AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್​ನಲ್ಲಿ​​​ ನಿಮ್ಮ ಫೋಟೋ, ವೈಯಕ್ತಿಕ ಮಾಹಿತಿ ದುರ್ಬಳಕೆಯಾಗ್ತಿದೆ ಎಚ್ಚರ, ಇದನ್ನು ತಡೆಯಲು ಹೊಸ ಕ್ರಮ

ಗೂಗಲ್​ ಹೊಸ ಅಪ್ಡೇಟ್​​ ಒಂದನ್ನು, ತನ್ನ ಬಳಕೆದಾರರಿಗೆ ಎಚ್ಚರಿಕೆ ಕ್ರಮವನ್ನು ಅನುಸರಿಸುವಂತೆ ಹೇಳಿದೆ. ಗೂಗಲ್​​ ಬಳಕೆದಾರರೂ ತಮ್ಮ ಫೋಟೋ ಹಾಗೂ ವೈಯಕ್ತಿಕ ಮಾಹಿತಿಗಳನ್ನು ತೆಗೆದು ಹಾಕಲು ಹೊಸ ಕ್ರಮವನ್ನು ಹೇಳಿದೆ. ಇದರಲ್ಲಿ ಒಟ್ಟು 6 ಹಂತಗಳು ಇದೆ. ಅದು ಯಾವುದು ಇಲ್ಲಿದೆ ನೋಡಿ

ಗೂಗಲ್​ನಲ್ಲಿ​​​ ನಿಮ್ಮ ಫೋಟೋ, ವೈಯಕ್ತಿಕ ಮಾಹಿತಿ ದುರ್ಬಳಕೆಯಾಗ್ತಿದೆ ಎಚ್ಚರ, ಇದನ್ನು ತಡೆಯಲು ಹೊಸ ಕ್ರಮ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Aug 07, 2024 | 3:49 PM

Share

ಗೂಗಲ್​​​ ಹೊಸ ಅಪ್ಡೇಟ್​​​ ಒಂದನ್ನು ಪರಿಚಯಿಸಿದೆ. ಇದು ನಮ್ಮ ವೈಯಕ್ತಿಕ ಮಾಹಿತಿ ಅಥವಾ ಫೋಟೋಗಳನ್ನು ಸರ್ಜ್​​​ ಇಂಜಿನ್​​​ನಿಂದ ತೆಗೆದು ಹಾಕುತ್ತದೆ. ಗೂಗಲ್​​ನಲ್ಲಿ ನಾವು ಅನೇಕ ವಿಚಾರಗಳನ್ನು ಹುಡುಕಬಹುದು. ಇದನ್ನು ಕೆಲವು ಗೂಗಲ್​​ ಕಳ್ಳರು ದುರ್ಬಳಕೆ ಮಾಡಬಹುದು. ಅದಕ್ಕಾಗಿ ಗೂಗಲ್​ ಹೊಸ ಅಪ್ಡೇಟ್​​​ ನೀಡಿದೆ. ನಮ್ಮ ವೈಯಕ್ತಿಕ ಫೋಟೋಗಳನ್ನು ಬಳಸಿಕೊಂಡು ತಮ್ಮ ವೆಬ್​​​ ಸೈಟ್​​​​ಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಗೂಗಲ್​​​ ಹೊಸ ಕ್ರಮವನ್ನು ತಂದಿದೆ.

ಗೂಗಲ್​ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಫೋಟೋಗಳನ್ನು ತೆಗೆದು ಹಾಕಲು ಗೂಗಲ್​​ ಒಂದು ಆಯ್ಕೆಯನ್ನು ನೀಡಿರುತ್ತದೆ. ಈ ಮೂಲಕ ಗೂಗಲ್​​​ ನಿಮ್ಮ ವೈಯಕ್ತಿಕ ಫೋಟೋಗಳನ್ನು ಹಾಗೂ ಮಾಹಿತಿಗಳನ್ನು ಇತರರಿಗೆ ಉಪಯೋಗವಾಗದಂತೆ ನೋಡಿಕೊಳ್ಳುತ್ತದೆ.

ಇದು ನಿಮ್ಮ ವೈಯಕ್ತಿಕ ಫೋಟೋ, ನಿಮ್ಮ ಫೋಟೋಗಳನ್ನು ಅಶ್ಲೀಲ ಫೋಟೋಗಳ ಜತೆಗೆ ಎಡಿಟ್​​ ಮಾಡುವುದು, ಲೈಂಗಿಕ ಸೈಟ್​​​ಗಳಿಗೆ ನಿಮ್ಮ ಫೋಟೋಗಳನ್ನು ಬಳಸಿದ್ದರೆ ಅದನ್ನು ತೆಗೆದು ಹಾಕಲು ಅವಕಾಶ ನೀಡಿದೆ. ಅದನ್ನು ತೆಗೆಯುವುದು ಹೇಗೆ ಇಲ್ಲಿದೆ ನೋಡಿ.

ಹಂತ 1: https://support.google.com/websearch/contact/content_removal_form?sjid=1 ಗೆ ಹೋಗಿ

ಹಂತ 2: ಈ ಪುಟದಲ್ಲಿ, ‘Google ಹುಡುಕಾಟದಿಂದ ವೈಯಕ್ತಿಕ ವಿಷಯವನ್ನು ತೆಗೆದುಹಾಕಲು ನೀವು ಏಕೆ ವಿನಂತಿಸುತ್ತಿರುವಿರಿ? ಎಂಬ ಕಾರಣ ನೀಡಿ. ಅಲ್ಲಿ ನಿಮ್ಮ ವಿಳಾಸ ಹಾಕಿ

ಹಂತ 3: ‘ಮುಂದೆ’ ಕ್ಲಿಕ್ ಮಾಡಿ.

ಹಂತ 4: ನೀವು ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವುದನ್ನು ಆಯ್ಕೆ ಮಾಡಿದ ನಂತರ ಮುಂದಿನ ಪುಟದಲ್ಲಿ ‘Google ಹುಡುಕಾಟ ಫಲಿತಾಂಶಗಳಿಂದ ನೀವು ತೆಗೆದುಹಾಕಲು ಬಯಸುವ ವೈಯಕ್ತಿಕ ಮಾಹಿತಿಯನ್ನು ಆಯ್ಕೆಮಾಡಿ

ಇದನ್ನೂ ಓದಿ: ಗೂಗಲ್ ವಿರುದ್ಧ ಐತಿಹಾಸಿಕ ತೀರ್ಪು ನೀಡಿದ ಭಾರತ ಮೂಲದ ಅಮೆರಿಕನ್ ನ್ಯಾಯಮೂರ್ತಿ ಅಮಿತ್ ಮೆಹ್ತಾ

ಹಂತ 5: ಹುಡುಕಾಟ ಪದ, ಪುಟ URL, Google ಹುಡುಕಾಟ ಫಲಿತಾಂಶ URL ಮತ್ತು ಇತರ ಸಂಬಂಧಿತ ಮಾಹಿತಿಯಂತಹ ಅಗತ್ಯವಿರುವ ಎಲ್ಲಾ ಡೇಟಾವನ್ನು ನಮೂದಿಸಿ.

ಹಂತ 6: ಮುಂದಿನ ಪುಟದಲ್ಲಿ, ವೈಯಕ್ತಿಕ ವಿವರಗಳಿಗಾಗಿ ನಮೂದಿ ಇಲ್ಲಿ ಕ್ಲಿಕ್ ಮಾಡಿ.

ಈ ಕ್ರಮವನ್ನು ಪಾಲಿಸಿದ ನಂತರ ನಿಮ್ಮ ಫೋಟೋ, ಮತ್ತು ವೈಯಕ್ತಿಕ ಮಾಹಿತಿಗಳನ್ನು ತೆಗೆದು ಹಾಕಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Wed, 7 August 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ