Video: ವಾವ್ಹ್​​​​​ ವಂಡರ್‌ಫುಲ್‌​, ಭಾರತ ಎಷ್ಟು ಸುಂದರವಾಗಿದೆ ನೋಡಿ ಎಂದ ವಿದೇಶಿಗ

ಭಾರತಕ್ಕೆ ಬಂದ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಸವಿಯುತ್ತಾರೆ. ಭಾರತೀಯರಿಗೆ ಸ್ವಚ್ಛತೆಯ ಪಾಠವನ್ನು ಕೂಡ ಮಾಡ್ತಾರೆ. ಆದರೆ ವಿದೇಶಿಗನೊಬ್ಬನು ಭಾರತ ಎಷ್ಟು ಸುಂದರವಾಗಿದೆ ಎಂದು ತೋರಿಸಿಕೊಟ್ಟಿದ್ದಾನೆ. ಹೌದು, ವಿದೇಶಿ ವ್ಲಾಗರ್ ಬ್ರ್ಯಾಂಡೆಡ್‌ ಮಳಿಗೆಗಳು, ಜನದಟ್ಟಣೆಯಿಲ್ಲದ ಪ್ರದೇಶ, ಸ್ವಚ್ಛವಾದ ಹಾದಿ ಬೀದಿಗಳನ್ನು ತೋರಿಸಿ ನಿಜಕ್ಕೂ ಈ ಸ್ಥಳ ಅದ್ಭುತ ಎಂದು ಹೇಳಿದ್ದಾನೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Video: ವಾವ್ಹ್​​​​​ ವಂಡರ್‌ಫುಲ್‌​, ಭಾರತ ಎಷ್ಟು ಸುಂದರವಾಗಿದೆ ನೋಡಿ ಎಂದ ವಿದೇಶಿಗ
ವೈರಲ್‌ ವಿಡಿಯೋ
Image Credit source: Twitter

Updated on: Aug 26, 2025 | 12:22 PM

ಸಾಮಾನ್ಯವಾಗಿ ಭಾರತಕ್ಕೆ ಬರುವ ವಿದೇಶಿಗರು (foreigner) ಅಲ್ಲಲ್ಲಿ ಎದ್ದು ಕಾಣುವ ಕಸದ ರಾಶಿ, ಮೂಲಸೌಕರ್ಯದ ಕೊರತೆ, ಜನದಟ್ಟಣೆ ಹಾಗೂ ಕೊಳಗೇರಿ ಪ್ರದೇಶಗಳು ಹಾಗೂ ನಾಗರಿಕ ಪ್ರಜ್ಞೆಯೇ ಇಲ್ಲದೇ ವರ್ತಿಸುವ ಜನರ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ ಒಳ್ಳೆಯ ವಿಷಯಗಳನ್ನು ಹುಡುಕುವ ಈ ವಿದೇಶಿಗನ ಮನಸ್ಸು ನಿಜಕ್ಕೂ ದೊಡ್ಡದು. ಭಾರತಕ್ಕೆ ಬಂದಿರುವ ವಿದೇಶಿ ವ್ಲಾಗರ್ ಭಾರತದ (India) ಈ ಪ್ರದೇಶವು ಎಷ್ಟು ಸುಂದರವಾಗಿದೆ ಎಂದು ಹಾಡಿ ಹೊಗಳಿದ್ದಾನೆ. ಒಳ್ಳೆಯ ವಿಷಯಗಳನ್ನು ಹುಡುಕುವ ಈ ವಿದೇಶಿಗನ ಒಳ್ಳೆತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

@LogicalIndian ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಬ್ರ್ಯಾಂಡೆಡ್‌ ಮಳಿಗೆಗಳಿರುವ ಬೀದಿಗಳಲ್ಲಿ ವಿದೇಶಿಗ ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಇಲ್ಲಿನ ಸುತ್ತಮುತ್ತಲಿನ ಸ್ಥಳಗಳನ್ನು ತೋರಿಸುತ್ತಾ, ಈ ಸ್ಥಳವು ತುಂಬಾನೇ ಚೆನ್ನಾಗಿದೆ. ಒಂದೇ ಒಂದು ಕಸ ಕಾಣಲು ಸಿಗಲ್ಲ, ಜನದಟ್ಟಣೆ ಇಲ್ಲವೇ ಇಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ
ವಿದ್ಯಾರ್ಥಿ ಭವನದ ಊಟ ಸವಿದು ಪ್ರಾಮಾಣಿಕ ರೇಟಿಂಗ್ಸ್‌ ನೀಡಿದ ವ್ಲಾಗರ್
ವಿದೇಶಿ ಸೊಸೆಗೆ ಅದ್ದೂರಿ ಸ್ವಾಗತ ನೀಡಿದ ಭಾರತದ ಅತ್ತೆ ಮಾವ
ವಿದೇಶಿ ಮಹಿಳೆಯನ್ನು ಮದುವೆಯಾದುದ್ದರ ಹಿಂದಿನ ಕಾರಣ ತಿಳಿಸಿದ ಭಾರತೀಯ
ಭಾರತದಲ್ಲಿ ಹೇಗೆ ರಸ್ತೆ ದಾಟಬೇಕೆಂದು ತನ್ನ ಸ್ನೇಹಿತೆಗೆ ಹೇಳಿಕೊಟ್ಟ ರಷ್ಯನ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Video: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ವ್ಲಾಗರ್

ಆಗಸ್ಟ್ 21 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು ಹಲವು ಮಂದಿ ವೀಕ್ಷಿಸಿದ್ದು, ಬಳಕೆದಾರರು ಒಳ್ಳೆಯದ್ದನ್ನು ಹುಡುಕುವ ವಿದೇಶಿಗನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ತಪ್ಪುಗಳನ್ನು ಎತ್ತಿ ತೋರಿಸುವ ಮನಸ್ಥಿತಿಗಳ ನಡುವೆ ನಿಮ್ಮಂತ ವ್ಯಕ್ತಿಗಳು ಇರುವುದೇ ಅಪರೂಪ ಎಂದಿದ್ದಾರೆ. ಮತ್ತೊಬ್ಬರು ಭಾರತದ ಎಲ್ಲಾ ಹಾದಿ ಬೀದಿಗಳು ಈ ರೀತಿ ಇರಲು ಸಾಧ್ಯವಿಲ್ಲ. ವಾಸ್ತವತೆಯನ್ನು ದೂರವಿಟ್ಟು ಒಂದು ಸಣ್ಣ ಸ್ಥಳವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಭಾರತವು ನಿಜಕ್ಕೂ ಉತ್ತಮವಾಗಿದೆ, ಒಳ್ಳೆಯದ್ದನ್ನು ಹುಡುಕುವ ಮನಸ್ಸಿರಬೇಕು ಅಷ್ಟೇ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ