Viral Post: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಭಾವಚಿತ್ರ ಮುದ್ರಿಸಿದ ಅಭಿಮಾನಿ

ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿಯವರ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿಯ ಫೋಟೋ ಹಾಗೂ ಜೆರ್ಸಿ ಸಂಖ್ಯೆಯನ್ನು ಮುದ್ರಿಸಿದ್ದು, ಈ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Post: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಭಾವಚಿತ್ರ ಮುದ್ರಿಸಿದ ಅಭಿಮಾನಿ
ವೈರಲ್​​ ಫೋಟೋ
Edited By:

Updated on: Jun 05, 2023 | 4:39 PM

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕ್ಯಾಪ್ಟನ್ ಕೂಲ್ ಅಂತನೇ ಕರೆಯಲ್ಪಡುವ ಧೋನಿಯವರನ್ನು ಅನೇಕ ಕ್ರಿಕೆಟ್ ಪ್ರೇಮಿಗಳು ತಮ್ಮ ಆದರ್ಶಪ್ರಾಯವಾಗಿ ಪರಿಗಣಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿಯಾಗಿದ್ದರೂ ಅವರ ಜನಪ್ರಿಯತೆ ಹಾಗೇ ಇದೆ ಹಾಗೂ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲ ದಿನಗಳ ಹಿಂದೆ ದೋನಿ ಅವರ ನಾಯಕತ್ವದಲ್ಲಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ರಶಸ್ತಿಯನ್ನು ಕೂಡಾ ಗೆದ್ದಿತ್ತು. ಅನೇಕ ಜನರು ತಮ್ಮ ನೆಚ್ಚಿನ ಕ್ರಿಕೆಟಿಗ ಹಾಗೂ ನಟರ ಅಭಿಮಾನದಿಂದ ಅವರ ಹೆಸರುಗಳನ್ನು ಅಥವಾ ಭಾವಚಿತ್ರವನ್ನು ತಮ್ಮ ಮೈ ಮೇಲೆ ಹಚ್ಚೆ ಹಾಕಿಸುವುದು, ತಮ್ಮ ಮನೆಗೆ ಅಥವಾ ಅಂಗಡಿಗಳಿಗೆ ತಮ್ಮ ನೆಚ್ಚಿನ ನಟ ಅಥವಾ ಕ್ರಿಕೆಟಿಗನ ಹೆಸರಿಡುವುದನ್ನು ನೋಡಿರುತ್ತೇವೆ. ಅಂತೆಯೇ ಇಲ್ಲೊಬ್ಬ ಮಹೇಂದ್ರ ಸಿಂಗ್ ಧೋನಿಯವರ ಕಟ್ಟಾ ಅಭಿಮಾನಿ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಭಾವಚಿತ್ರ ಹಾಗೂ ಅವರ ಜೆರ್ಸಿ ಸಂಖ್ಯೆಯನ್ನು ಮುದ್ರಿಸಿದ್ದು, ಈ ಆಮಂತ್ರಣ ಪತ್ರಿಕೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಛತ್ತೀಸ್ಗಢದ ರಾಯ್ಗಢ್ ಜಿಲ್ಲೆಯ ತಮ್ನಾರ್​​​ನಲ್ಲಿನ ಧೋನಿಯ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮದುವೆ ಆಮಂತ್ರಣ ಪ್ರತಿಕೆಯ ಎರಡೂ ಬದಿಯಲ್ಲಿಯೂ ಧೋನಿ ಅವರ ಭಾವಚಿತ್ರ ಹಾಗೂ ಅವರ ಜೆರ್ಸಿ ಸಂಖ್ಯೆ (7) ಯನ್ನು ಮುದ್ರಿಸಿದ್ದಾರೆ. ಹಾಗೂ ಜೆರ್ಸಿ ಸಂಖ್ಯೆಯ ಪಕ್ಕದಲ್ಲಿಯೇ ಅಭಿಮಾನಿಗಳು ಧೋನಿಯವರನ್ನು ಪ್ರೀತಿಯಿಂದ ಕರೆಯುವ ‘ತಲಾ’ ಎಂಬ ಹೆಸರನ್ನು ಕೂಡ ಬರೆಸಿದ್ದಾರೆ.

ಇದನ್ನೂ ಓದಿ:Viral Post : ಊಬರ್​ ಇಂಡಿಯಾ ಹೆಚ್ಚುವರಿ ಹಣವನ್ನು ಮರುಪಾವತಿಸುವುದೆ?

ರಾಯ್ಗಢ ಜಿಲ್ಲೆಯ ಲೈಲುಂಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ತಮ್ನಾರ್ ಬ್ಲಾಕ್​​ನ ಮಿಲುಪಾರದ ಕೊಡ್ಕೆಲ್ ಗ್ರಾಮದ ನಿವಾಸಿಯಾದ ದೀಪಕ್ ಪಟೇಲ್, ಮಹೇಂದ್ರ ಸಿಂಗ್ ಧೋನಿಯ ಕಟ್ಟಾ ಅಭಿಮಾನಿ. ಬಾಲ್ಯದಿಂದಲ್ಲೂ ಕ್ರಿಕೆಟ್​​​ನಲ್ಲಿ ಆಸಕ್ತಿ ಹೊಂದಿದ್ದ ದೀಪಕ್, ಧೋನಿಯನ್ನು ತಮ್ಮ ಆದರ್ಶವಾಗಿ ಪರಿಗಣಿಸಿದ್ದರು ಹಾಗೂ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ನಂತರ, ಈ ಧೋನಿ ಅಭಿಮಾನಿ ತನ್ನ ಹಳ್ಳಿಯ ಕ್ರಿಕೆಟ್ ತಂಡದ ನಾಯಕನೂ ಆಗಿದ್ದನು. ಇಷ್ಟು ಮಾತ್ರವಲ್ಲದೆ, ಧೋನಿ ನಾಯಕತ್ವದ ಆಟದಲ್ಲಿ ರೂಪಿಸಿದ ತಂತ್ರಗಳನ್ನು ಬಳಸಿಕೊಂಡು ಅನೇಕ ಪಂದ್ಯಗಳಲ್ಲಿ ತನ್ನ ತಂಡಕ್ಕೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದೇನೆ ಎಂದು ಸ್ವತಃ ದೀಪಕ್ ಹೇಳುತ್ತಾರೆ.

ದೀಪಕ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಧೋನಿ ಫೋಟೋವನ್ನು ಮುದ್ರಿಸಿದ್ದಾರೆ. ಈ ವಿವಾಹ ಆಮಂತ್ರಣದ ಫೋಟೋವನ್ನು ಶಿವಸೈಟ್ (@itsshivvv12) ಎನ್ನುವ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಜೂನ್ 3 ನೇ ತಾರಿಕಿನಂದು ಹಂಚಿಕೊಳ್ಳಲಾದ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ