ದೆಹಲಿ ಮೂಲದ ನಿತಿನ್ ಅಗರ್ವಾಲ್ ಎಂಬ ಟೆಕ್ಕಿ ಸುಮಾರು ನಾಲ್ಕು ವರ್ಷಗಳ ಹಿಂದೆ ಅಲಿ ಎಕ್ಸ್ಪ್ರೆಸ್(AliExpress) ಆಪ್ಲೀಕೇಶನ್ನಲ್ಲಿ ಪ್ರಾಡೆಕ್ಟ್ ಒಂದನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಾರೆ. ಬರೋಬ್ಬರೀ ನಾಲ್ಕು ವರ್ಷಗಳ ನಂತರ ಡೆಲಿವರಿ ಆಗಿದ್ದು, ಸ್ವತಃ ನಿತಿನ್ ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗಾ ಈ ಸುದ್ದಿ ಎಲ್ಲೆಡೆ ಭಾರೀ ವೈರಲ್ ಆಗಿದೆ.
2020 ರಲ್ಲಿ ಭಾರತ ಸರ್ಕಾರವು 58 ಇತರ ಚೀನೀ ಅಪ್ಲಿಕೇಶನ್‌ಗಳೊಂದಿಗೆ ಈ ಅಲಿ ಎಕ್ಸ್ಪ್ರೆಸ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ಬ್ಯಾನ್ ಮಾಡುವ ಸ್ವಲ್ಪ ದಿನಗಳ ಹಿಂದೆ, ನಿತಿನ್ ಎಲೆಕ್ಟ್ರಾನಿಕ್ಸ್ ಉತ್ಪನ್ನವೊಂದನ್ನು ಆರ್ಡರ್ ಮಾಡಿದ್ದಾರೆ. ಈ ಅಲಿ ಎಕ್ಸ್ಪ್ರೆಸ್ (ಈಗ ಭಾರತದಲ್ಲಿ ನಿಷೇಧಿಸಲಾಗಿದೆ) ಅಪ್ಲಿಕೇಶನ್ ಮೂಲಕ ಭಾರತದಲ್ಲಿ ಲಭ್ಯವಿಲ್ಲದ ಕೆಲವು ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಚೀನಾದಿಂದ ಆರ್ಡರ್ ಮಾಡಬಹುದಾಗಿತ್ತು.
Never lose hope! So, I ordered this from Ali Express (now banned in India) back in 2019 and the parcel was delivered today. pic.twitter.com/xRa5JADonK
— Tech Bharat (Nitin Agarwal) (@techbharatco) June 21, 2023
ಇದನ್ನೂ ಓದಿ: ಹೆಣ್ಣುಮಕ್ಕಳಿಂದ ನಿರಾಕರಣೆ; ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಈತ ರೂ. 66 ಲಕ್ಷ ವ್ಯಯಿಸಿದ
ಟ್ವಿಟರ್ ಪೋಸ್ಟ್‌ನಲ್ಲಿ, ಅಗರ್ವಾಲ್ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದು, ಜೊತೆಗೆ ಎಂದಿಗೂ ಭರವಸೆ ಕಳೆದುಕೊಳ್ಳದಿರಿ. ಅಲಿ ಎಕ್ಸ್‌ಪ್ರೆಸ್‌ನಿಂದ 2019 ರಲ್ಲಿ ಆರ್ಡರ್ ಮಾಡಿದ್ದೆ, ಇಂದು ಪಾರ್ಸೆಲ್ ಬಂದು ತಲುಪಿದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: