AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi: ಇದೇ ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್​ ಪಟ್ಟಕ್ಕೇರಿದ ಶವೋಮಿ

ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿದೆ. ಹೀಗಾಗಿ ಸ್ಯಾಮ್​ಸಂಗ್, ವಿವೋ, ರಿಯಲ್ ಮಿ ಮತ್ತು ಒಪ್ಪೋಗಳನ್ನು ಹಿಂದಿಕ್ಕಿ ಶವೋಮಿ ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿಯೇ ಭದ್ರವಾಗಿದೆ.

Xiaomi: ಇದೇ ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್​ ಪಟ್ಟಕ್ಕೇರಿದ ಶವೋಮಿ
Xiaomi
TV9 Web
| Updated By: Vinay Bhat|

Updated on: Aug 07, 2021 | 12:12 PM

Share

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪೆನಿ ಇದೇ ಮೊದಲ ಬಾರಿಗೆ ಜೂನ್ ತಿಂಗಳ ವಿಶ್ವದ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಜೂನ್​ನಲ್ಲಿ ಶವೋಮಿ ಕಂಪೆನಿ ಬರೋಬ್ಬರಿ ಶೇ. 26 ರಷ್ಟು ಬೆಳವಣಿಗೆ ಕಂಡಿದೆಯಂತೆ. ಈ ಬಗ್ಗೆ ಕೌಂಟರ್​ಪ್ರಿಂಟ್ ರಿಸರ್ಚ್ ಮಾಹಿತಿ ನೀಡಿದೆ. ಭಾರತ, ಚೀನಾ ಹಾಗೂ ಯುರೋಪ್ ದೇಶಗಳಲ್ಲಿ ಶವೋಮಿಯ ಸ್ಮಾರ್ಟ್​ಫೋನ್ ಅತಿ ಹೆಚ್ಚು ಸೇಲ್ ಕಂಡಿದೆಯಂತೆ. ಈ ಮೂಲಕ ಸ್ಯಾಮ್​ಸಂಗ್, ಆ್ಯಪಲ್ ಕಂಪೆನಿಯನ್ನು ಹಿಂದಿಕ್ಕಿ ಶವೋಮಿ ಹೊಸ ಸಾಧನೆ ಮಾಡಿದೆ.

ಇತ್ತೀಚೆಗಷ್ಟೆ ಭಾರತದಲ್ಲಿ ಕೂಡ ಶವೋಮಿ 2021ರ ಎರಡನೇ ಅವಧಿ ವೇಳೆಗೆ ಅತಿ ಹೆಚ್ಚು ಸೇಲ್ ಕಂಡು ನಂಬರ್ ಒನ್ ಸ್ಥಾನದಲ್ಲಿದೆ. ಭಾರತದಲ್ಲಿ ಶೇ. 28 ರಷ್ಟು ಮಾರ್ಕೆಟ್ ಅನ್ನು ಶವೋಮಿ ಹೊಂದಿದೆ. ಹೀಗಾಗಿ ಸ್ಯಾಮ್​ಸಂಗ್, ವಿವೋ, ರಿಯಲ್ ಮಿ ಮತ್ತು ಒಪ್ಪೋಗಳನ್ನು ಹಿಂದಿಕ್ಕಿ ಶವೋಮಿ ಕಳೆದ ಎರಡು ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿಯೇ ಭದ್ರವಾಗಿದೆ.

ಇನ್ನೂ ಶವೋಮಿ ಕಂಪೆನಿಯ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್​ಫೊನ್​ಗಳು ಭಾರತದಲ್ಲಿ ಅತಿ ಹೆಚ್ಚಿ ಮಾರಾಟವಾಗಿದೆಯಂತೆ. ಜೊತೆಗೆ ಸ್ಯಾಮ್​ಸಂಗ್​ನ ಗ್ಯಾಲಕ್ಸಿ M ಸರಣಿ ಮತ್ತು F ಸರಣಿಯ ಫೋನ್ ಕೂಡ ಭರ್ಜರಿ ಸೇಲ್ ಕಂಡಿದೆ. ಒಟ್ಟಾರೆಯಾಗಿ ಭಾರತದಲ್ಲಿ 2021 ಕ್ವಾರ್ಟರ್ 2 ನಲ್ಲಿ  33 ಮಿಲಿಯನ್ ಯುನಿಟ್ ಸೇಲ್ ಆಗಿವೆ. ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಆಫ್​ಲೈನ್ ಸ್ಟೋರ್​ಗಳಲ್ಲಿ ಮಾರಾಟ ಕಡಿಮೆ ಆಗಿದ್ದು ಆನ್​ಲೈನ್​ನಲ್ಲೇ ಅತಿ ಹೆಚ್ಚು ಖರೀದಿ ಮಾಡಿದ್ದಾರಂತೆ.

ಶವೋಮಿ ಇಷ್ಟರ ಮಟ್ಟಿಗೆ ಯಶಸ್ಸು ಕಾಣಲು ಕಾರಣ ಇದು ಬಿಡುಗಡೆ ಮಾಡಿದ್ದ ರೆಡ್ಮಿ 9 ಸರಣಿ ಮತ್ತು ರೆಡ್ಮಿ ನೋಟ್ 10 ಸರಣಿಯ ಸ್ಮಾರ್ಟ್​ಫೋನ್​ಗಳು ಎಂದು ಹೇಳಲಾಗಿದೆ. ಟಾಪ್ 5 ಮೊಬೈಲ್​ಗಳ ಪೈಕಿ ಮೊದಲ 4 ಸ್ಥಾನದಲ್ಲಿ ರೆಡ್ಮಿಯೇ ಇವೆ. ಅವುಗಳು ರೆಡ್ಮಿ 9A, ರೆಡ್ಮಿ 9 ಪವರ್, ರೆಡ್ಮಿ ನೋಟ್ 10 ಮತ್ತು ರೆಡ್ಮಿ 9 ಆಗಿವೆ. ಇದರಲ್ಲಿ ರೆಡ್ಮಿ 9A ಅತಿ ಹೆಚ್ಚು ಸೇಲ್ ಕಂಡ ಸ್ಮಾರ್ಟ್​​ಫೋನ್ ಆಗಿದೆ.

ಉಳಿದಂತೆ ಸ್ಯಾಮ್​ಸಂಗ್, ವಿವೋ, ರಿಯಲ್ ಮಿ ಕಂಪೆನಿ ಭಾರತದಲ್ಲಿ ತನ್ನ ಬ್ರ್ಯಾಂಡ್ ಅನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಷ್ಟೊಂದು ಉತ್ತಮವಾಗಿ ಗುರುತಿಸಿಕೊಂಡಿಲ್ಲ. ಸ್ಯಾಮ್​ಸಂಗ್ 2020 ರಲ್ಲಿ ನಂಬರ್ ಒನ್ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿತ್ತು.

ಸ್ಮಾರ್ಟ್​ಫೋನಿನ ಮೆಮೊರಿ ಹೆಚ್ಚಿಸಲು ಮೆಮೊರಿ ಕಾರ್ಡ್​ ಬೇಡ: ಈ ಟ್ರಿಕ್ ಪಾಲೋ ಮಾಡಿ

Amazon Great Freedom Sale: ಅಮೆಜಾನ್​ನಲ್ಲಿ ಬಂಪರ್ ಡಿಸ್ಕೌಂಟ್ ಮೇಳ: ನೀವು ಹೊಸ ಸ್ಮಾರ್ಟ್​ಫೋನ್ ಮೇಲೆ ಕಣ್ಣಿದ್ದರೆ ಇಲ್ಲಿ ನೋಡಿ

(Xiaomi first time to become the number one smartphone brand in the world in June)

ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ
ಐದು ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ
ಶಿರಸಿ: ಐತಿಹಾಸಿಕ ಬಂಗಾರೇಶ್ವರ ದೇವಾಲಯ ಸಂಪೂರ್ಣ ಜಲಾವೃತ
ಶಿರಸಿ: ಐತಿಹಾಸಿಕ ಬಂಗಾರೇಶ್ವರ ದೇವಾಲಯ ಸಂಪೂರ್ಣ ಜಲಾವೃತ
ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ: ಯತೀಂದ್ರ
ಪೂರ್ಣಾವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಾರೆ: ಯತೀಂದ್ರ
ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಮೇಘಸ್ಫೋಟ, ಪ್ರವಾಹದ ಬಳಿಕ ಹಿಮಾಚಲ ಪ್ರದೇಶದ ಸ್ಥಿತಿ ಹೇಗಿದೆ ನೋಡಿ
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆಯ ರಹಸ್ಯ ಹಾಗೂ ಆಚರಣೆಯ ಮಹತ್ವ ಗೊತ್ತಾ?
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ಗುರುಪೂರ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಗುರುಬಲ ಯೋಗ ತಿಳಿಯಿರಿ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು