ಈ ಬಾಲಕನ ಅದ್ಭುತ ಪ್ರತಿಭೆಗೆ ನೀವು ತಲೆದೂಗಲೇಬೇಕು!

| Updated By: Digi Tech Desk

Updated on: Jul 15, 2021 | 6:05 PM

Coimbatore: ತಮಿಳುನಾಡಿನ ಕೊಯಮತ್ತೂರಿನ ಈ ಪುಟ್ಟ ಬಾಲಕನ ಪ್ರತಿಭೆಯನ್ನು ನೋಡಿ ನೀವು ಬೆರಗಾಗುತ್ತೀರಿ!

ಈ ಬಾಲಕನ ಅದ್ಭುತ ಪ್ರತಿಭೆಗೆ ನೀವು ತಲೆದೂಗಲೇಬೇಕು!
Screen grab from Ritu's viral video
Follow us on

ಅ, ಆ, ಇ, ಈ ಕಲಿಯೋ ವಯಸ್ಸಿನಲ್ಲಿ ಈ ಏಳು ವರ್ಷದ ಬಾಲಕ ಯೂಟ್ಯೂಬ್ನಲ್ಲಿ ತನ್ನ ಕಿರು ವಿಡಿಯೊಗಳನ್ನು ಪೋಸ್ಟ್ ಮಾಡಿದ ಕಾರಣದಿಂದಾಗಿ ರಾತ್ರೋ ರಾತ್ರಿ ಜನಪ್ರಿಯನಾಗಿದ್ದಾನೆ. ಹಾಗಾದರೆ ಈ ವಿಡಿಯೊದಲ್ಲಿ ಏನಿದೆ? ಈ ಹುಡುಗನ ಅಪರೂಪದ ಪ್ರತೆಭೆಯೇನು? ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕೊಯಮತ್ತೂರಿನ, ಈ ಬಾಲಕನ ಹೆಸರು ರಿತು. ಇವನು ಚಿಕ್ಕ ವಯಸ್ಸಿನಿಂದಲೂ, ಯಾವುದೇ ಪಠ್ಯಗಳನ್ನ, ಕಾವ್ಯ- ಕವಿತೆಗಳನ್ನ ಅಥವಾ ಬೇರೆ ಯಾವುದೇ ವಿಷಯಗಳನ್ನ ಕಂಠಪಾಠ ಮಾಡುವ ಮತ್ತು ಅಭಿನಯಿಸುವ ಸಾಮರ್ಥ್ಯ ಹೊಂದಿದ್ದಾನೆ. ಅವನ ಈ ಪ್ರತಿಭೆಯನ್ನು ನೋಡಿ ಅವನ ತಂದೆಯೇ ಅಚ್ಚರಿಗೊಂಡಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ, ರಿತು ಹೆಚ್ಚಿನ ಸಮಯ ಮೊಬೈಲ್ ಫೋನ್‌ನಲ್ಲಿ ಸುದ್ದಿ ತುಣುಕುಗಳನ್ನು ನೋಡುತ್ತಿದ್ದ. ಮಗನ ತುಂಟತನದ ವಿಡಿಯೊಗಳನ್ನು ದಾಖಲಿಸಲು ಅವನ ತಂದೆ ಮೊದಲೇ ಯೂಟ್ಯೂಬ್ ಪುಟವನ್ನು ಪ್ರಾರಂಭಿಸಿದ್ದರು. ಆದರೆ ಅವರ ಮಗ ಕಿರು ನಾಟಕದಲ್ಲಿ ನಟಿಸುವ ಆಲೋಚನೆಯನ್ನು  ವ್ಯಕ್ತಪಡಿಸಿದಾಗ ಅವರಿಗೆ ಆಶ್ಚರ್ಯವಾಯಿತು.

ಪ್ರಾಯೋಗಿಕವಾಗಿ, ಇವರಿಬ್ಬರು ಸುದ್ದಿ ವರದಿಯ ಮೇಲೆ ಒಂದು ಕಿರು ನಾಟಕವನ್ನು ರಚಿಸಿದರು. ಅದರಲ್ಲಿ ನಿರೂಪಕ, ಕ್ಷೇತ್ರ ವರದಿಗಾರ ಮತ್ತು ಸಾಮಾನ್ಯ ವ್ಯಕ್ತಿ ಈ ಮೂರು ಪಾತ್ರಗಳನ್ನು ರಿತು ಒಬ್ಬನೇ ನಿರ್ವಹಿಸಿದ. ಎಂಟು ನಿಮಿಷಗಳ ಈ ಕಿರು ನಾಟಕ, ರಿತು ಅವರ ಪ್ರತಿಭೆಯ ಒಂದು ಉದಾಹರಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಅವನು ಪ್ರತಿ ಪಾತ್ರವನ್ನು ಅತ್ಯಂತ ಪರಿಪೂರ್ಣತೆಯಿಂದ ಚಿತ್ರಿಸುತ್ತಾನೆ. ಅತ್ಯಂತ ಸ್ಪಷ್ಟವಾಗಿ ರಿತು ತಮಿಳನ್ನು ಉಚ್ಚರಿಸುವುದನ್ನು ನೋಡಿ ನೋಡುಗರು ಅನೇಕ ಖ್ಯಾತ ತಮಿಳು ಪತ್ರಕರ್ತರನ್ನು ನೆನಪಿಸಿಕೊಂಡಿದ್ದಾರೆ.

‘ರಿತು ರಾಕ್ಸ್’ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವು  ಲಭ್ಯವಾದ ಕೇವಲ ನಾಲ್ಕು ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ವೈರಲ್ ಆಗಿದೆ. ರಿತು ಬಳಿ ಧಿಡೀರ್ ಜನಪ್ರಿಯತೆಯ ಬಗ್ಗೆ ನಿಮಗೆ ತುಂಬಾ ಸಂತೋಷವಾಗಿರಬೇಕಲ್ಲವೇ ಎಂದು ಕೇಳಿದ್ದಕ್ಕೆ, ಜನಪ್ರಿಯತೆಯ ಪರಿಕಲ್ಪನೆಯನ್ನೇ ರಿತುಗೆ ಗ್ರಹಿಸಲು ಸಾಧ್ಯವಾಗಲಿಲ್ಲ. ಅತ್ಯಂತ ಮುಗ್ದವಾಗಿ ತಾನು ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದೇನೆಂದೂ ಮತ್ತು ಭವಿಷ್ಯದಲ್ಲಿ ಗಗನಯಾತ್ರಿಯಾಗಲು ಬಯಸುತ್ತೇನೆಂದೂ ರಿತು ಹೇಳಿದ್ದಾರೆ. ರಿತು ಚಾನೆಲ್‌ನಲ್ಲಿ ಈಗಾಗಲೇ 81,000 ಕ್ಕೂ ಅಧಿಕ ಚಂದಾದಾರರಿದ್ದಾರೆ.

ವಿಡಿಯೊ ಇಲ್ಲದೆ:

ರಿತು ತಾಯಿ ಆಶಾ, ನಾನು ಕೇವಲ ನನ್ನ ಮಗನ ಪ್ರತಭೆಯನ್ನು  ಪ್ರದರ್ಶಿಸುವ ಉದ್ದೇಶವನ್ನು ಹೊಂದಿದ್ದೆ. ಇಷ್ಟು ಕಡಿಮೆ ಅವಧಿಯಲ್ಲಿ ಅವನು ಗಳಿಸಿದ ಜನಪ್ರಿಯತೆಗೆ ನಾನು ಮಾನಸಿಕವಾಗಿ ತಯಾರಾಗಿರಲಿಲ್ಲ ಮತ್ತು ಅದನ್ನು ಹೇಗೆ ನಿಭಾಯಿಸಬೇಕು ಎಂದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ವಿಡಿಯೊಗಳನ್ನು ರಚಿಸಲು, ನಾನು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ, ತಮಾಡಾ ಮೀಡಿಯಾದೊಂದಿಗೆ ಪಾಲುದಾರಿಕೆ ಹೊಂದಿದ್ದೆ ಮತ್ತು ಈಗ ನನ್ನ ಮಗನ ಯಶಸ್ಸಿನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ರಿತು ಅವರ ತಂದೆ ಜ್ಯೋತಿ ರಾಜ್ ಹೇಳಿದ್ದಾರೆ.

ರಿತುವಿನ ಮತ್ತೊಂದು ಆಸಕ್ತಿಕರ ವಿಡಿಯೊ ಇಲ್ಲಿದೆ:

ಇದನ್ನೂ ನೋಡಿ: ಕದ್ದ ಕೈನಲ್ಲೇ ಕಳ್ಳನೊಬ್ಬ ಸಿಕ್ಕಿಬಿದ್ರೆ ಕಳ್ಳನ ಪರಿಸ್ಥಿತಿ ಹೇಗಿರಬೇಡ ಹೇಳಿ? ವಿಡಿಯೋ ವೈರಲ್​

ಇದನ್ನೂ ನೋಡಿ: Viral Video: ಜೋಕಾಲಿ ಆಡ್ತಾ ಆಡ್ತಾ ಬಂಡೆ ಅಂಚಿನಿಂದ ಬಿದ್ದ ಯುವತಿಯರು; ಭಯಾನಕ ದೃಶ್ಯದ ವಿಡಿಯೋ ವೈರಲ್

(A 7 year kid Ritu from Coimbatore become sensation on social media for his versatile acting and dialouge delivery skill)

Published On - 5:49 pm, Thu, 15 July 21