Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ

ಅಜ್ಜಿಗೆ 89 ವರ್ಷ. ವಯಸ್ಸು ಕೇವಲ ಸಂಖ್ಯೆ ಅಷ್ಟೇ! ಮನಸ್ಸಿದ್ದರೆ ಎಂದಿಗೂ ಖುಷಿಯಿಂದರಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ
ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ
Edited By:

Updated on: Aug 26, 2021 | 12:14 PM

ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋಗಳು ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಮಾತ್ರ ಮನಸ್ಸಿಗೆ ಇಷ್ಟವಾಗುವಂಥದ್ದು. ಸ್ಪೂರ್ತಿ ತುಂಬ ವಿಡಿಯೋಗಳಿಂದ ಹಿಡಿದು ಎಚ್ಚರಿಕೆಯ ಸಂದೇಶವನ್ನು ಸಾರುವ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಇದೀಗ ಫುಲ್ ವೈರಲ್ ಆದ ವಿಡಿಯೋದಲ್ಲಿ ಮೊಮ್ಮಗನ ಜತೆ ಅಜ್ಜಿ ಸಕತ್ ಸ್ಟೆಪ್ ಹಾಕಿದ್ದಾರೆ. ನೀವೂ ವಿಡಿಯೋವನ್ನು ಮಿಸ್​ ಮಾಡ್ಕೊಳ್ಳೋ ಹಾಗಿಲ್ಲ!

ಅಜ್ಜಿಗೆ 89 ವರ್ಷ. ವಯಸ್ಸು ಕೇವಲ ಸಂಖ್ಯೆ ಅಷ್ಟೇ! ಮನಸ್ಸಿದ್ದರೆ ಎಂದಿಗೂ ಖುಷಿಯಿಂದರಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ಮೊಮ್ಮಗ ಕುಣಿಯುತ್ತಿದ್ದಂತೆಯೇ ಅಜ್ಜೀಯು ಸಹ ಆತನೊಂದಿಗೆ ಹೆಜ್ಜೆ ಹಾಕಿದ್ದಾರೆ. ಅಜ್ಜಿ ಮೊಮ್ಮಗನ ಡಾನ್ಸ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ವಿಡಿಯೋ ಮಜವಾಗಿದೆ ನೀವೂ ನೋಡಿ.

ಹಾಡಿನ ತಾಳಕ್ಕೆ ತಕ್ಕಂತೆಯೇ ಹಳದಿ ಮತ್ತು ಬಿಳಿ ಬಣ್ಣದ ಸೀರೆ ಉಟ್ಟ ಅಜ್ಜಿ ನೃತ್ಯ ಮಾಡುತ್ತಿದ್ದಾರೆ. ಮೊಮ್ಮಗನನ್ನು ನೋಡುತ್ತಾ ಅವರಂತೆಯೇ ಅನುಕರಿಸುತ್ತಿದ್ದಾರೆ. ಈ ವಯಸ್ಸಿನಲ್ಲಿಯೂ ಅಜ್ಜಿಯ ಉಮೇದು ನೋಡಿದ ನೆಟ್ಟಿಗರು ಶ್ಲಾಘಿಸಿದ್ದಾರೆ. ಅಜ್ಜಿಯ ಉತ್ಸಾಹ ನೋಡಿ ಖುಷಿಯಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಜ್ಜಿ ಮೊಮ್ಮಗನ ಸಂಬಂಧವೇ ಅಂಥದ್ದು. ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಳ್ಳುವ ಗುಣದವರು. ಮೊಮ್ಮಗ ಅಜ್ಜಿಯ ಕಾಲೆಳೆಯುತ್ತಿದ್ದರೆ, ನಾನೇನೂ ಕಡಿಮೆಯಿಲ್ಲ ಎಂದು ಅಜ್ಜಿ ಉತ್ತರ ಕೊಟ್ಟ ದೃಶ್ಯದ ವಿಡಿಯೋಗಳು ಈ ಹಿಂದೆ ಫುಲ್ ವೈರಲ್ ಆಗಿದ್ದವು. ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, 26 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಅಜ್ಜಿಯ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು ಹೃದಯದ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ಅನಾಥ ಆನೆ ಮರಿಗೆ ಬಾಡಿಗೆ ತಾಯಿಯಾದ ಕೀಪರ್; ಹೃದಯಸ್ಪರ್ಶಿ ವಿಡಿಯೋ ವೈರಲ್

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

(89 years old dadi dance with grandson video goes viral)

Published On - 12:10 pm, Thu, 26 August 21