94 ವರ್ಷದ ಅಜ್ಜಿಯ ಮನೆಗೇ ಬಂದಿಳಿದ ಮ್ಯೂಸಿಕ್ ಬ್ಯಾಂಡ್​; ಹನಿಗಣ್ಣಾದ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Nov 05, 2022 | 5:07 PM

Music Bands : ಕಲಾವಿದರಿದ್ದಲ್ಲಿಗೆ ಶ್ರೋತೃಗಳು ಹೋಗುವುದು ನಿಯಮ. ಆದರೆ ಇಲ್ಲಿ ಉಲ್ಟಾ ಆಗಿದೆ. ಹಾಸಿಗೆ ಹಿಡಿದ ಅಜ್ಜಿಯೊಬ್ಬರು ತನ್ನ ನೆಚ್ಚಿನ ಸಂಗೀತ ಕಛೇರಿಗೆ ಹೋಗಲಾಗುವುದಿಲ್ಲ ಎಂದು ಬೇಸರಿಸಿಕೊಂಡಾಗ ಈ ಅಚ್ಚರಿ ಸಂಭವಿಸಿದೆ.

94 ವರ್ಷದ ಅಜ್ಜಿಯ ಮನೆಗೇ ಬಂದಿಳಿದ ಮ್ಯೂಸಿಕ್ ಬ್ಯಾಂಡ್​; ಹನಿಗಣ್ಣಾದ ನೆಟ್ಟಿಗರು
94 year old woman unable to go to concert gets a surprise from her favourite band
Follow us on

Viral Video : 94 ವರ್ಷದ ಅಜ್ಜಿಯೊಬ್ಬರಿಗೆ ತಮ್ಮ ಮೆಚ್ಚಿನ ಬ್ಯಾಂಡ್​ನ ಸಂಗೀತ ಕಛೇರಿಗೆ ಹೋಗಲು ಸಾಧ್ಯವಾಗದೆ ಬೇಸರದಲ್ಲಿರುತ್ತಾರೆ. ಆದರೆ ಇದನ್ನು ಅರಿತ ಆ ಬ್ಯಾಂಡ್​ ನೇರ ಅಜ್ಜಿಯ ಮನೆಗೆ ಬಂದು ಪುಟ್ಟ ಸಂಗೀತ ಕಛೇರಿ ಮಾಡಿ ಅಚ್ಚರಿ ಮತ್ತು ಅಪಾರ ಸಂತೋಷವನ್ನುಂಟುಮಾಡಿದೆ. ಇದೀಗ ಈ ವಿಡಿಯೋ ಇನ್​ಸ್ಟಾಗ್ರಾಂನ್ಲಲಿ ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗುತ್ತಿದ್ದಾರೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

@cosimoandthehotcoals ಪುಟದಲ್ಲಿ ಮೂಲ ವಿಡಿಯೋ ಹಂಚಿಕೊಳ್ಳಲಾಗಿದೆ. ಗುಡ್​ನ್ಯೂಸ್​ ಮೂವ್​ಮೆಂಟ್ ನಲ್ಲಿ ಇದನ್ನು ಹಂಚಿಕೊಂಡ ನಂತರ ಹೆಚ್ಚು ಜನರನ್ನು ತಲುಪಿದೆ. ಕಲಾವಿದರ ಸಂಗೀತ ಕೇಳಿ ಅಜ್ಜಿಯ ಹೃದಯತುಂಬಿ ಬಂದಿದೆ. ಈತನಕ 1.4 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಇಂದು ಆನ್​ಲೈನ್​ನಲ್ಲಿ ನೋಡುತ್ತಿರುವ ಅತ್ಯುತ್ತಮವಾದ ಸಂಗತಿ ಇದು ಎಂದು ಒಬ್ಬರು ಹೇಳಿದ್ದಾರೆ. ಬಹಳ ಅದ್ಭುತವಾದ ಕೆಲಸವನ್ನು ಮಾಡಿದ್ದೀರಿ. ಸಂಗೀತ ಈ ಅಜ್ಜಿಗೆ ಶಾಂತಿ ಮತ್ತು ಸಂತೋಷವನ್ನು ತರುತ್ತದೆ ಎಂದಿದ್ದಾರೆ ಇನ್ನೂ ಒಬ್ಬರು. ನೋಡಿ ಅವಳ ಕಾಲ್ಬೆರಳು ತಾಳ ಹಾಕುತ್ತಿದೆ ಎಂದಿದ್ದಾರೆ ಇನ್ನೂ ಒಬ್ಬರು. ಮಾನವೀಯತೆಯ ಮೇಲೆ ಭರವಸೆ ಹೆಚ್ಚಿಸುವ ಇಂಥ ಸಂಗತಿಗಳು ಹೆಚ್ಚಲಿ ಎಂದಿದ್ದಾರೆ ಮಗದೊಬ್ಬರು.

ನಿಮಗೇನು ಅನ್ನಿಸುತ್ತದೆ ಈ ವಿಡಿಯೋ ನೋಡುತ್ತಿದ್ದರೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ