WhatsApp Tricks: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್ ಇದ್ದರೂ ಯಾರಿಗೂ ಗೊತ್ತಾಗಲ್ಲ: ಹೀಗೆ ಮಾಡಿದ್ರೆ ಸಾಕು

ಜಿಬಿ ವಾಟ್ಸ್ಆ್ಯಪ್ ಅನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಡೌನ್​ಲೋಡ್ ಆದ ಬಳಿಕ ಅದನ್ನು ಇನ್​ಸ್ಟಾಲ್ ಮಾಡಿಕೊಳ್ಳಿ. ಇದು ನೋಡಲು ಥೇಟ್ ವಾಟ್ಸ್ಆ್ಯಪ್ ಮಾದರಿಯಲ್ಲೇ ಇರುತ್ತದೆ.

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್ ಇದ್ದರೂ ಯಾರಿಗೂ ಗೊತ್ತಾಗಲ್ಲ: ಹೀಗೆ ಮಾಡಿದ್ರೆ ಸಾಕು
WhatsApp
Follow us
TV9 Web
| Updated By: Vinay Bhat

Updated on: Oct 17, 2021 | 2:23 PM

ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಹೊಸ ಹೊಸ ಅಪ್ಡೇಟ್​ಗಳುಳ್ಳ ನೂತನ ಫೀಚರ್​ಗಳನ್ನೂ ನೀಡುತ್ತಿದೆ. ವಿಶ್ವದಲ್ಲಿ 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್​ಗಳು ವಾಟ್ಸ್​ಆ್ಯಪ್​ನಲ್ಲಿ (WhatsApp) ಒಳಗೊಂಡಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಅನೇಕ ಟ್ರಿಕ್​ಗಳಿವೆ. ಇದಕ್ಕಾಗಿ ನೀವು ಥರ್ಡ್​ ಪಾರ್ಟಿ ಆ್ಯಪ್ (Third Party App) ಮೊರೆ ಹೋಗಬೇಕು. ಆದರೆ, ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್​ಲೋಡ್ (Download) ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು.

ಈ ಥರ್ಡ್ ಪಾರ್ಟಿ ಆ್ಯಪ್ ಅಷ್ಟೊಂದು ಸುರಕ್ಷಿತವಾಗಿದ್ದಲ್ಲ. ಯಾಕೆಂದರೆ ಇದು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಡೇಟಾವನ್ನು ವಶಕ್ಕೆ ಪಡೆಯಬಹುದು. ಹೀಗಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಡೌನ್​ಲೋಡ್ ಮಾಡುವ ಮುನ್ನ ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್​ಗಳನ್ನ ಆಯ್ಕೆ ಮಾಡಿಕೊಳ್ಳಿ.

ವಾಟ್ಸ್ಆ್ಯಪ್ ಅನ್ನು ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ಇರುವಂತೆ ಮಾಡಲು ಜಿಬಿ ವಾಟ್ಸ್ಆ್ಯಪ್ (GBWhatsApp) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಆದರೆ, ಇದು ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿಲ್ಲ. ಬದಲಾಗಿ ಕ್ರೋಮ್ ಅಥವಾ ಇತರೆ ಬ್ರೌಸರ್ ಮೂಲಕ ಡೌನ್​ಲೋಡ್ ಮಾಡಬೇಕು. ಇತ್ತೀಚೆಗಷ್ಟೆ ಜಿಬಿ ವಾಟ್ಸ್ಆ್ಯಪ್ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು ಅನೇಕರು ಬಳಸುತ್ತಿದ್ದಾರೆ.

ಜಿಬಿ ವಾಟ್ಸ್ಆ್ಯಪ್ ಅನ್ನು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಡೌನ್​ಲೋಡ್ ಆದ ಬಳಿಕ ಅದನ್ನು ಇನ್​ಸ್ಟಾಲ್ ಮಾಡಿಕೊಳ್ಳಿ. ಇದು ನೋಡಲು ಥೇಟ್ ವಾಟ್ಸ್ಆ್ಯಪ್ ಮಾದರಿಯಲ್ಲೇ ಇರುತ್ತದೆ. ಇನ್​ಸ್ಟಾಲ್ ಆದ ನಂತರ ಓಪನ್ ಮಾಡಿ ಬಲ ಬದಿಯ ಮೇಲಿರುವ ಮೂರು ಡಾಟ್​ಗಳ ಮೇಲೆ ಕ್ಲಿಕ್ ಮಾಡಿ.

ನಂತರ ಅಲ್ಲಿ ಪ್ರೈವಸಿ ಸೆಟ್ಟಿಂಗ್ಸ್ ಎಂಬ ಆಯ್ಕೆ ಇರುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದಾದ ಇಲ್ಲಿ ಅನೇಕ ಆಯ್ಕೆಗಳಿದ್ದು, ಕೆಳಗಡೆ ಬಂದರೆ Hide Online Status ಎಂದು ಬರೆದಿರುವುದು ಕಾಣಿಸುತ್ತದೆ. ಇದನ್ನು ಆ್ಯಕ್ಟೀವ್ ಮಾಡಿದರೆ ನೀವು ವಾಟ್ಸ್ಆ್ಯಪ್​ನಲ್ಲಿ ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುತ್ತದೆ.

Big Diwali Sale: ಫ್ಲಿಪ್​ಕಾರ್ಟ್​ನಲ್ಲಿ ದೀಪಾವಳಿ ಆಫರ್: ಕೇವಲ 6,499 ರೂ. ಗೆ ಖರೀದಿಸಿ ಈ ಸ್ಮಾರ್ಟ್​ಫೋನ್

OnePlus 9RT: ಭಾರತದಲ್ಲಿ ಕೇವಲ ಬೆಲೆಯಿಂದಲೇ ಸುದ್ದಿಯಾಗುತ್ತಿದೆ ಚೀನಾದಲ್ಲಿ ಧೂಳೆಬ್ಬಿಸಿದ ಈ ಸ್ಮಾರ್ಟ್​ಫೋನ್

(WhatsApp Tips Here is the tricks to Hide Online Status On WhatsApp)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್