AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಾವಿನ ಪೊರೆ ಕಳಚಿದ ವ್ಯಕ್ತಿ; ಅಬ್ಬಬ್ಬಾ ಈತನ ಭಂಡ ಧೈರ್ಯ ನೋಡಿ

ಹಾವುಗಳು ಮಾತ್ರವಲ್ಲದೆ, ಹಾವಿನ ಪೊರೆಯನ್ನು ಕಂಡು ಸಹ ಹಲವರು ಹೆದರಿಕೊಳ್ಳುತ್ತಾರೆ. ಹಾವುಗಳು ಪೊರೆ ಕಳಚುತ್ತವೆ ಅನ್ನೊ ವಿಚಾರ ಎಲ್ಲರಿಗೂ ಗೊತ್ತು, ಆದ್ರೆ ಅವುಗಳು ಹೇಗೆ ಪೊರೆ ಕಳಚುತ್ತವೆ ಎಂಬುದನ್ನು ನೀವು ನೋಡಿದ್ದೀರಾ?  ಇಲ್ಲೊಬ್ಬ ವ್ಯಕ್ತಿ  ಹಾವುಗಳು ಹೇಗೆ ಪೊರೆ ಬಿಡುತ್ತವೆ, ಎಂಬುದನ್ನು ತೋರಿಸಿದ್ದಾನೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ಹಾವಿನ ಪೊರೆ ಕಳಚಿದ  ಆತನ ಭಂಡ ಧೈರ್ಯಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.

Viral Video: ಹಾವಿನ ಪೊರೆ ಕಳಚಿದ ವ್ಯಕ್ತಿ; ಅಬ್ಬಬ್ಬಾ ಈತನ ಭಂಡ ಧೈರ್ಯ ನೋಡಿ
ಮಾಲಾಶ್ರೀ ಅಂಚನ್​
| Edited By: |

Updated on: Dec 30, 2023 | 6:52 PM

Share

ಹಾವುಗಳನ್ನು ಕಂಡು ಭಯಪಡುವವರು ಹಲವರಿದ್ದರೆ, ಹಾವುಗಳು ಮತ್ತು ಅವುಗಳ  ಬಗೆಗಿನ ಕುತೂಹಲಕಾರಿ ಸಂಗತಿಗಳನ್ನು ತಿಳಿಯಲು ಆಸಕ್ತಿಯನ್ನು ಹೊಂದಿದವರ ಜನರೂ ಇದ್ದಾರೆ. ಹಾವುಗಳ ಬಗೆಗಿನ ಕುತೂಹಲಕಾರಿ ಸಂಗತಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಹಾವುಗಳು ಹೇಗೆ ಪೊರೆ ಕಳಚುತ್ತವೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಹಾವುಗಳು ಆರೋಗ್ಯಕರ ಜೀವನವನ್ನು ನಡೆಸಲು   ಪೊರೆ ಬಿಡುವುದು ಸಾಮಾನ್ಯ. ಸರ್ಪಗಳು ಪೊರೆ ಬಿಡುವ ವಿಚಾರದ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ.  ಆದ್ರೆ ಹಾವುಗಳು ಹೇಗೆ ಪೊರೆ ಕಳಚುತ್ತವೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿ ಈ ವ್ಯಕ್ತಿ  ಸಾಮಾನ್ಯವಾಗಿ ಹಾವುಗಳು ಹೇಗೆ   ಪೊರೆ ಬಿಡುತ್ತವೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.  ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ಮೈಕ್ ಹೋಲ್ಸ್ಟನ್ (therealtarzann)  ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವಿನ ಪೊರೆಯನ್ನು ಕಳಚುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ  ವ್ಯಕ್ತಿಯೊಬ್ಬ ಒಂದು ಜಾತಿಯ ಹಾವನ್ನು ಹಿಡಿದುಕೊಂಡು ಮೊದಲಿಗೆ ಅದರ ಹೆಡೆಯಿಂದ ನಿಧಾನಕ್ಕೆ ಪೊರೆಯನ್ನು  ಕಿತ್ತು,  ಆ ಹಾವಿಗೆ ಮುತ್ತನ್ನಿಡುತ್ತಾನೆ. ನಂತರ ಸಂಪೂರ್ಣ ದೇಹದಿಂದ  ಪೊರೆಯನ್ನು ನಿಧಾನಕ್ಕೆ ಕಳಚಲು ಆರಂಭಿಸುತ್ತಾನೆ. ಹಾವು ತನ್ನ ದೇಹವನ್ನು ಮುಂದಕ್ಕೆ ಚಲಿಸುವಂತೆ  ಮಾಡುತ್ತಾ ಪೊರೆಯನ್ನು  ಬಿಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮೋದಿಯನ್ನು ಅಯೋಧ್ಯೆಗೆ ಸ್ವಾಗತಿಸಿದ ಬಾಬರಿ ಮಸೀದಿಯ ಮುಖ್ಯ ಅರ್ಜಿದಾರ ಇಕ್ಬಾಲ್​​​​ ಅನ್ಸಾರಿ

ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 73.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಮಿಲಿಯನ್​​​​ಗಿಂತಲೂ ಅಧಿಕ ಲೈಕ್ಸ್​​​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್​​​​ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ʼಇದು ನೋಡಲು ತುಂಬಾ ಭಯಾನಕವಾಗಿದೆʼ ಎಂದು ಹೇಳಿದ್ದಾರೆ. ಹಲವರು ಹಾವು ಪೊರೆ ಕಳಚುತ್ತಿರುವ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ