Video : ಚಲಿಸುವ ಬೈಕ್ ಆಯ್ತು ಬೆಡ್‌ರೂಮ್, ರೊಮ್ಯಾನ್ಸ್‌ನಲ್ಲಿ ಬ್ಯುಸಿಯಾದ ಜೋಡಿ

ಏನೇ ಹೇಳಿ, ಈಗಿನ ಕಾಲದ ಯುವಕ ಯುವತಿಯರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದು ತಿಳಿದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾನ್ಸ್ ಮಾಡುವ ಮೂಲಕ ಹದ್ದು ಮೀರಿ ವರ್ತಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೆ ವಿಡಿಯೋಗಳು ಆಗಾಗ ಕಾಣಸಿಗುತ್ತದೆ. ಇದೀಗ ಇಲ್ಲೊಂದು ಜೋಡಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುವ ಮೂಲಕ ಸಾರ್ವಜನಿಕರಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Video : ಚಲಿಸುವ ಬೈಕ್ ಆಯ್ತು ಬೆಡ್‌ರೂಮ್, ರೊಮ್ಯಾನ್ಸ್‌ನಲ್ಲಿ ಬ್ಯುಸಿಯಾದ ಜೋಡಿ
ಚಲಿಸುವ ಬೈಕ್‌ನಲ್ಲೇ ಜೋಡಿಹಕ್ಕಿಗಳ ರೊಮ್ಯಾನ್ಸ್
Image Credit source: Twitter

Updated on: Jun 29, 2025 | 3:34 PM

ಫಿರೋಜಾಬಾದ್, ಜೂನ್ 29 : ಈಗಿನ ಕಾಲದಲ್ಲಿ ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ (social media) ಫೇಮಸ್ ಆಗಲು ಯಾವ ಹಂತಕ್ಕೂ ತಲುಪುತ್ತಾರೆ. ತಮ್ಮ ಪ್ರಾಣ ಪಣಕ್ಕಿಟ್ಟು ರೀಲ್ಸ್, ವಿಡಿಯೋ ಮಾಡಲು ಹೋಗಿ ಜೀವ ಕಳೆದುಕೊಂಡ ಘಟನೆಗಳು ಈ ಹಿಂದೆ ನಡೆದಿದೆ. ಇನ್ನು ಕೆಲವರಿಗೆ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುವುದೆಂದರೆ ಅದೇನೊ ಖುಷಿ. ಇಂತಹ ಹುಚ್ಚಾಟಗಳಿಂದ ಸಾರ್ವಜನಿಕರಿಗೆ ಮುಜುಗರವಾಗುವುದೇ ಹೆಚ್ಚು. ಇದೀಗ ಆಗ್ರಾ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ (Agra – Kanpur national highway) ಚಲಿಸುವ ಬೈಕ್‌ನಲ್ಲಿ ಪ್ರಣಯ ಪಕ್ಷಿಗಳು ರೊಮ್ಯಾನ್ಸ್ ಮಾಡಿದ್ದು ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ (Firozabad district of Uttar Pradesh) ಈ ಘಟನೆ ನಡೆದಿದೆ ಎನ್ನಲಾಗಿದೆ.

@SachinGuptaUP ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಚಲಿಸುವ ಬೈಕ್‌ನಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿರುವುದನ್ನು ನೀವಿಲ್ಲಿ ಕಾಣಬಹುದು. ಯುವಕ ಬೈಕನ್ನು ಚಲಾಯಿಸುತ್ತಿದ್ದು, ಯುವತಿ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮಲಗಿದ್ದಾಳೆ. ಬೈಕ್ ಚಲಿಸುತ್ತಿರುವಾಗಲೇ ಇಬ್ಬರೂ ರೊಮ್ಯಾನ್ಸ್‌ನಲ್ಲಿ ಮುಳುಗಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬನು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ಮುಂದಾಗಿದ್ದಾನೆ. ಪ್ರಣಯದಲ್ಲಿ ಮುಳುಗಿದ ಜೋಡಿಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದು, ಮಾತು ಕೇಳದ ಕಾರಣ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ
ಈ ಬ್ರಿಟಿಷ್ ಪ್ರಜೆ ಧೈರ್ಯ ಮೆಚ್ಚಲೇಬೇಕು, ಪಾಕ್​​​ನಲ್ಲಿ ಭಾರತದ ಹಾವ
ಕೆಲಸದ ಸಮಯ, ಸಂಬಳ ಕೇಳಿದಕ್ಕೆ ಸಿಎ ವಿದ್ಯಾರ್ಥಿಗೆ ಹೀಗೆ ಉತ್ತರಿಸಿದ ಕಂಪನಿ
ರೂಬಿಕ್ಸ್‌ ಕ್ಯೂಬ್‌ನಲ್ಲಿ ಪ್ರಧಾನಿ ಮೋದಿ ಚಿತ್ರ ಬಿಡಿಸಿದ 6 ರ ಪೋರ
ಜೆಪ್ಟೋ ಅಪ್ಲಿಕೇಶನ್​​​ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಜೋಕೆ

ಇದನ್ನೂ ಓದಿ : Viral : ಟ್ರಾಫಿಕ್ ಜಾಮ್, ವಾತಾವರಣ, ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳೋದೇ ಕಷ್ಟ : ಭಾರತೀಯನ ಪರಿಸ್ಥಿತಿ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿ ಬೈಕ್ ಸವಾರನಿಗೆ 53,000 ರೂ ದಂಡ ವಿಧಿಸಿ ಬುದ್ಧಿ ಕಲಿಸಿದ್ದಾರೆ. ಜೂನ್ 28 ರಂದು ಶೇರ್ ಮಾಡಲಾದ ಈ ವಿಡಿಯೋ ಈವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡಿ ಜೀವಕ್ಕೆ ಆಪತ್ತು ತಂದುಕೊಳ್ಳಬೇಡಿ ಎಂದಿದ್ದಾರೆ. ಇನ್ನೊಬ್ಬರು, ಪ್ರೀತಿ ಪ್ರೇಮ, ಪ್ರಣಯಕ್ಕೂ ಸಮಯ ಸಂದರ್ಭ ಅನ್ನೋದು ಇದೆ. ಅದನ್ನು ಸಾರ್ವಜನಿಕವಾಗಿ ಎಲ್ಲರ ಮುಂದೆ ತೋರಿಸಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಮ್ಮ ಕಾಲನೇ ಒಳ್ಳೆಯದಿತ್ತು, ಜನರು ಮಾನ ಮರ್ಯಾದೆಗೆ ಅಂಜುತ್ತಿದ್ದರು. ಆದರೆ ಈಗಿನ ಕಾಲದ ಯುವಕ ಯುವತಿಯರಿಗೆ ಯಾವುದು ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ