Japan: ಕಳೆದ ತಿಂಗಳು ಜಪಾನ್ನಲ್ಲಿ ಮಳೆ ಬಂದಾಗ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದ ಜಿಂಕೆ, ಸಾರಂಗಗಳ ಹಿಂಡು ವೈರಲ್ ಆದ ವಿಡಿಯೋ ನೋಡಿದ್ದಿರಿ. ಸಹಜೀವನವೆಂದರೆ ಇದು ಎಂದು ಮೆಚ್ಚಿದ್ದಿರಿ ಕೂಡ. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಜಪಾನ್ ಮೂಲದ್ದೇ. ನಾರಾದಲ್ಲಿರುವ ಜಿಂಕೆಯೊಂದು ವಾಹನದಟ್ಟಣೆ ಇರುವ ರಸ್ತೆಯ ಬಳಿ ಬಂದಿದೆ. ರಸ್ತೆ ದಾಟಲು ತಾಳ್ಮೆಯಿಂದ ಕಾಯ್ದು ತನ್ನ ಸುರಕ್ಷತೆಗಾಗಿ ಝೀಬ್ರಾ ಕ್ರಾಸಿಂಗ್ (Zebra Crossing) ಕೂಡ ಬಳಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ನಾನು ಜಿಂಕೆಯ ಈ ಶಿಸ್ತಿನ ನಡೆಗೆ ಶಿರಬಾಗಿ ನಮಿಸುತ್ತೇನೆ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Video: ಕಾವಾಲಾ ಕಾವು; ಕಿಲಿ, ನೀಮಾ ಪೌಲ್ ಡ್ಯಾನ್ಸ್ಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು
ಆ. 26ರಂದು ವೈರಲ್ ಆಗಿರುವ ಈ ವಿಡಿಯೋ ಅನ್ನು ಈತನಕ 7.7 ಮಿಲಿಯನ್ ಜನರು ನೋಡಿದ್ದಾರೆ. 1,52,200 ಜನರು ಲೈಕ್ ಮಾಡಿದ್ದಾರೆ. 15,340 ಜನರು ರೀಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಜಪಾನ್ನಲ್ಲಿರುವ ಈ ಜಿಂಕೆಗಳಿಗೆ ಇಷ್ಟೊಂದು ತಿಳಿವಳಿಕೆ ಮೂಡಲು ಹೇಗೆ ಸಾಧ್ಯ? ಎಂದು ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.
A deer in Nara, Japan, patiently waits for traffic to halt before crossing🦌🚦
— Tansu YEĞEN (@TansuYegen) August 26, 2023
ತನ್ಸು ಯೆಗೆನ್ ಎನ್ನುವವರು Xನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಸ್ಸು, ಕಾರುಗಳು ಸತತವಾಗಿ ಓಡಾಡುತ್ತಿರುವ ಆ ರಸ್ತೆಯಲ್ಲಿ, ತಾಳ್ಮೆಯಿಂದ ರಸ್ತೆಯಂಚಿಗೆ ನಿಂತು, ಡ್ರೈವರ್ ಕಾರನ್ನು ನಿಲ್ಲಿಸಿದ್ದನ್ನು ಖಚಿತಪಡಿಸಿಕೊಂಡು ಝೀಬ್ರಾ ಕ್ರಾಸಿಂಗ್ ಮಾಡುತ್ತದೆ ಈ ಜಿಂಕೆ. ಜಿಂಕೆ ತನ್ನ ದಾರಿಯಲ್ಲಿ ತಾನು ಸರಿಯಾಗಿ ಹೊರಟಿದೆ. ಮನುಷ್ಯರು ರಸ್ತೆ ನಿರ್ಮಿಸಿದ್ದಾರೆ ಮತ್ತು ತಮ್ಮ ಓಡಾಟಕ್ಕೆ ಉಪಯೋಗಿಸಿಕೊಂಡಿದ್ದಾರೆ ಎನ್ನುವುದು ಜಿಂಕೆಗೆ ಗೊತ್ತು. ಅದರೂ ಓಡಾಡುತ್ತಿರುವ ವಾಹನಗಳ ಮಧ್ಯೆ ಸಾವಧಾನವಾಗಿ ಚಲಿಸಬೇಕೆನ್ನುವ ಅರಿವೂ ಅದಕ್ಕೆ ದಕ್ಕಿದೆ, ಗ್ರೇಟ್ ಎಂದಿದ್ದಾರೆ ನೆಟ್ಟಿಗರು.
ಇದನ್ನೂ ಓದಿ : Viral Video: ಹೊತ್ತಿ ಉರಿಯುತ್ತಿದ್ದ ಮನೆಯಿಂದ ತನ್ನ ನಾಯಿಯನ್ನು ಕಾಪಾಡಿದ ಹೃದಯವಂತ
ಪ್ರಾಣಿಗಳಲ್ಲಿ ವಿಕಾಸವಾಗಿದೆ, ಮನುಷ್ಯರಲ್ಲಿ ಮಾತ್ರ… ಪ್ರಾಣಿಗಳಿಂದ ಕಲಿಯುವುದು ಇನ್ನೂ ಎಷ್ಟಿದೆಯಲ್ಲವೆ? ಎಂದಿದ್ದಾರೆ ಒಬ್ಬರು. ಎಂಥಾ ಬುದ್ಧಿವಂತ ಜಿಂಕೆ ಇದು ಎಂದಿದ್ದಾರೆ ಇನ್ನೊಬ್ಬರು. ಜಿಂಕೆ ದಾಟಲು ಅನುವು ಮಾಡಿಕೊಟ್ಟ ಕಾರುಗಳ ಚಾಕರಿಗೆ ಜಿಂಕೆಗಳು ಪ್ರತಿಯಾಗಿ ತಲೆಬಾಗಿ ನಮಸ್ಕರಿಸುತ್ತವೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ