
ಪುಟಾಣಿ ಆನೆಗಳನ್ನು (elephant) ನೋಡಿದರೆ ಅಪ್ಪಿ ಮುದ್ದಾಗಿ ಬಿಡುವ ಎಂದೆನಿಸುತ್ತದೆ. ತನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ಅತ್ತಿಂದ ಇತ್ತ ಓಡಾಡುವುದು, ಅವುಗಳ ಆಟ, ತುಂಟಾಟ, ತಾಯಿಯೊಂದಿಗೆ ಸಲುಗೆಯಿಂದ ವರ್ತಿಸುವುದನ್ನುನೋಡಿದ್ರೆ ಒಮ್ಮೆ ಮುದ್ದಾಡಬೇಕೆನಿಸುತ್ತದೆ. ಆನೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ತಾಯಿ ಆನೆಯೊಂದು ಆಗ ತಾನೇ ಹುಟ್ಟಿದ ನವಜಾತ ಶಿಶುವಿನೊಂದಿಗೆ ರಸ್ತೆ ದಾಟುತ್ತಿರುವ ಅದ್ಭುತ ವಿಡಿಯೋ ವೈರಲ್ ಆಗುತ್ತಿದ್ದು, ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ (Parveen kaswan) ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ತಾಯಿಯೂ ಮಗುವಿಗೆ ಮಾರ್ಗದರ್ಶನ ಮಾಡುವ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ತಾಯಿಯನ್ನು ಹಿಂಬಾಲಿಸಿ ರಸ್ತೆ ದಾಟಿದ ಮರಿಯಾನೆ
@Parveen Kaswan ಹೆಸರಿನ ಖಾತೆಯಲ್ಲಿ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು, ತಾಯಿ ಆನೆ ತನ್ನ ಕಂದಮ್ಮಗಳಿಗೆ ಹುಟ್ಟಿದ ಕೆಲವೇ ಗಂಟೆಗಳನ್ನು ಮಾರ್ಗದರ್ಶನ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಮರಿಯಾನೆ ಹುಟ್ಟಿದಾಗಿನಿಂದ ಅಸ್ಥಿರವಾದ ನಡಿಗೆ, ಆನೆ ಮರಿಗಳು ಹುಟ್ಟಿದ ಒಂದರಿಂದ ಎರಡು ಗಂಟೆಗಳಲ್ಲಿಯೇ ನಡೆಯಲು ಪ್ರಾರಂಭಿಸುತ್ತವೆ. ಕಾಡಿನಲ್ಲಿ ಅವು ಚಲನಶೀಲವಾಗಿರಬೇಕು,ಅದಕ್ಕಾಗಿ ಅದು ಅವಶ್ಯಕ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
An unsteady walk, as the calf just came into world. Elephant calves start walking within 1-2 hour of birth. In wild they have to be mobile, necessary for survival pic.twitter.com/dEQO0dPtP1
— Parveen Kaswan, IFS (@ParveenKaswan) August 7, 2025
ಹುಟ್ಟುತ್ತಿದ್ದಂತೆ ಈ ಮರಿಯಾನೆಗಳು ಒಂದು ಮೀಟರ್ ಎತ್ತರ ಹಾಗೂ ಸುಮಾರು 120 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಈ ಆನೆಗಳು ಹುಟ್ಟಿದ ಕೆಲವೇ ಕೆಲವು ನಿಮಿಷಗಳಲ್ಲಿ ನಿಲ್ಲುವ ಮೂಲಕ ಕೆಲವೇ ಗಂಟೆಗಳಲ್ಲಿ ತನ್ನ ಪಾದಗಳನ್ನು ಮುಂದಿಟ್ಟು, ಮೆಲ್ಲನೆ ನಡೆಯಲು ಪ್ರಾರಂಭಿಸುತ್ತದೆ. ಈ ವಿಡಿಯೋದಲ್ಲಿ ಆಗ ತಾನೇ ಹುಟ್ಟಿದ ಕರುವಿನೊಂದಿಗೆ ತಾಯಾನೆಯೊಂದು ರಸ್ತೆ ದಾಟುತ್ತಿವೆ. ಇಲ್ಲಿ ತನ್ನ ತಾಯಿಯನ್ನೇ ಹಿಂಬಾಲಿಸಿಕೊಂಡು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ:ವ್ಹಾವ್ ಏನ್ ಖುಷಿ ನೋಡಿ ಈ ಆನೆಗೆ, ನದಿಯಲ್ಲಿ ಫುಲ್ ಎಂಜಾಯ್ ಮೂಡ್ನಲ್ಲಿ ಗಜಲಕ್ಷ್ಮೀ
ಆಗಸ್ಟ್ 7 ರಂದು ಶೇರ್ ಮಾಡಲಾದ ಈ ವಿಡಿಯೋದಲ್ಲಿ ಇದುವರೆಗೆ ನಲವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಇದು ಪ್ರಕೃತಿಯ ಪವಾಡ, ಪ್ರಾಣಿಗಳು ಹುಟ್ಟಿದ ಕೂಡಲೇ ಬೇಕಾದ ಅಗತ್ಯ ಪಾಠವನ್ನು ತಾಯಿಯಿಂದಲೇ ಕಲಿತು ಬಿಡುತ್ತವೆ ಎಂದಿದ್ದಾರೆ. ಇನ್ನೊಬ್ಬರು, ಪ್ರಕೃತಿ ಹಾಗೂ ಅದರ ಸೃಷ್ಟಿಯೇ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಎಂತಹ ಹೃದಯಸ್ಪರ್ಶಿ ಕ್ಷಣ, ಆ ಪುಟ್ಟ ಮಗುವಿನ ಮೊದಲ ಹೆಜ್ಜೆಗಳು ಪ್ರಕೃತಿಯ ಪರಿಪೂರ್ಣ ಸಮಯವನ್ನು ತೋರಿಸುತ್ತವೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ