Viral Video : ಹಾವು ಎಂದ ತಕ್ಷಣ ಎಂಥವರಿಗೂ ಒಂದು ಕ್ಷಣ ಭಯ ಉಂಟಾಗುತ್ತದೆ. ಅದು ಚಿಕ್ಕದಿರಲಿ ದೊಡ್ಡದೇ ಇರಲಿ. ಅದು ಅಷ್ಟೊಂದು ವಿಷಕಾರಿ. ಒಮ್ಮೆ ಕಚ್ಚಿದರೆ ಜೀವವನ್ನೇ ತೆಗೆಯಬಲ್ಲುದು ಎಂದು ಗೊತ್ತಿದ್ದೇ ಎಲ್ಲರಿಗೂ ಅಷ್ಟು ಭಯ. ಇತ್ತೀಚೆಗೆ ಹೈದರಾಬಾದಿನ ಫಲಕ್ನುಮಾದ ಸ್ಮಶಾನದಲ್ಲಿ ಆರು ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಅಷ್ಟು ದೈತ್ಯ ಹಾವು ನೋಡುಗರಲ್ಲಿ ಎಂಥ ಭಯ ಹುಟ್ಟುಹಾಕಿರಬೇಡ! ಆ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿಯ ಸ್ಥಳೀಯರು ಖ್ವಾದ್ರಿ ಚಮನ್ ಸ್ಮಶಾನದಲ್ಲಿ ಹರಿದು ಹೋಗುತ್ತಿರುವ ಹಾವಿನ ವಿಡಿಯೋ ಅನ್ನು ಚಿತ್ರೀಕರಿಸಿದ್ದಾರೆ. ಈ ಹಾವು ಕಾಣಿಸಿಕೊಂಡಾಗ ಮಧ್ಯರಾತ್ರಿ.
A video of a python crawling around in a graveyard at Falaknuma has gone viral on social media. https://t.co/YoF1LGKs6U #Hyderabad #ViralVideo pic.twitter.com/URp3SDlNUE
ಇದನ್ನೂ ಓದಿ— The Siasat Daily (@TheSiasatDaily) October 5, 2022
ಶುಕ್ರವಾರ ಮಧ್ಯರಾತ್ರಿ ಈ ಹಾವು ಸ್ಮಶಾನದಲ್ಲಿ ಕಾಣಿಸಿಕೊಂಡಿದೆ. ಸ್ಮಶಾನದ ಸುತ್ತಮುತ್ತ ಹುಣಸೆಗಿಡಗಳಿದ್ದು, ಸ್ಥಳೀಯ ವಸತಿಗೃಹಗಳಲ್ಲಿ ವಾಸಿಸುತ್ತಿರುವ ಮಕ್ಕಳು ಹುಣಸೆಹಣ್ಣು ಕೀಳಲು ಹೋಗುವ ಪರಿಪಾಠವಿದೆ. ಹಾಗಾಗಿ ಇದು ಅಪಾಯಕಾರಿ ಎಂದರಿತ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ. ಹೇಗಾದರೂ ಈ ಹೆಬ್ಬಾವನ್ನು ಪತ್ತೆ ಹಚ್ಚಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡುವಂತೆ ವಿನಂತಿಸಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ಭಯಬಿದ್ದು, ಸುತ್ತಮುತ್ತಲಿನ ನಿವಾಸಿಗಳ ಸುರಕ್ಷತೆಗೆ ಪ್ರಾರ್ಥಿಸುತ್ತಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:01 pm, Thu, 6 October 22