ಮಧ್ಯಪ್ರದೇಶ: ವಾರ್ಷಿಕ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ 17ರ ಹರೆಯದ ಹುಡುಗಿಯೊಬ್ಬಳು ತನ್ನ ಹೆತ್ತವರು ಗದರಿಸಬಹುದೆಂಬ ಭಯದಿಂದ ತನ್ನ ಅಪಹರಣದ ಕಥೆಯನ್ನು ತಾನೇ ಹೆಣೆದಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಆಕೆ ತನ್ನ ಪೋಷಕರನ್ನು ಹೇಗೆ ಎದುರಿಸುವುದು ಎಂಬ ಭಯದಿಂದ ಇಂದೋರ್ನಿಂದ ನೆರೆಯ ಉಜ್ಜಯಿನಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಇಂದೋರ್ ಕಾಲೇಜೊಂದರಲ್ಲಿ ಬ್ಯಾಚುಲರ್ ಆಫ್ ಆಟ್ಸ್ (ಬಿಎ) ಕೋರ್ಸ್ನ ಮೊದದ ವರ್ಷ ಓದುತ್ತಿದ್ದ ಈ ಬಾಲಕಿಯನ್ನು ಇಂದೋರ್ನಿಂದ ಸುಮಾರು 50 ಕಿಮೀ ದೂರದಲ್ಲಿರುವ ಉಜ್ಜಯಿನಿಯಿಂದ ಸುರಕ್ಷಿತವಾಗಿ ಕರೆತಂದ ನಂತರ ಆಕೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪರೀಕ್ಷೆಯ ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ತನ್ನ ಮಗಳು ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ಇಂದೋರ್ನ ದೇವಸ್ಥಾನದ ಬಳಿಯಿಂದ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಬಾಲಕಿಯ ತಂದೆ ಶುಕ್ರವಾರ ರಾತ್ರಿ ದೂರು ನೀಡಿದ್ದಾರೆ’ ಎಂದು ಇಂದೋರ್ನ ಬಂಗಾಂಗ ಪೋಲಿಸಗ ಠಾಣೆ ಇನ್ಸ್ಪೆಕ್ಟರ್ ರಾಜೇಂದ್ರ ಸೋನಿ ಹೇಳಿದ್ದಾರೆ.
ತನ್ನ ಮಗಳು ಅಪರಿಚಿತ ಸಂಖ್ಯೆಯಿಂದ ತನಗೆ ಕರೆ ಮಾಡಿ ಇಂದೋರ್ನಲ್ಲಿ ಆಕೆಯನ್ನು ಅಪಹರಿಸಿರುವುದಾಗಿ ಹೇಳಿದಳು ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ರಿಕ್ಷಾ ಹತ್ತುವ ಮೊದಲು ದೇವಸ್ಥಾನದ ಸಮೀಪದಲ್ಲಿ ತನ್ನನ್ನು ಪ್ರಾದ್ಯಾಪಕರೊಬ್ಬರು ಡ್ರಾಪ್ ಮಾಡಿದ್ದಾರೆ. ನಂತರ ರಿಕ್ಷಾ ಹತ್ತಿದ ಬಳಿಕ ರಿಕ್ಷಾ ಡ್ರೆವರ್ ತನ್ನನ್ನು ಯಾವುದೋ ನಿರ್ಜನ ಸ್ಥಳಕ್ಕೆ ಕರೆದೊಯ್ದು ಬಾಯಿಗೆ ಬಟ್ಟೆ ಕಟ್ಟಿ ಪ್ರಜ್ಞಾಹೀನಳನ್ನಾಗಿ ಮಾಡಿದ ಎಂದು ಆಕೆ ತನ್ನ ತಂದೆಗೆ ಕರೆ ಮಾಡಿ ಹೇಳಿದ್ದಾಳೆ.
ಇದನ್ನೂ ಓದಿ;Viral News : ಶಸ್ತ್ರಚಿಕಿತ್ಸೆ ಮೂಲಕ ಗುಪ್ತಾಂಗದಿಂದ ಬುಲೆಟ್ ತೆಗೆದು ಹಾಕಿದ ಮಹಿಳೆ!
ಬಾಲಕಿ ಹೇಳಿದ ಪ್ರದೇಶದ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಾಲಕಿ ಹೇಳಿದಂತೆ ಯಾವುದೇ ಘಟನೆಗಳು ನಡೆದಿಲ್ಲ ಎಂದು ಪೋಲಿಸರ ಗಮನಕ್ಕೆ ಬಂತು. ಈ ಮಧ್ಯೆ ಉಜ್ಜಯಿನಿಯ ರೆಸ್ಟೋರೆಂಟ್ ಒಂದರಲ್ಲಿ ಹುಡುಗಿಯೊಬ್ಬಳು ಕುಳಿತಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ಸಿಕ್ಕಿತು ಮತ್ತು ಆ ಹುಡುಗಿಯ ಫೋಟೋ ದೂರುದಾರರು ನೀಡಿದ ಫೋಟೊಗೆ ಹೊಂದಿಕೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಬಾಲಕಿಯನ್ನು ಇಂದೋರ್ಗೆ ಕರೆತಂದು ಆಕೆಯ ಬ್ಯಾಗ್ನ್ನು ಪರಿಶೀಲಿಸಲಾಯಿತು. ಅದರಲ್ಲಿ ಇಂದೋರ್-ಉಜ್ಜಯಿನಿ ಬಸ್ ಟಿಕೆಟ್ ಮತ್ತು ಉಜ್ಜಯಿನಿಯ ರೆಸ್ಟೋರೆಂಟ್ನ ಬಿಲ್ ಪತ್ತೆಯಾಗಿದೆ. ನಂತರ ವೈದ್ಯರು ಆಕೆಗೆ ಕೌನ್ಸೆಲಿಂಗ್ ಮಾಡಿದಾಗ, ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಹೆತ್ತವರನ್ನು ಎದುರಿಸುವ ಧೈರ್ಯ ಇಲ್ಲದೆ ಅಪಹರಣದ ನಾಟಕವಾಡಬೇಕಾಯಿತು ಎಂದು ಹೇಳಿದ್ದಾಳೆ. ಕೌನ್ಸೆಲಿಂಗ್ ಮುಗಿದ ಬಳಿಕ ಆ ಬಾಲಕಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ