Viral Post: ಎರಡು ತಿಂಗಳಿಗೆ ಬರೋಬ್ಬರಿ 45 ಸಾವಿರ ರೂ. ಕರೆಂಟ್ ಬಿಲ್ ಇನ್ನು ಮುಂದೆ  ಕ್ಯಾಂಡಲ್ ಬಳಕೆಯೇ ಸೂಕ್ತ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 24, 2024 | 11:48 AM

ಮೀಟರ್ ರೀಡಿಂಗ್ ಎಡವಟ್ಟಿನಿಂದ  ಸಾವಿರಾರು ರೂಪಾಯಿ ಕರೆಂಟ್ ಬಿಲ್ ಬರುವಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು,  ಕೇವಲ ಎರಡು ತಿಂಗಳಿಗೆ ಬರೋಬ್ಬರಿ 45,491 ರೂ. ಕರೆಂಟ್ ಬಿಲ್ ಬಂದಿದ್ದನ್ನು ಕಂಡು ಇಲ್ಲೊಬ್ಬರು ವ್ಯಕ್ತಿ ಶಾಕ್ ಆಗಿದ್ದಾರೆ. ಅವರು ಆನ್ ಲೈನ್ ಬಿಲ್ ಪೇ ಮಾಡಿದ ಸ್ಕ್ರೀನ್ ಶಾಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಇನ್ನು ಮುಂದೆ ನಾನು ಕ್ಯಾಂಡಲ್‌ ಬಳಸುವುದೇ ಸೂಕ್ತ ಎಂದು ಹೇಳಿಕೊಂಡಿದ್ದಾರೆ. 

Viral Post: ಎರಡು ತಿಂಗಳಿಗೆ ಬರೋಬ್ಬರಿ 45 ಸಾವಿರ ರೂ. ಕರೆಂಟ್ ಬಿಲ್ ಇನ್ನು ಮುಂದೆ  ಕ್ಯಾಂಡಲ್ ಬಳಕೆಯೇ ಸೂಕ್ತ
ಸಾಂದರ್ಭಿಕ ಚಿತ್ರ
Follow us on

ಮನೆಯ ತಿಂಗಳ ವಿದ್ಯುತ್‌ ಬಿಲ್‌ ಇಂತಿಷ್ಟೇ ಬರುತ್ತದೆ ಎಂಬ ಲೆಕ್ಕಾಚಾರ  ಪ್ರತಿಯೊಬ್ಬ ಮನೆ ಯಜಮಾನನಿಗೂ ಇದ್ದೇ ಇರುತ್ತದೆ. ಒಂದು ವೇಳೆ ವಿದ್ಯುತ್ ಬಿಲ್‌ ಕೊಂಚ ಜಾಸ್ತಿ ಬಂದ್ರೂ  ಮನೆಯ ಯಜಮಾನನಿಗೆ  ಕರೆಂಟ್‌ ಶಾಕ್‌ ಹೊಡೆದಂಗೆ ಆಗುತ್ತದೆ. ಇನ್ನೂ ಸಾವಿರಾರು ರೂಪಾಯಿ ಕರೆಂಟ್‌ ಬಿಲ್‌ ಬಂದ್ರೆ ಆಕಾಶನೇ ತಲೆ ಮೇಲೆ ಬಿದ್ದಂಗೆ ಆಗುತ್ತದೆ. ಅದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಕೇವಲ ತಿಂಗಳಿಗೆ ಬರೋಬ್ಬರಿ 45 ಸಾವಿರ ರೂಪಾಯಿ ಕರೆಂಟ್‌ ಬಿಲ್‌ ಬಂದಿದ್ದನ್ನು ಕಂಡು ವ್ಯಕ್ತಿಯೊಬ್ಬರು ಶಾಕ್‌ ಆಗಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಇನ್ನು ಮುಂದೆ ಮನೆಯಲ್ಲಿ ಕ್ಯಾಂಡಲ್‌ ಬಳಸುವುದೇ ಸೂಕ್ತ ಎಂದು ಹೇಳಿಕೊಂಡಿದ್ದಾರೆ.

ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಜಾಯಿನ್‌ ಹುಡ್‌ ಆಪ್ಲಿಕೇಶನ್‌ನ ಸಿಇಒ ಜಸ್ವೀರ್‌ ಸಿಂಗ್‌ ಅವರ ಮನೆಯ  ಕೇವಲ ಎರಡು ತಿಂಗಳ ಕರೆಂಟ್‌ ಬಿಲ್‌ ಬರೋಬ್ಬರಿ 45,491 ಆಗಿದ್ದು,  ಈ  ಭಾರೀ ಮೊತ್ತದ ಕರೆಂಟ್‌ ಬಿಲ್‌ ಕಂಡು ಅವರು ಶಾಕ್‌ ಆಗಿದ್ದಾರೆ. ಅವರು ಆನ್‌ಲೈನ್‌  ಬಿಲ್‌ ಪೇ ಮಾಡಿದ ಸ್ಕ್ರೀನ್‌ ಶಾಟ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಇದನ್ನೆಲ್ಲಾ ನೋಡಿ ಇನ್ನು ಮುಂದೆ ಕರೆಂಟ್‌ ಬದಲಿಗೆ ಕ್ಯಾಂಡಲ್‌ ಬಳಸುವ ಯೋಜನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಜಸ್ವೀರ್‌ ಸಿಂಗ್‌ (@jasveer10) ತಮ್ಮ ಎಕ್ಸ್‌ ಖಾತೆಯಲ್ಲಿ ಭಾರೀ ಮೊತ್ತದ ಕರೆಂಟ್‌ ಬಿಲ್‌ ಪಾವತಿ ಮಾಡಿ ಸ್ಕ್ರೀನ್‌ ಶಾಟ್‌ ಅನ್ನು   ಹಂಚಿಕೊಂಡಿದ್ದು, “ಕರೆಂಟ್‌ ಬಿಲ್‌ ಪಾವತಿ ಮಾಡಿದೆ. ಈಗ ಕರೆಂಟ್‌ ಬದಲಿಗೆ ಕ್ಯಾಂಡಲ್‌ ಬಳಕೆ ಮಾಡಲು ಯೋಚಿಸುತ್ತಿದ್ದೇನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಕೃತಿಯ ಪರಮಾವಧಿ; ಸತ್ತ ನಾಯಿಯನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪಾಪಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ 1.2 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕರೆಂಟ್‌ ಬಿಲ್‌ ನೋಡಿ ಶಾಕ್‌ ಆದ ನೆಟ್ಟಿಗರು, ಮನೆಗೆ ಸೋಲಾರ್‌ ಅಳವಡಿಸಿ ಎಂದು ಸಲಹೆ ನೀಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:46 am, Mon, 24 June 24