ಬಳಕೆದಾರರಿಗೆ ಅನುಕೂಲವಾಗುವಂತಹ ಫೀಚರ್, ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಸೇರಿದಂತೆ ಎಲ್ಲಾ ವಾಟ್ಸ್ಆ್ಯಪ್ ಆವೃತ್ತಿಗಳು ಹೊಸ ಆಪರೇಟಿಂಗ್ ಸಿಸ್ಟಮ್‌ಗಳಿಗೆ ಹೊಂದಿಕೊಳ್ಳಲು ಪ್ರತಿ ತಿಂಗಳು ಹೊಸ ಸಿಸ್ಟಮ್ ನವೀಕರಣಗಳನ್ನು ಸ್ವೀಕರಿಸುತ್ತವೆ. ವಾಟ್ಸ್ಆ್ಯಪ್ ಹೊಸ ಅಪ್‌ಡೇಟ್‌ಗಳೊಂದಿಗೆ ಬಂದಾಗ ಅದು ಕೆಲ ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಬೆಂಬಲ ಕಳೆದುಕೊಳ್ಳುತ್ತದೆ. ಇದೀಗ ವಾಟ್ಸ್ಆ್ಯಪ್ ಅಕ್ಟೋಬರ್ 24 ರ ನಂತರ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಲ್ಲಿ ತನ್ನ ಬೆಂಬಲವನ್ನು ಕೊನೆಗೊಳಿಸುವುದಾಗಿ ಹೇಳಿದೆ.
“ಈಗಲೂ ಕೆಲವು ಜನರು ತಮ್ಮ ಸ್ಮಾರ್ಟ್ಫೋನ್ಗಳನ್ನು ಅಪ್ಡೇಟ್ ಮಾಡದೆ ಅಥವಾ ಹಳೆಯ ಸಾಫ್ಟ್‌ವೇರ್ ಬಳಸುತ್ತಿರುವುದು ಕಂಡುಬಂದಿದೆ. ಈ ಮೊಬೈಲ್ಗಳು ಇತ್ತೀಚಿನ ಭದ್ರತಾ ನವೀಕರಣಗಳನ್ನು ಹೊಂದಿಲ್ಲದಿರಬಹುದು. ವಾಟ್ಸ್ಆ್ಯಪ್ ಮುಂದಿನ ನೂತನ ಅಪ್ಡೇಟ್ಗಾಗಿ ಕೆಲ ಫೋನುಗಳಲ್ಲಿ ಕಾರ್ಯಚರಣೆ ನಿಲ್ಲಿಸಲಿದೆ,” ಎಂದು ವಾಟ್ಸ್ಆ್ಯಪ್ FAQ ನಲ್ಲಿ ಬರೆದುಕೊಂಡಿದೆ.
ಸಿದ್ಧರಾಗಿ: ಫ್ಲಿಪ್ಕಾರ್ಟ್ನಲ್ಲಿ ಶುರುವಾಗುತ್ತಿದೆ ಅತಿ ದೊಡ್ಡ ಬಿಗ್ ಬಿಲಿಯನ್ ಡೇಸ್ ಸೇಲ್ 2023
ನಿಮ್ಮ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ OS ಆವೃತ್ತಿ 4.1 ಮತ್ತು ಹಳೆಯದರಲ್ಲಿ ಇದೆಯೇ ಅಥವಾ ಇಲ್ಲವೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನಿನಲ್ಲಿನ ಸೆಟ್ಟಿಂಗ್‌ಗಳ ಮೆನುವನ್ನು ನೀವು ಪರಿಶೀಲಿಸಬಹುದು. ಸೆಟ್ಟಿಂಗ್‌ಗೆ ತೆರಳಿ ಸಾಫ್ಟ್‌ವೇರ್ ಆಯ್ಕೆಗೆ ಹೋದರೆ ಅಲ್ಲಿ ಕಾಣಿಸುತ್ತದೆ. ವಾಟ್ಸ್ಆ್ಯಪ್ ಈ ಫೋನುಗಳಲ್ಲಿ ಕಾರ್ಯನಿವರ್ಹಿಸುವುದನ್ನು ನಿಲ್ಲಿಸಿದರೆ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು, ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯ ಆಗುವುದಿಲ್ಲ. ಯಾವುದೇ ಇತರ ವಾಟ್ಸ್ಆ್ಯಪ್ ವೈಶಿಷ್ಟ್ಯಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ