ಬೆಟ್ಟ ಹತ್ತುತ್ತಿದ್ದ ಪಾದಯಾತ್ರಿಗಳ ಮೇಲೆರಗಿದ ದೈತ್ಯ ಹಾವು; ಮುಂದೆ ಆಗಿದ್ದೇನು..! ಇಲ್ಲಿದೆ ನೋಡಿ ವೈರಲ್ ವಿಡಿಯೋ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 24, 2022 | 9:41 AM

ಥಾಯ್ಲೆಂಡ್‌ನ ಗುಡ್ಡಗಾಡು ಪ್ರದೇಶದ ಮೂಲಕ ಪಾದಯಾತ್ರಿಗಳ ಗುಂಪ್ಪೊಂದು ನಡೆದುಕೊಂಡು ಹೋಗುತ್ತಿದ್ದರು. ಅವರು ಕಿರಿದಾದ ಕಾಲುದಾರಿಯ ಉದ್ದಕ್ಕೂ ಚಲಿಸುತ್ತಿದ್ದಾಗ, ಸಡನ್ನಾಗಿ ದೊಡ್ಡ ಹಾವು ಅವರಲ್ಲೊಬ್ಬರ ಮೇಲೆ ಎರಗಿದೆ.

ಬೆಟ್ಟ ಹತ್ತುತ್ತಿದ್ದ ಪಾದಯಾತ್ರಿಗಳ ಮೇಲೆರಗಿದ ದೈತ್ಯ ಹಾವು; ಮುಂದೆ ಆಗಿದ್ದೇನು..! ಇಲ್ಲಿದೆ ನೋಡಿ ವೈರಲ್ ವಿಡಿಯೋ
ಬೆಟ್ಟ ಹುತ್ತುವಾಗ ಮೈ ಮೇಲೆ ಎರಗಿದ ಹಾವು.
Follow us on

ಥಾಯ್ಲೆಂಡ್‌ನ ಗುಡ್ಡಗಾಡು ಪ್ರದೇಶದ ಮೂಲಕ ಪಾದಯಾತ್ರಿಗಳ ಗುಂಪ್ಪೊಂದು ನಡೆದುಕೊಂಡು ಹೋಗುತ್ತಿದ್ದರು. ಅವರು ಕಿರಿದಾದ ಕಾಲುದಾರಿಯ ಉದ್ದಕ್ಕೂ ಚಲಿಸುತ್ತಿದ್ದಾಗ, ಸಡನ್ನಾಗಿ ದೊಡ್ಡ ಹಾವು (Snake) ಅವರಲ್ಲೊಬ್ಬರ ಮೇಲೆ ಎರಗಿದೆ. ಅದೃಷ್ಟವಶಾತ್ ಹಾವು ಬುಸಗುಟ್ಟಿದೆ ಹೊರತು ಯಾರಿಗೂ ಕಚ್ಚಿಲ್ಲ. ಈ ಆಘಾತಕಾರಿ ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದೆ. ಒಬ್ಬ ಮಹಿಳೆ ಮುಂದೆ ಹೋಗುತ್ತಿರುವುದನ್ನು ಮತ್ತು ಇನ್ನೊಬ್ಬ ವ್ಯಕ್ತಿ ಆಕೆಯ ಆರೋಹಣದ ವಿಡಿಯೋವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅವರು ತಮ್ಮ ಪ್ರವಾಸದ ಆರೋಹಣವನ್ನು ಆನಂದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬುಹುದಾಗಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ, ಒಂದು ದೊಡ್ಡ ಹಾವು ಪಕ್ಕದ ಪೊದೆಗಯಿಂದ ಪಾದಯಾತ್ರಿಗಳ ಮೇಲೆ ಬುಸ್​ಗುಟ್ಟಿದ್ದು, ಆ ಇಬ್ಬರೂ ಪಾದಯಾತ್ರಿಗಳು ಹೆದರಿ ಓಡಿಹೋಗಿದ್ದಾರೆ. ಕ್ಯಾಮರಾ ಫೋಕಸ್ ಆಗದ ಕಾರಣ ಭಯಭೀತರಾದ ಪಾದಯಾತ್ರಿಕರು ಕಿರುಚಿಕೊಂಡು ಸುರಕ್ಷಿತವಾಗಿ ಅಲ್ಲಿಂದ ಓಡಿದರು. ಮಾರ್ಚ್ 20 ರಂದು ಉತ್ತರ ಥೈಲ್ಯಾಂಡ್‌ನ ಪರ್ವತ ಪ್ರಾಂತ್ಯವಾದ ಚಿಯಾಂಗ್ ರಾಯ್‌ನಲ್ಲಿ ಈ ಘಟನೆ ಸಂಭವಿಸಿದೆ. ಮರುದಿನ ವೈರಲ್‌ಹಾಗ್ ಎಂಬ ಯೂಟ್ಯೂಬ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಹಾವು ಪಾದಯಾತ್ರಿಗರನ್ನು ಹೇಗೆ ಆಶ್ಚರ್ಯಗೊಳಿಸುತ್ತದೆ ನೋಡಿ ಎಂದು ಶೀರ್ಷಿಕೆಯನ್ನ ಸಹ ನೀಡಿದ್ದು, ಈ ಕ್ಲಿಪ್​ನ್ನು ಇದುವರೆಗೆ 12,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾವುಗಳಲ್ಲಿ ವಿಷಕಾರಿಯೂ ಉಂಟು, ವಿಷವಿಲ್ಲದಿರುವ ಹಾವುಗಳು ಉಂಟು. ಅವು ಮನುಷ್ಯರಿಗೆ ಅಪಾಯವನ್ನುಂಟು ಮಾಡುವುದಿಲ್ಲ. ಇಲಿಗಳು ಅದರ ನೆಚ್ಚಿನ ಆಹಾರವಾಗಿದೆ. ನೆಟ್ಟಿಗರಲ್ಲೊಬ್ಬ ಈ ವಿಡಿಯೋಕೆ ಕಮೆಂಟ್ ಮಾಡಿದ್ದು, ಜನರು ಹಾವು ಎದುರಾದ ಕ್ಷಣದಲ್ಲಿ ಓಡಬೇಕು ಎಂದು ಸಲಹೆ ನೀಡಿದ್ದಾನೆ. ನಿಮ್ಮನ್ನು ರಕ್ಷಿಸಿಕೊಳ್ಳಿ, ಓಡುವುದನ್ನು ನಿಲ್ಲಿಸಬೇಡಿ, ಹಿಂತಿರುಗಿ ನೋಡಬೇಡಿ ಎಂದು ವ್ಯಕ್ತಿ ಬರೆದಿದ್ದಾರೆ. ಆದರೆ ಹಾವಿನ ದಾಳಿಗೆ ಪಾದಯಾತ್ರಿಕರು ತಡವಾಗಿ ಪ್ರತಿಕ್ರಿಯಿಸಿದರು ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ, ಈಶಾನ್ಯ ಥೈಲ್ಯಾಂಡ್‌ನ ಜೌಗು ಪ್ರದೇಶದಲ್ಲಿ ನಿಗೂಢವಾದ ರೋಮದಿಂದ ಕೂಡಿದ ಹಸಿರು ಹಾವು ಕಂಡುಬಂದಿದ್ದು , ಸ್ಥಳೀಯರು ಮತ್ತು ಪ್ರಾಣಿ ತಜ್ಞರನ್ನು ಕಂಗೆಡಿಸಿದೆ.

ಇದನ್ನೂ ಓದಿ:

ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ ಮನವಿ

ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವತಿ ಸಾವು; ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್

Published On - 9:39 am, Thu, 24 March 22