ಭಾರತದಲ್ಲಿ ವಾಟ್ಸ್ ಆಪ್ಅನ್ನು ರಾತ್ರಿರಿಂದ ಬೆಳಗಿನಜಾವದವರೆಗೆ ನಿಷೇಧಿಸಲಾಗುತ್ತದೆ ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ ಎಂಬ ವೈರಲ್ ಸಂದೇಶವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ರಾತ್ರಿ 11:30 ರಿಂದ ಬೆಳಿಗ್ಗೆ 6ರವೆರೆಗೆ ವಾಟ್ಸ್ ಆಪ್ ಮುಚ್ಚಲಾಗುವುದು ಈ ಸಂದೇಶವನ್ನು ಪಾರ್ವರ್ಡ್ ಮಾಡದಿದ್ದಲ್ಲಿ ಅವರ ವಾಟ್ಸ್ ಆಪ್ ಖಾತೆಯನ್ನೇ ಮುಚ್ಚಲಾಗುವುದು ಎಂಬ ಸಂದೇಶವೊಂದು ಹರಿದಾಡುತ್ತಿದೆ. ಇದು ನಕಲಿ ಮತ್ತು ಬಳಕೆದಾರರನ್ನು ದಾರಿ ತಪ್ಪಿಸಲು ಈ ರೀತಿ ಮಾಡಲಾಗುತ್ತಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯರೋ (ಪಿಐಬಿ) ಹೇಳಿದೆ.
ನಕಲಿ ಸಂದೇಶವನ್ನು ವಜಾಗೊಳಿಸಲು, ಪಿಐಬಿ ಸತ್ಯ ಪರಿಶೀಲನೆಗೆ ಮುಂದಾಗಿದೆ. ವಾಟ್ಸ್ ಆಪ್ಅನ್ನು ರಾತ್ರಿ 11:30 ರಿಂದ ಬೆಳಿಗ್ಗೆ 6ರವರೆಗೆ ಮುಚ್ಚಲಾಗುವುದು ಎಂಬ ವೈರಲ್ ಸಂದೇಶ ನಕಲಿ. ಈ ರೀತಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪಿಬಿಐ ಸ್ಪಷ್ಟನೆ ನೀಡಿದೆ. ಈ ರೀತಿಯಾದ ಸುಳ್ಳು ಮತ್ತು ಆಧಾರ ರಹಿತ ಮಾಹಿತಿಗಳನ್ನು ನಂಬದಂತೆ ಜನರಿಗೆ ಪಿಬಿಐ ಫ್ಯಾಕ್ಟ್ ಚೆಕ್ ಕೇಳಿಕೊಂಡಿದೆ.
ಪಿಬಿಐ ಫ್ಯಾಕ್ಟ್ ಚೆಕ್ ಟ್ವೀಟ್;
दावा: केंद्र सरकार के आदेशानुसार #WhatsApp को रात 11:30 बजे से सुबह 6 बजे तक बंद किया जाएगा, वायरल मैसेज फॉरवर्ड न करने पर अकाउंट बंद कर दिया जाएगा और इसे एक्टिवेट कराने के लिए मासिक चार्ज देना होगा।#PIBFactCheck: यह दावा फर्जी है। केंद्र सरकार ने ऐसा कोई आदेश नहीं दिया है। pic.twitter.com/SmGIH5vRix
— PIB Fact Check (@PIBFactCheck) October 6, 2021
ಇತ್ತೀಚೆಗೆ ವಾಟ್ಸ್ ಆಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಇಂತಹ ಸುಳ್ಳು ಸಂದೇಶಗಳು ಹರಿದಾಡುತ್ತಿವೆ. ಡೌನ್ ಡಿಟೆಕ್ಟರ್ ಪ್ರಕಾರ, ಈ ಸಮಸ್ಯೆಗಳು ಅಕ್ಟೋಬರ್ 4ರಂದು ರಾತ್ರಿ 11:30ರ ದುಮಾರಿಗೆ ಎದುರಾದವು. ಇದು ಜಗತ್ತಿನಾದ್ಯಂತ ಬಳಕೆದಾರರ ಮೇಲೆ ಪರಿಣಾಮ ಬೀರಿತು.
ಇದನ್ನೂ ಓದಿ:
WhatsApp Tricks: ಇದೀಗ ಟೈಪ್ ಮಾಡದೇ ವಾಟ್ಸ್ಆ್ಯಪ್ನಲ್ಲಿ ಟೆಕ್ಸ್ಟ್ ಮೆಸೇಜ್ ಕಳುಹಿಸಿ: ಇಲ್ಲಿದೆ ಟ್ರಿಕ್
WhatsApp ಯಾರ ಕಣ್ಣಿಗೂ ಕಾಣಿಸದಂತೆ ವಾಟ್ಸ್ಆಪ್ ಚಾಟ್ ಬಚ್ಚಿಡುವುದು ಹೇಗೆ? ಇಲ್ಲಿದೆ ಸುಲಭದ ಉಪಾಯ