AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ ಮನವಿ

ಕರಾವಳಿಯಲ್ಲಿ ವ್ಯಾಪಾರ ಬ್ಯಾನ್ ವಿವಾದ ಮುಂದುವರಿದಿದೆ. ಹಿಂದೂ ಹೆಸರಿನಲ್ಲಿ ಮುಸ್ಲಿಮರು ಹೋಟೆಲ್ ನಡೆಸುತ್ತಿದ್ದಾರೆ. ಅಂತಹ ಹೋಟೆಲ್ಗಳಿಗೆ ಹೋಗದಂತೆ ಅಭಿಯಾನ ಶರುವಾಗಿದೆ.

ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ ಮನವಿ
ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ
TV9 Web
| Edited By: |

Updated on: Mar 24, 2022 | 9:28 AM

Share

ಬೆಂಗಳೂರು: ರಾಜ್ಯದ ಕೆಲವೆಡೆ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿರುವ ವಿಚಾರಕ್ಕೆ ಸಂಬಂಧಿಸಿ ಬೀದಿಬದಿ ಮುಸ್ಲಿಂ (Muslim) ವ್ಯಾಪಾರಿಗಳಿಗೆ ತೊಂದರೆ ಆಗಬಾರದು ಅಂತ ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ (Karnataka Government) ಮನವಿ ಮಾಡಿದ್ದಾರೆ. ಒಟ್ಟು 2.60 ಲಕ್ಷ ನೋಂದಾಯಿತ ಬೀದಿಬದಿ ವ್ಯಾಪಾರಿಗಳಿದ್ದಾರೆ. ಈ ಪೈಕಿ ಶೇಕಡಾ 20ಕ್ಕಿಂತ ಹೆಚ್ಚು ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಬೀದಿಬದಿಯ ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ನೀಡಬೇಡಿ ಅಂತ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

‘ಜಾಗೋ ಕಲ್ಲಡ್ಕ ಜಾಗೋ’ ಹೆಸರಿನಲ್ಲಿ ಅಭಿಯಾನ: ಕರಾವಳಿಯಲ್ಲಿ ವ್ಯಾಪಾರ ಬ್ಯಾನ್ ವಿವಾದ ಮುಂದುವರಿದಿದೆ. ಹಿಂದೂ ಹೆಸರಿನಲ್ಲಿ ಮುಸ್ಲಿಮರು ಹೋಟೆಲ್ ನಡೆಸುತ್ತಿದ್ದಾರೆ. ಅಂತಹ ಹೋಟೆಲ್​ಗಳಿಗೆ ಹೋಗದಂತೆ ಅಭಿಯಾನ ಶರುವಾಗಿದೆ. ‘ಜಾಗೋ ಕಲ್ಲಡ್ಕ ಜಾಗೋ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡುತ್ತಿದ್ದಾರೆ.

ಇನ್ನು ಕರಾವಳಿಯಲ್ಲಿ ಆರಂಭವಾದ ಬ್ಯಾನರ್ ವಿವಾದ ರಾಜ್ಯಾದ್ಯಂತ ಹರಡುತ್ತಿದೆ. ಈ ಮಧ್ಯೆ ಮಂಗಳೂರಿನ ಹೊರವಲಯದಲ್ಲಿರುವ ಮುಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಕೂಡ ಬ್ಯಾನರ್ ಹಾಕಲಾಗಿತ್ತು. ಹಿಂದೂ ಬಾಂದವರು ಅನ್ನೊ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿತ್ತು. ಬಪ್ಪನಾಡು ಶ್ರೀ ದುರ್ಗಪರಮೇಶ್ವರಿ ದೇವಸ್ಥಾನಲ್ಲಿ ನಾಳೆ ನಾಡಿದ್ದು ಕೂಡ ಅದ್ದೂರಿ ಜಾತ್ರೆ ನಡೆಯಲಿದೆ. ಈಗಾಗಲೇ ಹಿಂದೂ ಸಂಘಟನೆಯವರು ಹಾಕಿದ ಬೋರ್ಡ್​ನಿಂದಾಗಿ ನೊಂದಾಯಿಸಿಕೊಂಡಿದ್ದ 80 ಮುಸ್ಲಿಂ ವ್ಯಾಪಾರಿಗಳಲ್ಲಿ 40 ಮುಸ್ಲಿಂ ವ್ಯಾಪಾರಿಗಳು ವಾಪಾಸ್ ಹೋಗಿದ್ದಾರೆ ಅಂತ ಪೊಲೀಸ್ ಕಮಿಷನರ್ ಟಿವಿ9 ಗೆ ತಿಳಿಸಿದ್ದಾರೆ.

ಇದನ್ನೂ ಓದಿ

Venkatesh Iyer: ಬರೋಬ್ಬರಿ 204 ರನ್: ಐಪಿಎಲ್ ಅಭ್ಯಾಸ ಪಂದ್ಯದಲ್ಲಿ ಕೆಕೆಆರ್ ಬ್ಯಾಟರ್​ನ ಸಿಡಿಲಬ್ಬರದ ಆಟ

Home Loan: ಗಗನಕ್ಕೇರಿದ ಕಟ್ಟಡ ನಿರ್ಮಾಣ ವೆಚ್ಚಕ್ಕೆ ಕುಸಿದ ಮಾಲೀಕರು; ಲೋನ್​ ಟಾಪ್​ ಅಪ್ ನಿಯಮ ಬದಲಾಯಿಸಲು ಹೆಚ್ಚಿದ ಒತ್ತಡ