AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Tricks: ವಾಟ್ಸ್ಆ್ಯಪ್​ನಲ್ಲಿ ಯಾರ ಮೆಸೇಜ್ ಬಂತೆಂದು ಫೋನ್ ನೋಡದೆಯೇ ತಿಳಿಯುವುದು ಹೇಗೆ?, ಇಲ್ಲಿದೆ ಟ್ರಿಕ್

Tech Tips and Tricks: ನೀವು ಕಸ್ಟಮ್ ರಿಂಗ್‌ಟೋನ್ ಸೆಟ್ಟಿಂಗ್‌ನೊಂದಿಗೆ, ಬೇರೆ ಬೇರೆ ಕಾಂಟೆಕ್ಟ್ ಅಥವಾ ಗ್ರೂಪ್ಗಳಿಗೆ ವಿಭಿನ್ನ ರಿಂಗ್‌ಟೋನ್‌ಗಳ ಆಯ್ಕೆ ಮಾಡಬಹುದು. ಇದರೊಂದಿಗೆ, ಫೋನ್ ನೋಡದೆಯೇ ಯಾರ ಸಂದೇಶ ಅಥವಾ ಕರೆ ಬಂದಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಕಸ್ಟಮ್ ರಿಂಗ್‌ಟೋನ್ ವೈಶಿಷ್ಟ್ಯವು ಬಳಕೆದಾರರಿಗೆ ವಿವಿಧ ಕಾಂಟೆಕ್ಟ್​ನಿಂದ ಬರುವ ಮೆಸೇಜ್​ಗಳು ಅಥವಾ ಕರೆಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ.

WhatsApp Tricks: ವಾಟ್ಸ್ಆ್ಯಪ್​ನಲ್ಲಿ ಯಾರ ಮೆಸೇಜ್ ಬಂತೆಂದು ಫೋನ್ ನೋಡದೆಯೇ ತಿಳಿಯುವುದು ಹೇಗೆ?, ಇಲ್ಲಿದೆ ಟ್ರಿಕ್
Whatsapp Tricks (1)
Vinay Bhat
|

Updated on:May 13, 2025 | 3:46 PM

Share

ಬೆಂಗಳೂರು (ಮೇ. 13): ವಾಟ್ಸ್​ಆ್ಯಪ್ (WhatsApp) ಅನ್ನು ಪ್ರಪಂಚದಾದ್ಯಂತ ಮೆಸೆಂಜರ್ ಅಪ್ಲಿಕೇಶನ್ ಆಗಿ ಬಳಸಲಾಗುತ್ತದೆ. ಇದು ಎರಡು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ವಾಟ್ಸ್​ಆ್ಯಪ್ ಜನರಿಗೆ ಸಂದೇಶಗಳು, ಧ್ವನಿ ಕರೆಗಳು ಮತ್ತು ವಿಡಿಯೋ ಕರೆಗಳ ಮೂಲಕ ಸಂಪರ್ಕ ಸಾಧಿಸಲು ಒಂದು ವೇದಿಕೆ ಆಗಿದೆ. ನೀವು ವಾಟ್ಸ್​ಆ್ಯಪ್​ನಲ್ಲಿ ಬಳಕೆದಾರರಿಂದ ಕರೆ ಅಥವಾ ಸಂದೇಶವನ್ನು ಸ್ವೀಕರಿಸಿದರೆ, ಫೋನ್ ನೋಡದೆಯೇ ತಿಳಿದುಕೊಳ್ಳಬಹುದು. ಈ ಟ್ರಿಕ್ ಅನೇಕರಿಗೆ ತಿಳಿದಿಲ್ಲ. ಇದಕ್ಕಾಗಿ, ನೀವು ಕಸ್ಟಮ್ ರಿಂಗ್‌ಟೋನ್ ಅನ್ನು ಹೊಂದಿಸಬಹುದು. ಇದನ್ನು ಸೆಟ್ ಮಾಡುವುದು ಕೂಡ ತುಂಬಾ ಸುಲಭ. ಅದು ಹೇಗೆ?, ಯಾವರೀತಿ ಸೆಟ್ ಮಾಡುವುದು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಕಸ್ಟಮ್ ರಿಂಗ್‌ಟೋನ್ ಸೆಟ್ಟಿಂಗ್‌ನೊಂದಿಗೆ, ಬೇರೆ ಬೇರೆ ಕಾಂಟೆಕ್ಟ್ ಅಥವಾ ಗ್ರೂಪ್​ಗಳಿಗೆ ವಿಭಿನ್ನ ರಿಂಗ್‌ಟೋನ್‌ಗಳ ಆಯ್ಕೆ ಮಾಡಬಹುದು. ಇದರೊಂದಿಗೆ, ಫೋನ್ ನೋಡದೆಯೇ ಯಾರ ಸಂದೇಶ ಅಥವಾ ಕರೆ ಬಂದಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಕಸ್ಟಮ್ ರಿಂಗ್‌ಟೋನ್ ವೈಶಿಷ್ಟ್ಯವು ಬಳಕೆದಾರರಿಗೆ ವಿವಿಧ ಕಾಂಟೆಕ್ಟ್​ನಿಂದ ಬರುವ ಮೆಸೇಜ್​ಗಳು ಅಥವಾ ಕರೆಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ನೀವು ವಾಟ್ಸ್​ಆ್ಯಪ್​ನಲ್ಲಿ ನಿರ್ದಿಷ್ಟ ಸಂಪರ್ಕಕ್ಕೆ ಕಸ್ಟಮ್ ರಿಂಗ್‌ಟೋನ್ ಅನ್ನು ಹೊಂದಿಸಲು ಬಯಸಿದರೆ, ಅದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ
Image
10 ವರ್ಷಗಳ ಬಳಿಕ ತನ್ನ ಲೋಗೋವನ್ನು ಮೊದಲ ಬಾರಿ ಬದಲಾಯಿಸಿದ ಗೂಗಲ್
Image
ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ನೋಟಿಸ್
Image
ಬರೋಬ್ಬರಿ 7,620mAh ಬ್ಯಾಟರಿ: ವಿವೋದಿಂದ ಬೆರಗುಗೊಳಿಸುವ ಫೋನ್ ಬಿಡುಗಡೆ
Image
ಪಾಕಿಸ್ತಾನದಲ್ಲಿ ಇಂಟರ್ನೆಟ್ ಎಷ್ಟು ದುಬಾರಿ?: 1GB ಡೇಟಾದ ಬೆಲೆ ಎಷ್ಟು?

ಆಂಡ್ರಾಯ್ಡ್‌ ಫೋನ್​ನಲ್ಲಿ ಕಸ್ಟಮ್ ರಿಂಗ್‌ಟೋನ್ ಅನ್ನು ಹೇಗೆ ಸೆಟ್ ಮಾಡುವುದು?

ನಿಮ್ಮ ಫೋನ್‌ನಲ್ಲಿ ವಾಟ್ಸ್​ಆ್ಯಪ್​ ತೆರೆಯಿರಿ ಮತ್ತು ಚಾಟ್ಸ್ ಟ್ಯಾಬ್‌ಗೆ ಹೋಗಿ. ಈಗ ನೀವು ರಿಂಗ್‌ಟೋನ್ ಹೊಂದಿಸಲು ಬಯಸುವ ಕಾಂಟೆಕ್ಟ್ ಅನ್ನು ಆಯ್ಕೆಮಾಡಿ. ಅದರ ನಂತರ, ಸಂಪರ್ಕದ ಹೆಸರಿನ ಮೇಲೆ ಟ್ಯಾಪ್ ಮಾಡಿ ಮತ್ತು ಅವರ ಪ್ರೊಫೈಲ್‌ಗೆ ಹೋಗಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಕಸ್ಟಮ್ ನೋಟಿಫಿಕೇಷನ್ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ, ‘ಕಸ್ಟಮ್ ನೋಟಿಫಿಕೇಷನ್ ಬಳಸಿ’ ಬಾಕ್ಸ್ ಅನ್ನು ಪರಿಶೀಲಿಸಿ ಮತ್ತು ಕರೆ ಅಧಿಸೂಚನೆಯ ಕೆಳಗಿನ ರಿಂಗ್‌ಟೋನ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ನೆಚ್ಚಿನ ರಿಂಗ್‌ಟೋನ್ ಅನ್ನು ಆಯ್ಕೆ ಮಾಡಿ.

Google New Logo: 10 ವರ್ಷಗಳ ಬಳಿಕ ತನ್ನ ಲೋಗೋವನ್ನು ಮೊದಲ ಬಾರಿ ಬದಲಾಯಿಸಿದ ಗೂಗಲ್

ಐಫೋನ್‌ನಲ್ಲಿ ಕಸ್ಟಮ್ ರಿಂಗ್‌ಟೋನ್ ಅನ್ನು ಹೇಗೆ ಹೊಂದಿಸುವುದು?

ನಿಮ್ಮ ಫೋನ್‌ನಲ್ಲಿ ವಾಟ್ಸ್​ಆ್ಯಪ್​ ತೆರೆದ ನಂತರ, ಚಾಟ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಕಸ್ಟಮ್ ರಿಂಗ್‌ಟೋನ್ ಹೊಂದಿಸಲು ಬಯಸುವ ಸಂಪರ್ಕವನ್ನು ಆಯ್ಕೆಮಾಡಿ. ಇದಾದ ನಂತರ, ವಾಲ್‌ಪೇಪರ್ ಮತ್ತು ಧ್ವನಿಯ ಮೇಲೆ ಟ್ಯಾಪ್ ಮಾಡಿ. ನಂತರ ಕಸ್ಟಮ್ ಟೋನ್ ಕೆಳಗೆ ಕಾಣುವ ಅಲರ್ಟ್ ಟೋನ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ ನೀವು ವಿಶೇಷ ವ್ಯಕ್ತಿಯಿಂದ ಸಂದೇಶ ಅಥವಾ ಕರೆಯನ್ನು ಸ್ವೀಕರಿಸಿದಾಗ, ವಿಭಿನ್ನವಾದ ರಿಂಗ್‌ಟೋನ್ ಅನ್ನು ಕೇಳುತ್ತೀರಿ ಮತ್ತು ಫೋನ್ ನೋಡದೆಯೇ ನೀವು ಇದು ಯಾರ ಮೆಸೇಜ್ ಅಥವಾ ಕಾಲ್ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Tue, 13 May 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!