ಟ್ರಾಫಿಕ್ ಜಾಮ್ಗೆ ಬೇಸತ್ತು ಪೊಲೀಸರಿಗೆ ದೂರು ನೀಡಿದ 6 ವರ್ಷದ ಬಾಲಕ: ವಿಡಿಯೋ ವೈರಲ್
ಇಲ್ಲೊಬ್ಬ 6 ವರ್ಷದ ಬಾಲಕ ಟ್ರಾಫಿಕ್ ಜಾಮ್ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
ನಗರಗಳಲ್ಲಿ ಜನರನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಅದು ಟ್ರಾಫಿಕ್ ಜಾಮ್ (Traffic Jam) . ಎಲ್ಲಿಗಾದರೂ ಹೋಗಬೇಕೆಂದರೆ ಒಂದು ಗಂಟೆ ಮೊದಲೆ ಹೊರಡಬೇಕಪ್ಪಾ ಇಲ್ಲಾಂದ್ರೆ ಟ್ರಾಫಿಕ್ ಜಾಮ್ನಲ್ಲಿ ಸಿಕಾಕೊಳ್ಬೇಕು ಎನ್ನುವುದನ್ನು ಕೇಳಿದ್ದೇವೆ. ಈ ಸಮಸ್ಯೆಗೆ ಯಾರಿಗೆ ದೂರು ನೀಡಿದರೂ ಬಗೆಹರೆಯದ ಸಮಸ್ಯೆ ಎಂದು ಎಲ್ಲರಿಗೂ ಗೊತ್ತು. ದೊಡ್ಡವರಿಂದ ಹಿಡಿದು ಚಿಕ್ಕವರ ವರೆಗೂ ಕಿರಿಕಿರಿ ಉಂಟುಮಾಡುತ್ತದೆ ಈ ಟ್ರಾಫಿಕ್ ಜಾಮ್ ಸಮಸ್ಯೆ. ಇಲ್ಲೊಬ್ಬ 6 ವರ್ಷದ ಬಾಲಕ (6 year Old Boy) ಟ್ರಾಫಿಕ್ ಜಾಮ್ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ. ಆಂಧ್ರಪ್ರದೇಶದ ತನ್ನ ಶಾಲೆಯ ಬಳಿ ಟ್ರಾಫಿಕ್ ದಟ್ಟಣೆಯಿಂದ ತುಂಬಾ ತೊಂದರೆಗೀಡಾದ ಬಾಲಕ ಹತಾಶೆಯನ್ನು ಹೊರಹಾಕಲು ಪೊಲೀಸ್ ಠಾಣೆಗೆ (Police Station) ಹೋದನು. ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಬಾಲಕ ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#AndhraPradesh: A 6-year-old UKG student Karthikeya of #Palamaner in #Chittoordistrict complaints to the police, on traffic issues near his school. He asked the police to visit the school and solve the problem.@NewsMeter_In @CoreenaSuares2 @ChittoorPolice @APPOLICE100 pic.twitter.com/RxiJpSYzY0
— SriLakshmi Muttevi (@SriLakshmi_10) March 19, 2022
ಯುಕೆಜಿ ವಿದ್ಯಾರ್ಥಿ ಗುರುವಾರ ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದನು. ಡ್ರೈನೇಜ್ ಕಾಮಗಾರಿ ಹಾಗೂ ಟ್ರ್ಯಾಕ್ಟರ್ ಗಳಿಂದ ಅಗೆದ ರಸ್ತೆಗಳು ಸಂಚಾರಕ್ಕೆ ಕಾರಣವಾಗುತ್ತಿದೆ ಎಂದು ಕಾರ್ತಿಕ್ ಎಂಬ ಬಾಲಕ ಪಲಮನೇರ್ ವೃತ್ತ ನಿರೀಕ್ಷಕ ಎನ್.ಭಾಸ್ಕರ್ ಅವರಿಗೆ ತಿಳಿಸಿದ್ದಾನೆ. ಈ ಸಮಸ್ಯೆಗಳ ಪರಿಹಾರಕ್ಕೆ ಸ್ಥಳಕ್ಕೆ ಭೇಟಿ ನೀಡುವಂತೆ ಅಧಿಕಾರಿಗೆ ಸೂಚಿಸಿದ್ದು, ಹುಡುಗನ ಮುಗ್ಧತೆ ಮತ್ತು ಆತ್ಮವಿಶ್ವಾಸವು ಪೊಲೀಸ್ ಅಧಿಕಾರಿಗಳನ್ನು ಮೆಚ್ಚಿಕೊಂಡಿದ್ದಾರೆ. ಈ ವೇಳೆ ಅವನಿಗೆ ಸಿಹಿತಿಂಡಿಗಳನ್ನು ನೀಡಿದರು ಮತ್ತು ವಿಷಯವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಎನ್ ಭಾಸ್ಕರ್ ಅವರು ತಮ್ಮ ಫೋನ್ ಸಂಖ್ಯೆಯನ್ನು ಸಹ ನೀಡಿ ಶಾಲೆಗೆ ಹೋಗುವಾಗ ಅಂತಹ ಸಮಸ್ಯೆಗಳನ್ನು ಎದುರಿಸಿದಾಗ ಅವರಿಗೆ ಕರೆ ಮಾಡಲು ಹೇಳಿದ್ದಾರೆ.
ಬಾಲಕ ಮತ್ತು ಪೊಲೀಸ್ ಅಧಿಕಾರಿಗಳ ನಡುವಿನ ಸಂಭಾಷಣೆ ವಿಡಿಯೋವನ್ನು ಶ್ರೀಲಕ್ಷ್ಮಿ ಮುತ್ತೇವಿ ಡನ್ನುವವರು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಬಾಲಕನ ಧೈರ್ಯಕ್ಕೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು ಮಕ್ಕಳೂ ಕೂಡ ಜವಾಬ್ದಾರರಾಗುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಬೀದಿ ಬದಿಯಲ್ಲಿದ್ದ ನಿರ್ಗತಿಕ ವ್ಯಕ್ತಿಯನ್ನು ಮದುವೆಯಾದ ಮಹಿಳೆ: ಇವರ ಸಿಂಪಲ್ ಲವ್ ಸ್ಟೋರಿ ಈಗ ಸಖತ್ ವೈರಲ್