ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದಲೇ ಜನಪ್ರಿಯತೆಯನ್ನು ಪಡೆದು ಅಭಿಮಾನಿಗಳನ್ನು ಪಡೆದುಕೊಳ್ಳುವ ಯವಕ, ಯುವತಿಯರು ಅದೆಷ್ಟೋ ಇದ್ದಾರೆ. ಸೋಶಿಯಲ್ ಮೀಡಿಯಾ ಅಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವ ಮಾತಿಗೆ. ಹೌದು ಕೆಲವೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚಾಲೆಂಜ್ ಹಾಕಲಾಗುತ್ತದೆ. ಇದು ಅದೆಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿರುವ ಪ್ರಸಂಗಗಳು ಇವೆ. ಇದೇ ರೀತಿಯ ಘಟನೆ ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದಿದೆ. ಟಿಕ್ ಟಾಕ್ನ ಅತಿಯಾದ ಬಳಕೆ ಬಾಲಕನೊರ್ವನ ಪ್ರಾಣವನ್ನೇ ತೆಗೆದಿದೆ.
ಅಮೆರಿಕದ ಓಹಿಯೋದ ಜಾಕೋಬ್ ಸ್ಟೀವನ್ಸ್ (13) ಎನ್ನುವ ಅಪ್ರಾಪ್ತ ಬಾಲಕ ಟಿಕ್ ಟಾಕ್ನಲ್ಲಿ ನೀಡಲಾಗಿದ್ದ ಸವಾಲೊಂದನ್ನು ಸ್ವೀಕರಿಸಿದ್ದಾನೆ. ಇದಾದ ಬಳಿಕ ಅನಾರೋಗ್ಯದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಪತ್ನಿಗೆ ಕಚ್ಚಿತು ಹಾವು: ಪತಿರಾಯ ಪತ್ನಿಗಿಂತ ಮೊದಲು ಹಾವನ್ನು ಆಸ್ಪತ್ರೆಗೆ ಹೊತ್ತು ತಂದ! ಯಾಕೆ ಗೊತ್ತಾ?
ಜಾಕೋಬ್ ಸ್ಟೀವನ್ಸ್ ತನ್ನ ಟಿಕ್ ಟಾಕ್ ಸ್ನೇಹಿತರೊಂದಿಗೆ ಬೆನಾಡ್ರಿಲ್ ಮಾತ್ರೆ ( ನಿದ್ದೆ ಮಾತ್ರೆ) ಯಾರು ಹೆಚ್ಚು ಸೇವಿಸುತ್ತಾರೆ ಎಂಬ ಚಾಲೆಂಜ್ನಲ್ಲಿ ಭಾಗಿಯಾಗಿದ್ದಾನೆ. ಈ ಚಾಲೆಂಜ್ನ ಭಾಗವಾಗಿ ಸ್ಟೀವನ್ಸ್ 12 -14 ಬೆನಾಡ್ರಿಲ್ ಮಾತ್ರೆ ಸೇವಿಸಿದ್ದಾನೆ. ಇದು ಆತನಿಗೆ ಓವರ್ ಡೋಸ್ ಆಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಒಂದು ವಾರದ ನಂತರ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾಗಿ ABC6.comನ ವರದಿಯಿಂದ ತಿಳಿದು ಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:02 pm, Tue, 18 April 23