
ಆನೆಗಳು (elephant) ಆಟ ತುಂಟಾಟಗಳನ್ನು ನೋಡುವುದೇ ಕಣ್ಣಿನ ಹಬ್ಬ. ಈ ಪುಟಾಣಿ ಆನೆಗಳು ಮಾಡುವ ಚೇಷ್ಟೆಗಳು ಅಷ್ಟಿಷ್ಟಲ್ಲ. ಕೆಲವೊಮ್ಮೆ ತನ್ನ ಮನುಷ್ಯರ ಜೊತೆಗೆ ಪ್ರೀತಿಯಿಂದ ವರ್ತಿಸುತ್ತವೆ. ಎಲ್ಲರ ಮನಸ್ಸನ್ನು ಗೆಲ್ಲುತ್ತವೆ. ಇದೀಗ ಇಂತಹ ಮರಿಯಾನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಬಿರುಗಾಳಿ ಎಬ್ಬಿಸಿದೆ. ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ಮರಿಯಾನೆಯೊಂದು ತಬ್ಬಿಕೊಂಡು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
@Amaazing Nature ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮರಿಯಾನೆ ಹಾಗೂ ದಂಪತಿಯ ನಡುವಿನ ಸಂವಾದ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಈ ವಿಡಿಯೋಗೆ ಮರಿ ಆನೆಗಳು ಮನುಷ್ಯರು ತುಂಬಾ ಮುದ್ದಾಗಿದ್ದಾರೆಂದು ಭಾವಿಸುತ್ತವೆ ಮತ್ತು ನಮ್ಮನ್ನು ಅಪ್ಪಿಕೊಳ್ಳಲು ಬಯಸುತ್ತವೆ” ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ಕ್ಲಿಪ್‌ನಲ್ಲಿ ದಂಪತಿಯೂ ಪ್ರಶಾಂತವಾದ ಸ್ಥಳದಲ್ಲಿ ಸಮಯವನ್ನು ಕಳೆಯುತ್ತಿದ್ದಾರೆ. ಈ ವೇಳೆಯಲ್ಲಿ ಮರಿಯಾನೆಯೂ ಈ ಜೋಡಿಯನ್ನು ಹಿಂದಿನಿಂದ ಸಮೀಪಿಸುವುದರೊಂದಿಗೆ ವಿಡಿಯೋವು ಪ್ರಾರಂಭವಾಗುತ್ತದೆ. ಈ ದಂಪತಿ ತಿರುಗಿ ನೋಡುತ್ತಿದ್ದಂತೆ ಈ ಆನೆ ಮರಿ ತನ್ನ ಸೊಂಡಿಲನ್ನು ಚಾಚಿ, ಅವರ ಭುಜಗಳ ಮೇಲೆ ಇಡುತ್ತದೆ. ಪ್ರೀತಿಯಿಂದ ತನ್ನ ಮುಂಭಾಗದ ಕಾಲುಗಳನ್ನು ಮೇಲೆತ್ತಿ ವ್ಯಕ್ತಿಯ ಭುಜದ ಮೇಲೆ ಇಡುತ್ತದೆ. ಈ ದೃಶ್ಯವನ್ನು ನೋಡಿದರೆ ಪ್ರೀತಿಯಿಂದ ಆನೆಯೂ ಅಪ್ಪಿ ಕೊಂಡಂತೆ ಕಾಣುತ್ತಿದೆ.
baby elephants think humans are so cute and want to hug us 🤣🤣 pic.twitter.com/QcDrHy0EV0
— Nature is Amazing ☘️ (@AMAZlNGNATURE) July 26, 2025
ಇದನ್ನೂ ಓದಿ: Viral: ಮಾಧುರಿಗಾಗಿ ಮಿಡಿದ ಕರ್ನಾಟಕದ ಜೈನ ಸಮುದಾಯ, ಜಿಯೋಗೆ ಗುಡ್ಬೈ ಹೇಳಿದ ಜನ
ಈ ವಿಡಿಯೋ ಈಗಾಗಲೇ 1.3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು,ಈ ಆನೆಗಳ ತುಂಟಾಟ ನೋಡುವುದೇ ಚಂದ, ಎಷ್ಟು ಮುದ್ದಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ಆನೆಗಳು ಮನುಷ್ಯರನ್ನು ಕಂಡಾಗ ಮಗುವಾಗುತ್ತದೆ, ತನ್ನನ್ನು ಅವರುಗಳು ಪ್ರೀತಿಸಬೇಕೆಂದು ಬಯಸುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ