Viral Post: ಮುದ್ದಿನ ಮಗಳಿಗೆ  ಶ್ರೀಮಂತ ವರನನ್ನು  ಹುಡುಕಲು ಬರೋಬ್ಬರಿ 3 ಲಕ್ಷ ರೂ. ಖರ್ಚು ಮಾಡಿದ ತಂದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 30, 2024 | 3:57 PM

ಮಗಳನ್ನು ಒಂದೊಳ್ಳೆ ಕುಟುಂಬಕ್ಕೆ ಮದುವೆ ಮಾಡಿಕೊಡಬೇಕೆಂಬುವುದು ಪ್ರತಿಯೊಬ್ಬ ತಂದೆ-ತಾಯಿಯ ಕನಸಾಗಿರುತ್ತದೆ. ಇದಕ್ಕಾಗಿ ಹೆತ್ತವರು ತಮ್ಮ ಕೈಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿ, ಮಗಳಿಗಾಗಿ ಸಂಸ್ಕಾರವಂತ ವರನನ್ನು ಆರಿಸಿ ತರುತ್ತಾರೆ. ಆದ್ರೆ ಇಲ್ಲೊಬ್ಬರು ತಂದೆ ತನ್ನ ಮಗಳಿಗೆ 200 ಕೋಟಿಗೂ ಹೆಚ್ಚು ವಹಿವಾಟು ಹೊಂದಿರುವ ಆಗರ್ಭ ಶ್ರೀಮಂತ ಕುಟುಂಬದ ವರನೇ ಬೇಕು ಎಂದು ಹುಡುಗ ಹುಡುಕಲು ಬರೋಬ್ಬರಿ 3 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.

Viral Post: ಮುದ್ದಿನ ಮಗಳಿಗೆ  ಶ್ರೀಮಂತ ವರನನ್ನು  ಹುಡುಕಲು ಬರೋಬ್ಬರಿ 3 ಲಕ್ಷ ರೂ. ಖರ್ಚು ಮಾಡಿದ ತಂದೆ
Follow us on

ಒಳ್ಳೆಯ ಮನೆತನ, ಸಂಸ್ಕಾರವಂತ ಹುಡುಗನನ್ನು ನೋಡಿ ಮಗಳಿಗೆ ಮದುವೆ ಮಾಡಬೇಕೆನ್ನುವುದು ಪ್ರತಿಯೊಬ್ಬ ತಂದೆಯ ಕನಸು. ತನ್ನ ಮನೆ ಬೆಳಗಿ ಇನ್ನೊಂದು ಮನೆಯ ದೀಪವಾಗಿ ಹೋಗುವ ಮಗಳಿಗೆ ತಕ್ಕ ವರನನ್ನು ಹುಡುಕಿ ಅದ್ಧೂರಿಯಾಗಿ ಮದುವೆ ಮಾಡಿ ಕಳಿಸಿಕೊಡಬೇಕೆನ್ನುವುದು ಪ್ರತೀ ತಂದೆಯ ಹಂಬಲ. ಇದಕ್ಕಾಗಿ ಪ್ರತಿಯೊಬ್ಬ ತಂದೆಯೂ ತನ್ನ ಕೈಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದ್ರೆ ಇಲ್ಲೊಬ್ಬರು ತಂದೆ ಮಾತ್ರ ತನ್ನ ಮುದ್ದಿನ ಮಗಳಿಗೆ 200 ಕೋಟಿಗೂ ಅಧಿಕ ವಹಿವಾಟು ಹೊಂದಿರುವ ಆಗರ್ಭ ಶ್ರೀಮಂತ ಕುಟುಂಬದ ವರನೇ   ಬೇಕೆಂದು ಹುಡುಗನನ್ನು ಹುಡುಕಲು ಮ್ಯಾಚ್ ಮೇಕಿಂಗ್ ಏಜನ್ಸಿಯೊಂದಕ್ಕೆ ಬರೋಬ್ಬರಿ 3 ಲಕ್ಷ ರೂ. ಗಳನ್ನು ಪಾವತಿಸಿದ್ದಾರೆ. ಈ  ಕುರಿತ ಪೋಸ್ಟ್ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಪೋಸ್ಟ್ ಅನ್ನು ಮಿಶ್ಕಾ ರಾಣಾ (@RanaMishka) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಸ್ನೇಹಿತೆಯ ತಂದೆ ಆಕೆಗೆ 200 ಕೋಟಿಗೂ ಅಧಿಕ ವಹಿವಾಟನ್ನು ಹೊಂದಿರುವ ಕುಟುಂಬದ ವರನನ್ನು ಹುಡುಕಲು 3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ; ನೀವ್ಯಾರಾದರೂ ಆಕೆಯನ್ನು ಮದುವೆಯಾಗಲು ಬಯಸುವಿರಾ” ಎಂಬ ಬರಹವನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ ರೀಲ್ಸ್ ವಿಚಾರವಾಗಿ ನಡು ಬೀದಿಯಲ್ಲೇ ಹೆಣ್ಮಕ್ಕಳ ಬಿಗ್​​​ ಫೈಟ್​​; ವಿಡಿಯೋ ವೈರಲ್

ವೈರಲ್​​ ಫೋಸ್ಟ್​​​ ಇಲ್ಲಿದೆ ನೋಡಿ:

ಏಪ್ರಿಲ್ 26 ರಂದು ಹಂಚಿಕೊಂಡ ಈ ಪೋಸ್ಟ್ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಪೋಸ್ಟ್ ನೋಡಿ ಅಯ್ಯೋ ದೇವ್ರೆ ವರನನ್ನು ಹುಡುಕಲು ಇಷ್ಟೆಲ್ಲಾ ಖರ್ಚು ಮಾಡೋದಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ