Instagram: ಸದ್ದಿಲ್ಲದೇ ಬಳಕೆದಾರರಿಗೆ ಶಾಕ್ ಕೊಟ್ಟ ಇನ್​ಸ್ಟಾಗ್ರಾಂ; ತನ್ನದೇ ಎರಡು ಆಪ್ ಡಿಲೀಟ್!

Boomerang | Hyperlapse: ಇನ್​ಸ್ಟಾಗ್ರಾಂ ಸದ್ದಿಲ್ಲದೇ ತನ್ನ ಎರಡು ಸ್ವತಂತ್ರ ಆಪ್​ಗಳನ್ನು ಆಪ್ ಸ್ಟೋರ್​ಗಳಿಂದ ತೆಗೆದಿದೆ. ಬೂಮರಾಂಗ್ ಹಾಗೂ ಹೈಪರ್​ಲ್ಯಾಪ್ಸ್​​ ಆಪ್​ಗಳು ಈ ಮೊದಲು ಸ್ವತಂತ್ರವಾಗಿ ಆಪ್​ಸ್ಟೋರ್​ಗಳಲ್ಲಿ ಲಭ್ಯವಿರುತ್ತಿದ್ದವು. ಇನ್​ಸ್ಟಾಗ್ರಾಂನ ಈ ನಿರ್ಧಾರಕ್ಕೆ ಕಾರಣವೇನು? ಮಾಹಿತಿ ಇಲ್ಲಿದೆ.

Instagram: ಸದ್ದಿಲ್ಲದೇ ಬಳಕೆದಾರರಿಗೆ ಶಾಕ್ ಕೊಟ್ಟ ಇನ್​ಸ್ಟಾಗ್ರಾಂ; ತನ್ನದೇ ಎರಡು ಆಪ್ ಡಿಲೀಟ್!
ಪ್ರಾತಿನಿಧಿಕ ಚಿತ್ರ
Follow us
| Updated By: shivaprasad.hs

Updated on: Mar 09, 2022 | 4:01 PM

ಇನ್​ಸ್ಟಾಗ್ರಾಂ (Instagram) ಈ ಹಿಂದೆ ಐಜಿಟಿವಿ ಆಪ್​ನ ಸೇವೆಯನ್ನು ನಿಲ್ಲಿಸಿತ್ತು. ಇದೀಗ ಸದ್ದಿಲ್ಲದೇ ಮತ್ತೆರಡು ಆಪ್​ಗಳ ಸೇವೆಯನ್ನು ನಿಲ್ಲಿಸಿ, ಬಳಕೆದಾರರಿಗೆ ಶಾಕ್ ನೀಡಿದೆ. ಹೌದು. ಬಳಕೆದಾರರಿಗೆ ಪ್ರಿಯವಾಗಿದ್ದ ಬೂಮರಾಂಗ್ ಹಾಗೂ ಹೈಪರ್​ಲ್ಯಾಪ್ಸ್ ಸ್ವತಂತ್ರ ಅಪ್ಲಿಕೇಶನ್​ಗಳನ್ನು ಆಪಲ್ ಆಪ್ ಸ್ಟೋರ್ ಹಾಗೂ ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಬೂಮರಾಂಗ್ ಆಪ್ ಸಣ್ಣ ವಿಡಿಯೋ ತುಣುಕುಗಳನ್ನು ಲೂಪ್ ಮಾದರಿಯಲ್ಲಿ ತಯಾರಿಸಲು ಸಹಾಯ ಮಾಡುವ ಆಪ್ ಆಗಿತ್ತು. ಟೈಮ್ ಲ್ಯಾಪ್ಸ್​​ಗಳನ್ನು ಮಾಡಲು ಅನುಕೂಲವಾಗುವಂತೆ ಹೈಪರ್​ಲ್ಯಾಪ್ಸ್ ಆಪ್​ಅನ್ನು ಕೂಡ ಇನ್​ಸ್ಟಾಗ್ರಾಂ ಪರಿಚಯಿಸಿತ್ತು. ಆದರೆ ಈಗ ಎರಡೂ ಆಪ್ ಸೇವೆಗಳು ಏಕಾಏಕಿ ನಿಲುಗಡೆಯಾಗಿವೆ. ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಬೂಮರಾಂಗ್ ಆಪ್ ಜನಪ್ರಿಯ ಆಪ್​ಗಳಲ್ಲಿ ಒಂದಾಗಿತ್ತು. ಸುಮಾರು 100 ಮಿಲಿಯನ್​ಗೂ ಹೆಚ್ಚು ಬಾರಿ ಅದು ಡೌನ್​ಲೋಡ್ ಆಗಿತ್ತು. ಈ ಮೊದಲು ಬೂಮರಾಂಗ್ ಹಾಗೂ ಹೈಪರ್​ಲ್ಯಾಪ್ಸ್ ಆಪ್​ಗಳು ಸ್ವತಂತ್ರ ಅಪ್ಲಿಕೇಶನ್​ಗಳಾಗಿದ್ದವು.

ಪ್ರಸ್ತುತ ಇನ್​ಸ್ಟಾಗ್ರಾಂ ನಿರ್ವಹಿಸುತ್ತಿರುವ ಆಪ್​ಗಳಲ್ಲಿ ‘ಲೇಔಟ್’ ಆಪ್ ಮಾತ್ರ ಸ್ವತಂತ್ರವಾಗಿ ಹೊರಗೆ ಲಭ್ಯವಿದೆ. ಇದು ಹಲವು ಫೋಟೋಗಳನ್ನು ಸೇರಿಸಿ ಒಂದೇ ಫೋಟೋ ಮಾಡುವ ಆಯ್ಕೆ ಹೊಂದಿದೆ. ಐಜಿಟಿವಿ ಆಪ್ ಸೇವೆ ಇನ್ನುಮುಂದೆ ಲಭ್ಯವಿರುವುದಿಲ್ಲ ಎಂದು ಈ ಹಿಂದೆ ಇನ್​ಸ್ಟಾಗ್ರಾಂ ಘೋಷಿಸಿತ್ತು. ಕಂಪನಿ ಈ ಕುರಿತು ಸ್ಪಷ್ಟನೆ ನೀಡುತ್ತಾ, ಐಜಿಟಿವಿಯನ್ನು ಇನ್​ಸ್ಟಾಗ್ರಾಂ ವಿಡಿಯೋ ಆಗಿ ರಿಬ್ರಾಂಡ್ ಮಾಡುವುದಾಗಿ ಹೇಳಿತ್ತು. ಸದ್ಯ ಈ ಹೆಸರಿನಿಲ್ಲಿ ಐಜಿಟಿವಿ ಕಾರ್ಯನಿರ್ವಹಿಸುತ್ತಿದೆ.

ಬೂಮರಾಂಗ್ ಹಾಗೂ ಹೈಪರ್​ಲ್ಯಾಪ್ಸ್ ಬಳಕೆದಾರರಿಗೆ ಇನ್ನು ಮುಂದೆ ಹೇಗೆ ಲಭ್ಯವಿರಲಿದೆ?

ಪ್ರಸ್ತುತ ಎರಡು ಸ್ವತಂತ್ರ ಆಪ್​ಗಳನ್ನು ತೆಗೆದಿರುವ ಬಗ್ಗೆ ಇನ್​ಸ್ಟಾಗ್ರಾಂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಇನ್​ಸ್ಟಾಗ್ರಾಂ ಮೂಲ ಆಪ್​ಗೆ ಬೂಮರಾಂಗ್ ಹಾಗೂ ಹೈಪರ್​ಲ್ಯಾಪ್ಸ್ ಸೇವೆ ಸೇರಿಸುವ ಮೂಲಕ ಬಳಕೆದಾರರಿಗೆ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲು ಇನ್​ಸ್ಟಾಗ್ರಾಂ ಮುಂದಾಗಿದೆ ಎನ್ನಲಾಗಿದೆ.

ಇನ್​ಸ್ಟಾಗ್ರಾಂ 2010ರಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಕಾರಣದಿಂದ ಸೃಷ್ಟಿಯಾಗಿದ್ದ ಜಾಲತಾಣವಾಗಿದೆ. ಇದನ್ನು ಕೆವಿನ್ ಸಿಸ್ಟ್ರೋಮ್ ಹಾಗೂ ಮೈಕ್ ಕ್ರೈಗರ್ ತಯಾರಿಸಿದ್ದರು. 2012ರಲ್ಲಿ ಫೇಸ್​ಬುಕ್ 1 ಬಿಲಿಯನ್ ಡಾಲರ್ ನೀಡಿ ಇನ್​ಸ್ಟಾಗ್ರಾಂಅನ್ನು ಖರೀದಿಸಿತು. ಭಾರತದಲ್ಲಿ ಟಿಕ್​ಟಾಕ್ ಬ್ಯಾನ್ ಆದ ನಂತರ ಇನ್​ಸ್ಟಾಗ್ರಾಂ ರೀಲ್ಸ್ ಪರಿಚಯಿಸಿತು. ಇದರ ಮೂಲಕ ಇನ್​ಸ್ಟಾಗ್ರಾಂ ಮತ್ತಷ್ಟು ಜನಪ್ರಿಯವಾಯಿತು.

ಪ್ರಸ್ತುತ ಇನ್​ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲು ಹಲವು ರೀತಿಯ ಆಯ್ಕೆಗಳಿವೆ. ಸಣ್ಣ ತುಣುಕುಗಳು, ದೀರ್ಘ ಕಾಲಾವಧಿಯ ವಿಡಿಯೋಗಳು, ಲೈವ್​ ಸ್ಟ್ರೀಮ್​ಗಳನ್ನು ಮಾಡಲು ಪ್ರತ್ಯೇಕ ಆಯ್ಕೆಗಳಿವೆ. ಇದರೊಂದಿಗೆ ಫೋಟೋ ಹಂಚಿಕೊಳ್ಳುವ ಆಯ್ಕೆ ಕೂಡ ಜನಪ್ರಿಯವಾಗಿದೆ. ರೀಲ್ಸ್ ಸೃಷ್ಟಿಸುವವರಿಗೆ ಹಣ ಗಳಿಸುವ ಆಯ್ಕೆ ನೀಡುವ ಬಗ್ಗೆಯೂ ಇನ್​ಸ್ಟಾಗ್ರಾಂ ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ:

ಮೊಬೈಲ್ ಅನ್ನು ಸದಾ ಹಿಡಿದಿರುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ

ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರಕ್ಕೆ ವಿಲನ್​ ಆದ ಪೃಥ್ವಿರಾಜ್​; ವಿಷಯ ಲೀಕ್ ಮಾಡಿದ ಪ್ರಭಾಸ್

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ