ಬೇಸಿಗೆಯ ಬಿಸಿ ಏರುತ್ತಿದೆ. ಸೆಕೆ ತಡೆಯಲಾರದೆ ಜನರು ಎಸಿ, ಫ್ಯಾನ್ ಮೊರೆ ಹೋಗುತ್ತಿದ್ದಾರೆ. ಇನ್ನೂ ಹೊರಗಡೆ ಕೆಲಸಕ್ಕೆ ಹೋಗುವವರ ಪಾಡಂತೂ ಕೇಳುವುದೇ ಬೇಡ. ಅವರುಗಳು ಎಷ್ಟೇ ಉರಿ ಬಿಸಿಲು ಇದ್ದರೂ ಬಿಸಿಲಲ್ಲಿ ಬೇಯುತ್ತಾ ಕಷ್ಟಪಟ್ಟು ಕೆಲಸ ಮಾಡಲೇಬೇಕಾಗುತ್ತದೆ. ಆದ್ರೆ ಇಲ್ಲೊಬ್ಬ ಟ್ರಕ್ ಡ್ರೈವರ್ ಇನ್ನಂತೂ ಈ ಬಿಸಿಲ ಬೇಗೆಯಲ್ಲಿ ಗಾಡಿ ಓಡಿಸಿದ್ರೆ ನಾನು ಸತ್ತೇ ಹೋಗ್ತಿನಪ್ಪಾ ಎಂದು ಒಂದೊಳ್ಳೆ ಉಪಾಯ ಮಾಡಿ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು, ಇನ್ನೊಂದು ಕೈಯಲ್ಲಿ ನೀರಿನ ಚೆಂಬು ಹಿಡಿದು ಮೈಗೆ ತಣ್ಣೀರು ಸುರಿಯುತ್ತಾ ಟ್ರಕ್ ಚಲಾಯಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು @fewsecl8r ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಟ್ರಕ್ ಡ್ರೈವರ್ ಸೆಕೆಯನ್ನು ತಡೆಯಲಾರದೆ, ಹೇಗಪ್ಪಾ ಮೈಯನ್ನು ತಣ್ಣಗಿರಿಸುವುದು ಎಂದು ಒಂದೊಳ್ಳೆ ಉಪಾಯ ಮಾಡಿ, ಟ್ರಕ್ ಒಳಗಡೆ ಒಂದು ಬಕೆಟ್ ನೀರನ್ನು ಇಟ್ಟು, ಮೈಗೆ ಈ ತಣ್ಣೀರನ್ನು ಸುರಿಯುತ್ತಲೇ ಟ್ರಕ್ ಚಲಾಯಿಸುತ್ತಾ ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ಮಕ್ಕಳ ರೀಲ್ಸ್ ಮಾಡೋದು ಎಷ್ಟು ಕಷ್ಟ, ಈ ಟೀಚರಮ್ಮನ ಸಾಹಸಕ್ಕೆ ಒಂದು ಸಲಾಂ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Kitna mushqil hota hoga 45-50° par bus ya truck chalana pic.twitter.com/5IAkyejV8A
— Few Seconds Later 🇮🇳 (@fewsecl8r) April 23, 2024
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸೆಕೆಯಿಂದ ತಪ್ಪಿಸಿಕೊಳ್ಳಲು ಇದಂತೂ ಒಳ್ಳೆಯ ಉಪಾಯʼ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ