WhatsApp Tricks: ನಿಮ್ಮ ವಾಟ್ಸ್​ಆ್ಯಪ್​ ಅನ್ನು ಕನ್ನಡ ಭಾಷೆಯಲ್ಲೇ ಬಳಸಿ: ಇಲ್ಲಿದೆ ನೋಡಿ ಟ್ರಿಕ್

WhatsApp Language: ವಾಟ್ಸ್​ಆ್ಯಪ್​​ ಭಾರತದ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ, ಮಲಯಾಳಂ ಜೊತೆಗೆ ಕನ್ನಡ ಭಾಷೆಗಳನ್ನ ಕೂಡ ಬೆಂಬಲಿಸುತ್ತದೆ.

WhatsApp Tricks: ನಿಮ್ಮ ವಾಟ್ಸ್​ಆ್ಯಪ್​ ಅನ್ನು ಕನ್ನಡ ಭಾಷೆಯಲ್ಲೇ ಬಳಸಿ: ಇಲ್ಲಿದೆ ನೋಡಿ ಟ್ರಿಕ್
whatsapp language
Edited By:

Updated on: Jan 03, 2022 | 2:54 PM

ಸ್ಮಾರ್ಟ್‌ಫೋನ್ (Smartphone) ಇದ್ದರೆ ಅದರಲ್ಲಿ ವಾಟ್ಸ್​ಆ್ಯಪ್ (WhatsApp) ಇದ್ದಂತೆಯೇ ಎನ್ನುವಷ್ಟು ಮಟ್ಟಿಗೆ ಇಂದು ಈ ಮೆಸೇಜಿಂಗ್ ಅಪ್ಲಿಕೇಷನ್ ಜನಪ್ರಿಯತೆ ಗಳಿಸಿದೆ. ಕೇವಲ ಭಾರತದಲ್ಲೇ ಸುಮಾರು 487 ಮಿಲಿಯನ್ ವಾಟ್ಸ್​ಆ್ಯಪ್ ಬಳಕೆದಾರರಿದ್ದಾರೆ. ಪ್ರತಿ ವರ್ಷವೂ ವಾಟ್ಸ್​ಆ್ಯಪ್ ಹೊಸ ಹೊಸ ಫೀಚರ್‌ಗಳನ್ನು (WhatsApp Features) ದೇಶದಲ್ಲಿ ಬಳಕೆದಾರರಿಗೆ ನೀಡುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ದೇಶದ ನೆಚ್ಚಿನ ಚಾಟ್ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿರುವ ವಾಟ್ಸ್​ಆ್ಯಪ್​​ ಭಾರತದ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದರಲ್ಲಿ ಹಿಂದಿ, ಬಂಗಾಳಿ, ಪಂಜಾಬಿ, ತೆಲುಗು, ಮರಾಠಿ, ತಮಿಳು, ಉರ್ದು, ಗುಜರಾತಿ, ಮಲಯಾಳಂ ಜೊತೆಗೆ ಕನ್ನಡ ಭಾಷೆಗಳನ್ನ ಕೂಡ ಬೆಂಬಲಿಸುತ್ತದೆ. ಹಾಗಾದ್ರೆ ವಾಟ್ಸ್​ಆ್ಯಪ್​​ನಲ್ಲಿ (WhatsApp Language) ಕನ್ನಡ ಭಾಷೆಗಳನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ಹಂತಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.

ಕನ್ನಡ ಭಾಷೆಗಳಲ್ಲಿ ವಾಟ್ಸ್​ಆ್ಯಪ್​​ ಬಳಸುವುದು ಹೇಗೆ?:

  • ವಾಟ್ಸ್​ಆ್ಯಪ್​​ ತೆರೆಯಿರಿ
  • ಮೆನು ಬಟನ್ ಟ್ಯಾಪ್ ಮಾಡಿ
  • ಸೆಟ್ಟಿಂಗ್‌ಗಳಿಗೆ ಹೋಗಿ
  • ಚಾಟ್‌ಗೆ ಹೋಗಿ ಮತ್ತು ಅಪ್ಲಿಕೇಶನ್ ಭಾಷೆಯನ್ನು ತೆರೆಯಿರಿ
  • ಕಾಣಿಸಿಕೊಳ್ಳುವ ಪಾಪ್‌ಅಪ್‌ನ ಕೆಳಗಡೆ ಕನ್ನಡ ಆಯ್ಕೆಯ ಭಾಷೆಯನ್ನು ಆರಿಸಿ

ಹೀಗೆ ಆಯ್ಕೆ ಮಾಡುವುದರಿಂದ ಕನ್ನಡ ಭಾಷೆಗಳಲ್ಲಿ ವಾಟ್ಸ್​ಆ್ಯಪ್​​ ಅನ್ನು ಬಳಸಬಹುದಾಗಿದೆ. ಆದರೂ ಬಳಕೆದಾರರು ಸಾಮಾನ್ಯ ನಿಯಮವನ್ನ ಮೊದಲು ಗಮನಿಸಬೇಕಾಗುತ್ತದೆ. ಮೊದಲಿಗೆ ವಾಟ್ಸ್​ಆ್ಯಪ್​​ ಫೋನ್‌ನ ಭಾಷೆಯನ್ನು ಅನುಸರಿಸುತ್ತದೆ. ಉದಾಹರಣೆಗೆ, ನಿಮ್ಮ ಫೋನ್‌ನ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಿದರೆ, ವಾಟ್ಸ್​ಆ್ಯಪ್​​ ಸ್ವಯಂಚಾಲಿತವಾಗಿ ಕನ್ನಡದಲ್ಲಿರುತ್ತದೆ. ಆದಾಗ್ಯೂ, ನಿಮ್ಮ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ ಅಥವಾ ಐಒಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಅವಲಂಬಿಸಿ ನೀವು ಸ್ವಲ್ಪ ವಿಭಿನ್ನ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಆಂಡ್ರಾಯ್ಡ್‌ನಲ್ಲಿ ವಾಟ್ಸ್​ಆ್ಯಪ್​​ ಭಾಷೆ ಸೆಟ್‌ ಮಾಡುವುದು ಹೇಗೆ?

  • ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ
  • ‘ಭಾಷೆಗಳು ಮತ್ತು ಇನ್‌ಪುಟ್’ ಟ್ಯಾಪ್ ಮಾಡಿ
  • ಮುಕ್ತ ಭಾಷೆಗಳು
  • ನೀವು ಆಯ್ಕೆ ಮಾಡಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ
  • ವಾಟ್ಸ್​ಆ್ಯಪ್​​ ತೆರೆಯಿರಿ ಮತ್ತು ಆ ಭಾಷೆಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪಠ್ಯವನ್ನು ಹುಡುಕಿ

ಆ್ಯಪಲ್ ಐಫೋನ್‌ನಲ್ಲಿ ಹೇಗೆ?:

  • ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ
  • ಟ್ಯಾಪ್ ಆನ್ ಜನರಲ್
  • ಭಾಷೆ ಮತ್ತು ಪ್ರದೇಶಕ್ಕೆ ಹೋಗಿ
  • ಐಫೋನ್ ಭಾಷೆಯನ್ನು ಆಯ್ಕೆಮಾಡಿ
  • ನೀವು ಆಯ್ಕೆ ಮಾಡಲು ಬಯಸುವ ಭಾಷೆಯನ್ನು ಆಯ್ಕೆ ಮಾಡಿ
  • ವಾಟ್ಸ್​ಆ್ಯಪ್​​ ತೆರೆಯಿರಿ ಮತ್ತು ಆ ಭಾಷೆಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಪಠ್ಯವನ್ನು ಹುಡುಕಿದರೆ ಆಯಿತು

BlackBerry OS: ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆ ಆಳುತ್ತಿದ್ದ ಈ ಫೋನ್ ನಾಳೆಯಿಂದ ಬಂದ್

(WhatsApp Tricks Here is the tricks to use WhatsApp in kannada and other regional languages)

TV9 Web

TV9 Kannada

Read More
Loading...
Unable to load recommendations.
Follow Us