
ಈಗಿನ ಮಕ್ಕಳು ಎಷ್ಟು ಬುದ್ಧಿವಂತರು, ಅಷ್ಟೇ ಖತರ್ನಾಕ್ ಆಗಿ ಯೋಚಿಸುತ್ತಾರೆ. ಅದರಲ್ಲಿ ಈ ಪುಟಾಣಿಗಳಿಗೆ ಹೋಮ್ ವರ್ಕ್ (home work) ಮಾಡುವಾಗ ಇದರಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಐಡಿಯಾಗಳು ತಲೆಯಲ್ಲಿ ಬರುತ್ತದೆ. ಆದರೆ ಈ ಮಕ್ಕಳನ್ನು ಸ್ವಲ್ಪ ಸಡಿಲ ಬಿಟ್ಟರೆ ಹೆತ್ತವರು ಹಾಗೂ ಶಿಕ್ಷಕರ ತಲೆ ಮೇಲೆ ಕೂರುತ್ತಾರೆ. ಇದೀಗ ಈ ವಿಡಿಯೋ ನೋಡಿದ್ರೆ ಹೋಮ್ ವರ್ಕ್ ಮಾಡದೇ ಶಾಲೆಗೆ ಬಂದ ಹುಡುಗನು ಅದರ ಸುದ್ದಿ ಕೇಳುತ್ತಿದ್ದಂತೆ ಮೈ ಮೇಲೆ ದೆವ್ವ ಬಂದವನಂತೆ ನಟನೆ ಮಾಡಿದ್ದಾನೆ. ಹುಡುಗನ ಆಕ್ಟಿಂಗ್ ನೋಡಿ ಶಿಕ್ಷಕರು ಶಾಕ್ ಆಗಿ ಹೋಗಿದ್ದಾರೆ.
the daily guru ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಕನ್ನಡ ಮೀಡಿಯಾಂನ ಸರ್ಕಾರಿ ಶಾಲೆಯಂತೆ ಕಾಣುತ್ತಿದ್ದು, ಹುಡುಗನೊಬ್ಬನು ಚೇರ್ ಮೇಲೆ ಕುಳಿತಿಕೊಂಡಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ಶಿಕ್ಷಕರು ಯಾಕೆ ಹೋಮ್ ವರ್ಕ್ ಮಾಡಿಲ್ಲ ಎಂದು ಕೇಳಿದ್ದಾರೆ. ಹೋಮ್ ವರ್ಕ್ ಸುದ್ದಿ ಕೇಳುತ್ತಿದ್ದಂತೆ ಮೈ ಮೇಲೆ ದೆವ್ವ ಬಂದಂತೆ ನಟನೆ ಮಾಡಲು ಶುರು ಮಾಡಿದ್ದಾನೆ. ಯಾಕೆ ಹೋಮ್ ವರ್ಕ್ ಮಾಡಿಲ್ಲ ಎನ್ನುತ್ತಿದ್ದಂತೆ ಅಪ್ಪನ ಕೇಳು ಎಂದು ಕಣ್ಣುಮುಚ್ಚಿಕೊಂಡು ಉತ್ತರ ನೀಡಿದ್ದಾನೆ.
ಅಲ್ಲೇ ಇದ್ದ ಶಿಕ್ಷಕರು ಯಾರ ಅಪ್ಪನ ಕೇಳ್ಬೇಕು ಎಂದು ಪ್ರಶ್ನೆ ಕೇಳುತ್ತಿದ್ದಂತೆ ನಾನು ಮೈಮೇಲೆ ಬಂದಿದ್ನಲ್ಲ ಆ ಯುವಕನ ಅಪ್ಪನನ್ನು ಕೇಳು ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು. ಆ ಬಳಿಕ ಈ ಹುಡುಗನು ನಾನು ಹೋಗ್ಬೇಕು ಎಂದು ಹೇಳ್ತಾನೆ. ಇನ್ನು ಸಿನಿಮಾದಲ್ಲಿ ನಟನೆ ಮಾಡಿದ್ದೀಯಾ ಏನು, ನಿನ್ ಹೆಸರೇನಪ್ಪ ಹೀಗೆ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಆತ ಫೋನ್ ಮಾಡಿ ಕೇಳು ಎಂದು ಹೇಳುತ್ತಾನೆ. ಯಾರನ್ನು ಎಂದು ಶಿಕ್ಷಕರು ಕೇಳುತ್ತಿದ್ದಂತೆ ಆತ ಇವರಪ್ಪಂಗೆ ಕಾಲ್ ಮಾಡಿ ಕೇಳು. ನಾನಿದ್ದೀನಲ್ಲ, ಈ ಹುಡುಗನ ಅಪ್ಪನ ಕೇಳು ಅವರಿಗೆ ಗೊತ್ತಾಗುತ್ತೆ ಎಂದು ಹೇಳಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ.
ನಿನ್ ಹೆಸರೇನು ಎಂದು ಕೇಳಿದ್ರೆ ನಾನು ಹೇಳಲ್ಲ, ನಾನು ಅವರ ಮನೆ ಕಾಯುವುದಕ್ಕೋಸ್ಕರ ಬಂದಿದ್ದೇನೆ ಎಂದು ಹೀಗೆ ಅರ್ಥವಿಲ್ಲದಂತೆ ಏನೇನೋ ಮಾತನಾಡುತ್ತಿದ್ದಾನೆ. ಅಲ್ಲೇ ಇದ್ದ ಶಿಕ್ಷಕಿಯೊಬ್ಬರು ಯಾರಿಗೆ ಫೋನ್ ಮಾಡ್ಬೇಕು ಎಂದು ಕೇಳುತ್ತಿದ್ದಂತೆ, ಅವರಪ್ಪನಿಗೆ ಕಾಲ್ ಮಾಡು ನಾನು ಮೈಮೇಲೆ ಬಂದ ಹುಡುಗನ ಅಪ್ಪನಿಗೆ ಫೋನ್ ಮಾಡಿ ಇದು ನ್ಯಾಯನ ಅಂತ ಕೇಳಿ ಅವರಿಗೆ ಗೊತ್ತು ಎಂದು ಬಾಲಕನ ಈ ವಿಡಿಯೋದಲ್ಲಿ ಹೇಳುವುದನ್ನು ನೋಡಬಹುದು.
ಇದನ್ನೂ ಓದಿ: Video: ಕಣ್ಣು ಮುಚ್ಚಿಕೊಂಡು ಮುದ್ದು ಮುದ್ದಾಗಿ ರಾಷ್ಟ್ರಗೀತೆ ಹಾಡಿದ ಪುಟಾಣಿ
ಈ ವಿಡಿಯೋ ಹತ್ತೊಂಭತ್ತು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು,ಒಬ್ಬ ಬಳಕೆದಾರ ಸು ಫ್ರಮ್ ಸೋ ಪಾರ್ಟ್ 2 ಎಂದಿದ್ದಾರೆ. ಇನ್ನೊಬ್ಬರು, ಇವನು ನನಗೆ ಸ್ನೇಹಿತನಾಗಿ ಸಿಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ಹುಡುಗನ ನನ್ನನ್ನು ಖುಷಿ ಪಡಿಸಿದ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ಹೇಳಿದ್ದಾರೆ. ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಈ ಬಾಲಕನ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ