ಮಕ್ಕಳು ತಂದೆ ತಾಯಿಯ ದೊಡ್ಡ ಸಂಪತ್ತು. ಅದು ಮನುಷ್ಯರಾಗಿರಲಿ ಅಥವಾ ಪ್ರಾಣಿಯಾಗಿರಲಿ. ಮಕ್ಕಳಿಗೆ ಅಪಾಯವಾದರೆ ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಕೊಳದಲ್ಲಿ ಬಿದ್ದ ತನ್ನ ಮರಿ ಆನೆಯನ್ನು ಎರಡು ಆನೆಗಳು ರಕ್ಷಣೆ ಮಾಡಿರುವಂತಹ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಶನಿವಾರದಂದು ಗೇಬ್ರಿಯೆಲ್ ಕಾರ್ನೊ ಎಂಬ ಹೆಸರಿನ ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ತಾಯಿ ಮತ್ತು ಮರಿ ಆನೆ ಕೊಳದಲ್ಲಿ ನೀರು ಕುಡಿಯಲು ಹೋದಾಗ ಆಕಸ್ಮಿಕವಾಗಿ ಮರಿಯಾನೆ ನೀರಿನ ಕೊಳಕ್ಕೆ ಬಿಳುತ್ತದೆ. ಸ್ಥಳದಲ್ಲಿದ್ದ ತಾಯಾನೆ ಕೂಡಲೇ ಮರಿಯಾನೆಯನ್ನು ರಕ್ಷಿಸಲು ಮುಂದಾಗುತ್ತದೆ. ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿದ್ದ ಮತ್ತೊಂದು ಆನೆ ಓಡಿಬಂದು ರಕ್ಷಣೆಗೆ ಪ್ರಯತ್ನಿಸುತ್ತದೆ.
ಇದನ್ನೂ ಓದಿ: ಪ್ರಿಯಕರನಿಂದ ಮೋಸಹೋದ ಆಸ್ಸೀ ಮಹಿಳೆ ಮಾಡಿದ್ದೇನು ಗೊತ್ತಾ? ಈ ಕತೆ ಓದಿ!
In the Seoul zoo, two elephants rescued baby elephant drowned in the pool pic.twitter.com/zLbtm84EDV
— Gabriele Corno (@Gabriele_Corno) August 13, 2022
ಇದನ್ನೂ ಓದಿ: Udupi News: ಚಿರತೆ ದಾಳಿಯಿಂದ ಪವಾಡ ಸದೃಶವಾಗಿ ಬದುಕುಳಿದ ಸಾಕುನಾಯಿ
ಕೊಳದ ಮೇಲಿಂದ ರಕ್ಷಣೆಗೆ ಪ್ರಯತ್ನಿಸಿದರು ಸಾಧ್ಯವಾಗದಿದ್ದಾಗ ನೇರವಾಗಿ ಕೊಳದಲ್ಲಿ ಇಳಿದು ಮರಿಯಾನೆಯನ್ನು ರಕ್ಷಣೆ ಮಾಡುತ್ತವೆ. ಪೋಸ್ಟ್ ಪ್ರಕಾರ, ಈ ವಿಡಿಯೋವನ್ನು ಸಿಯೋಲ್ ಪಾರ್ಕ್‌ನಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋವನ್ನು ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 6.7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಮತ್ತು 34,000 ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಸಾವಿರಾರು ಬಳಕೆದಾರರು ಪೋಸ್ಟ್ನ್ನು ರಿಟ್ವೀಟ್ ಮಾಡಿದ್ದು, ಸಾಕಷ್ಟು ಜನರು ಒಳ್ಳೆಯ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.