Redmi Note 11 Pro Series: ಭಾರತದಲ್ಲಿ ಬಿಡುಗಡೆ ಆಗಿದೆ ಕಡಿಮೆ ಬೆಲೆಯ 108MP ಕ್ಯಾಮೆರಾದ ಹೊಸ ಫೋನ್: ಹೇಗಿದೆ?, ಯಾವುದು?

| Updated By: Vinay Bhat

Updated on: Mar 10, 2022 | 11:37 AM

Redmi Note 11 Pro and Redmi Note 11 Pro Plus: ಶವೋಮಿ ಇದೀಗ ಕ್ಯಾಮೆರಾ ಪ್ರಿಯರಿಗಾಗಿ ಭಾರತದಲ್ಲಿ ತನ್ನ ಹೊಸ ರೆಡ್ಮಿ ನೋಟ್‌ 11 ಪ್ರೊ ಮತ್ತು ರೆಡ್ಮಿ ನೋಟ್‌ 11 ಪ್ರೊ + 5G ಯನ್ನು ರಿಲೀಸ್ ಮಾಡಿದೆ. ಪ್ರಸಿದ್ದ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಮಾರ್ಚ್ 23 ರಿಂದ ಈ ಎರಡೂ ಸ್ಮಾರ್ಟ್​ಫೋನ್ ಖರೀದಿಗೆ ಸಿಗಲಿದೆ.

Redmi Note 11 Pro Series: ಭಾರತದಲ್ಲಿ ಬಿಡುಗಡೆ ಆಗಿದೆ ಕಡಿಮೆ ಬೆಲೆಯ 108MP ಕ್ಯಾಮೆರಾದ ಹೊಸ ಫೋನ್: ಹೇಗಿದೆ?, ಯಾವುದು?
Redmi Note 11 Pro and Redmi Note 11 Pro Plus
Follow us on

ಭಾರತದಲ್ಲೀಗ ಕ್ಯಾಮೆರಾ ಫೋನ್​ಗಳದ್ದೇ ಹವಾ. ಇದಕ್ಕಾಗಿಯೆ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವ ಸ್ಮಾರ್ಟ್​ಫೋನ್​ಗಳು ಈಗೀಗ ಬಿಡುಗಡೆ ಆಗುತ್ತಿವೆ. ಈಗಾಗಲೇ ದೇಶಕ್ಕೆ ಅನೇಕ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವ ಫೋನ್​ಗಳು ಲಗ್ಗೆಯಿಟ್ಟಿವೆ. ಇದೀಗ ಆ ಸಾಲಿಗೆ ಮತ್ತೊಂದು ಆಕರ್ಷಕ ಫೋನ್ ಸೇರ್ಪಡೆಯಾಗಿದೆ. ಶವೋಮಿ (Xioami) ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಇದಕ್ಕಾಗಿಯೇ ಇದು ದೇಶದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಆಗಿದೆ. ತನ್ನ ಎಂಐ, ರೆಡ್ಮಿ ಅಡಿಯಲ್ಲಿ ಹೊಚ್ಚ ಹೊಸ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುವ ಶವೋಮಿ ಇದೀಗ ಕ್ಯಾಮೆರಾ ಪ್ರಿಯರಿಗಾಗಿ ಭಾರತದಲ್ಲಿ ತನ್ನ ಹೊಸ ರೆಡ್ಮಿ ನೋಟ್‌ 11 ಪ್ರೊ (Redmi Note 11 Pro) ಮತ್ತು ರೆಡ್ಮಿ ನೋಟ್‌ 11 ಪ್ರೊ + 5G (Redmi Note 11 Pro+) ಯನ್ನು ರಿಲೀಸ್ ಮಾಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌, 108 ಮೆಗಾಫಿಕ್ಸೆಲ್ ಕ್ಯಾಮೆರಾ, ದೀರ್ಘ ಬಾಳಿಕೆ ಭರ್ಜರಿ ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳಿಂದ ಈ ಸ್ಮಾರ್ಟ್​ಫೋನ್ ಕೂಡಿದೆ.

ಬೆಲೆ ಎಷ್ಟು?:

ಭಾರತದಲ್ಲಿ ರೆಡ್ಮಿ ನೋಟ್‌ 11 ಪ್ರೊ+ ಸ್ಮಾರ್ಟ್‌ಫೋನ್‌ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ 6GB RAM + 128GB ಆವೃತ್ತಿಗೆ 20,999 ರೂ. ಬೆಲೆಯನ್ನು ಹೊಂದಿದೆ. 8GB RAM + 128GB ಆವೃತ್ತಿಯ ಬೆಲೆ 22,999 ರೂ. ಆಗಿದೆ. ಟಾಪ್ ಎಂಡ್ 8GB RAM + 256GB ಆವೃತ್ತಿಗೆ 24,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ ರೆಡ್ಮಿ ನೋಟ್‌11 ಪ್ರೊ ಸ್ಮಾರ್ಟ್‌ಫೋನ್‌ 6GB RAM + 128GB ಆವೃತ್ತಿಗೆ 17,999 ರೂ. ಯಿಂದ ಪ್ರಾರಂಭವಾಗಲಿದೆ. 8GB RAM + 128GB ಆವೃತ್ತಿಯ ಬೆಲೆ 19,999 ರೂ. ಆಗಿದೆ. ಪ್ರಸಿದ್ದ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಮಾರ್ಚ್ 23 ರಿಂದ ಈ ಎರಡೂ ಸ್ಮಾರ್ಟ್​ಫೋನ್ ಖರೀದಿಗೆ ಸಿಗಲಿದೆ.

ಏನು ವಿಶೇಷತೆ?:

ರೆಡ್ಮಿ ನೋಟ್‌11 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ರಿಫ್ರೆಶ್ ರೇಟ್​ನಿಂದ ಕೂಡಿದೆ. ಇದು ಮೀಡಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌ ಹೊಂದಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಈ ಫೋನ್‌ ಗ್ರ್ಯಾಫೈಟ್ ಗ್ರೇ, ಪೋಲಾರ್ ವೈಟ್ ಮತ್ತು ಸ್ಟಾರ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ರೆಡ್ಮಿ ನೋಟ್‌11 ಪ್ರೊ+ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಕೂಡ 120Hz ರಿಫ್ರೆಶ್ ರೇಟ್‌ ಮತ್ತು 320Hz ಟಚ್ ಸ್ಯಾಂಪ್ಲಿಂಗ್ ಬೆಂಬಲದೊಂದಿಗೆ ರಿಫ್ರೆಶ್ ರೇಟ್​ನಿಂದ ಕೀಡೊದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 695 ಪ್ರೊಸೆಸರ್‌ ಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 67W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ.

Instagram: ಸದ್ದಿಲ್ಲದೇ ಬಳಕೆದಾರರಿಗೆ ಶಾಕ್ ಕೊಟ್ಟ ಇನ್​ಸ್ಟಾಗ್ರಾಂ; ತನ್ನದೇ ಎರಡು ಆಪ್ ಡಿಲೀಟ್!