೊನ್ನೆಯಷ್ಟೆ ಆಂಡ್ರಾಯ್ಡ್ (Android) ನವರಿಗೆ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಹೊರತರುವುದಾಗಿ ಹೇಳಿತ್ತು. ಇದೀಗ ಬಳಕೆದಾರರಿಗೆ ಖುಷಿ ನೀಡಲು ಮತ್ತೊಂದು ಬಹುನಿರೀಕ್ಷಿತ ಅಪ್ಡೇಟ್ ನೀಡುತ್ತಿದೆ.

ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ತೆರೆಯುವ ಆಯ್ಕೆ ನೀಡುತ್ತಿದೆ. ಅಂದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಎರಡು ಸಿಮ್​ಗಳಿದ್ದರೆ ಈ ಎರಡೂ ಸಿಮ್​ಗೆ ಒಂದೇ ಮೊಬೈಲ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ತೆರೆಯಬಹುದು. ಸದ್ಯ ವಾಟ್ಸ್​ಆ್ಯಪ್​ ಈ ಫೀಚರ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗುವ ನಿರೀಕ್ಷೆ ಇದೆ.

Redmi Buds 4 Active: ಸದ್ದು-ಗದ್ದಲವಿಲ್ಲದೆ ಮ್ಯೂಸಿಕ್ ಆನಂದ ಸವಿಯಲು ರೆಡ್ಮಿ ಬಡ್ಸ್

ಇದನ್ನೂ ಓದಿ
iQoo Neo 7 Pro: ಗೇಮಿಂಗ್ ಪ್ರಿಯರು ಸಿದ್ಧರಾಗಿ: ಬರುತ್ತಿದೆ ಬಲಿಷ್ಠ ಪ್ರೊಸೆಸರ್​ನ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್
Vivo Y35: ಹೊಸ ವಿವೋ ಫೋನ್ ಖರೀದಿಗೆ ₹1,500 ಡಿಸ್ಕೌಂಟ್ ಲಭ್ಯ
Xiaomi Pad 6: ಶಓಮಿ ರೆಡ್ಮಿ ಸೂಪರ್ ಫೀಚರ್ಸ್ ಹೊಸ ಪ್ಯಾಡ್ ಭಾರತದಲ್ಲಿ ಬಿಡುಗಡೆ
Tech Tips: ಸಿಮ್ ಕಾರ್ಡ್ ಅನ್ನು ಜಸ್ಟ್ ಹೀಗೆ ಮಾಡಿ: ನಿಮ್ಮ ಇಂಟರ್ನೆಟ್ ಹೈ-ಸ್ಪೀಡ್ ಆಗುತ್ತದೆ

ವಾಟ್ಸ್​ಆ್ಯಪ್ ಪರಿಚಯಿಸಲಿರುವ ಈ ಹೊಸ ಆಯ್ಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಖ್ಯ ಡಿವೈಸ್‌ಗೆ ಲಿಂಕ್ ಮಾಡಲಾದ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಅವರು ಡ್ಯುಯಲ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನೂತನ ಫೀಚರ್ ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ನ ಬಿಸಿನೆಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯ ಆವೃತ್ತಿಗೆ ಸಹ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಮರುವಿನ್ಯಾಸದ ಎಮೋಜಿ ಕೀಬೋರ್ಡ್:

ವಾಟ್ಸ್​ಆ್ಯಪ್ ಆಂಡ್ರಾಯ್ಡ್‌ನಲ್ಲಿ ಕೆಲ ಬೀಟಾ ಪರೀಕ್ಷಕರಿಗೆ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಹೊರತರುತ್ತಿದೆ. ಈ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್​ನಲ್ಲಿ ಸ್ಕ್ರಾಲ್ ಮಾಡುವ ಮೂಲಕ ಅನೇಕ ಆಯ್ಕೆ ಪಡೆಯಬಹುದು ಎಂದು WABetaInfo ವರದಿ ಮಾಡಿದೆ. ಜೊತೆಗೆ GIF, ಸ್ಟಿಕ್ಕರ್ ಮತ್ತು ಅವತಾರ್ ಎಂಬ ಕಾಲಮ್​ಗಳನ್ನು ಮೇಲ್ಭಾಗದಲ್ಲಿ ನೀಡಲಾಗಿದೆ. ಮರುವಿನ್ಯಾಸಗೊಳಿಸಲಾದ ಕೀಬೋರ್ಡ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಇದು ಕೆಲವೇ ವಾರಗಳಲ್ಲಿ ಎಲ್ಲ ಬಳಕೆದಾರರಿಗೆ ಸಿಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಕ್ರಾಪ್‌ ಟೂಲ್ ಆಯ್ಕೆ:

ಇದರ ಜೊತೆಗೆ ವಾಟ್ಸ್​ಆ್ಯಪ್ ಹೊಸ ಕ್ರಾಪ್‌ ಟೂಲ್ ಎಂಬ ಆಯ್ಕೆ ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್ ವಿಂಡೋಸ್‌ ಬಿಟಾದಲ್ಲಿ ಡ್ರಾಯಿಂಗ್‌ ಎಡಿಟರ್‌ಗಾಗಿ ಹೊಸ ಕ್ರಾಪ್‌ ಟೂಲ್ ತಯಾರಾಗುತ್ತಿದೆ. ಈ ಟೂಲ್‌ನಿಂದಾಗಿ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಇಮೇಜ್‌ಗಳನ್ನು ಕ್ರಾಪ್‌ ಮಾಡಬಹುದು. ಜೊತೆಗೆ ಇಮೇಜ್‌ಗಳನ್ನು ಎಡಿಟ್‌ ಮಾಡಲು ಸಾದ್ಯವಾಗಲಿದೆ. ಈ ಹಿಂದೆ ಬಳಕೆದಾರರು ತಮ್ಮ ಫೋಟೋಗಳನ್ನು ಶೇರ್‌ ಮಾಡುವ ಮೊದಲು ಕ್ರಾಪ್‌ ಮಾಡಬೇಕಾದರೆ ಬಾಹ್ಯ ಇಮೇಜ್ ಎಡಿಟಿಂಗ್ ಟೂಲ್‌ಗಳನ್ನು ಬಳಸಬೇಕಿತ್ತು. ಆದರೆ ಈ ಹೊಸ ಆಯ್ಕೆಯು ನಿಮಗೆ ಅಪ್ಲಿಕೇಶನ್‌ನಲ್ಲಿಯೇ ಇಮೇಜ್‌ ಕ್ರಾಪ್‌ ಮಾಡಲು ಅವಕಾಶ ನೀಡಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ