Viral Video: ಹನುಮಂತನ ಬಾಲದಂತಹ ರೈಲನ್ನು ಮೊದಲ ಬಾರಿಗೆ ನೋಡಿದ ಪುಟಾಣಿಯ ಪ್ರತಿಕ್ರಿಯೆ ಹೀಗಿತ್ತು!

ಈ ವಿಡಿಯೋವನ್ನು ನೋಡಿದ ಹಲವರು ಮತ್ತೆ ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡಿದ್ದು, ಪುಟಾಣಿಯ ಮುಖದಲ್ಲಿನ ಅಚ್ಚರಿ ನೋಡುತ್ತಿದ್ದರೆ ನಾನು ಅದರಲ್ಲೇ ಕಳೆದು ಹೋಗುತ್ತೇನೆ. ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಾ ಬಾಲ್ಯದ ದಿನಗಳಿಗೆ ಹೋಗುತ್ತಿದ್ದೇನೆ. ಇದೊಂದು ಯಾವುದೇ ಕಲ್ಮಶವಿಲ್ಲದ ಮುಗ್ಧತೆ ಎಂದೆಲ್ಲಾ ಬಣ್ಣಿಸಿದ್ದಾರೆ.

Viral Video: ಹನುಮಂತನ ಬಾಲದಂತಹ ರೈಲನ್ನು ಮೊದಲ ಬಾರಿಗೆ ನೋಡಿದ ಪುಟಾಣಿಯ ಪ್ರತಿಕ್ರಿಯೆ ಹೀಗಿತ್ತು!
ಮೊದಲ ಬಾರಿಗೆ ರೈಲನ್ನು ನೋಡಿದ ಹುಡುಗಿ ಪ್ರತಿಕ್ರಿಯೆ ಹೀಗಿತ್ತು
Follow us
| Updated By: shruti hegde

Updated on: Apr 04, 2021 | 12:34 PM

ಬಾಲ್ಯವೆಂದರೆ ಅಗಣಿತ ಅಚ್ಚರಿಗಳ ಆಗರ. ಆಗ ತಾನೇ ಲೋಕವನ್ನು ಬೆರಗುಗಣ್ಣುಗಳಿಂದ ನೋಡುವ ವಯಸ್ಸಿನಲ್ಲಿ ಆಶ್ಚರ್ಯ ಹುಟ್ಟುಹಾಕುವ ವಿಚಾರಗಳಿಗೆ ಕೊನೆಯೇ ಇರುವುದಿಲ್ಲ. ಮೊದಲ ಮಿಂಚು, ಗುಡುಗು, ಮಳೆ, ಪ್ರವಾಸ, ಮೊದಲ ಬಾರಿಗೆ ಕಂಡ ಕಡಲು, ಧುಮ್ಮಿಕ್ಕಿದ ಜಲಪಾತ, ಆಕಾಶದಿಂದ ಉದುರಿದ ಉಲ್ಕೆ, ಹಕ್ಕಿಯಂತೆ ಕಂಡ ವಿಮಾನ.. ಹೀಗೆ ಅಚ್ಚರಿ ಹುಟ್ಟಿಸಿದ ಸಂಗತಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಹಾಂ! ಹನುಮಂತನ ಬಾಲ ಸಂದ ತಕ್ಷಣ ಇನ್ನೊಂದು ಸಂಗತಿ ನೆನಪಾಯ್ತ ನೋಡಿ.. ನೀವು ಮೊಟ್ಟಮೊದಲ ಬಾರಿಗೆ ರೈಲು ನೋಡಿದ್ದು ಯಾವಾಗ ಎಂದು ನೆನಪಿದೆಯಾ? ಬರೀ ರಸ್ತೆಯ ಮೇಲೆ ಸಾಗುವ ಕಾರು, ಬೈಕು, ಬಸ್ಸು, ಲಾರಿಗಳನ್ನು ನೋಡಿದ್ದ ನಮ್ಮ ಕಣ್ಣುಗಳಿಗೆ ರೈಲು ಅತಿ ದೊಡ್ಡ ವಿಸ್ಮಯದಂತೆ ಕಾಣಿಸಿರುತ್ತದೆ. ಅದರ ತಲೆ ಯಾವುದು? ಬುಡ ಯಾವುದು? ಆ ಪುಟಾಣಿ ಹಳಿಗಳ ಮೇಲೆ ಇಷ್ಟು ಉದ್ದದ ದೈತ್ಯದೇಹಿ ಚಲಿಸುವುದಾದರೂ ಹೇಗೆ? ಇದರಲ್ಲಿ ಎಷ್ಟು ಜನ ಕೂರಬಹುದು.. ಹೀಗೆ ಲೆಕ್ಕವಿಲ್ಲದಷ್ಟು ಪ್ರಶ್ನೆಗಳು ಸೆಕೆಂಡುಗಳ ಅಂತರದಲ್ಲಿ ರೈಲು ಚಲಿಸುವಷ್ಟೇ ವೇಗದಲ್ಲಿ ಹುಟ್ಟಿಕೊಂಡಿರುತ್ತವೆ.

ಇಷ್ಟೆಲ್ಲಾ ಕತೆ ಹೇಳುವುದಕ್ಕೆ ಕಾರಣ ಸದ್ಯ ಸಾಮಾಜಿಕ ಜಾಲತಾಣದಲ್ಲೊಂದು ವಿಡಿಯೋ ವೈರಲ್ ಆಗಿದೆ. ಪುಟಾಣಿ ಹುಡುಗಿಯೊಬ್ಬಳು ಮೊದಲ ಬಾರಿಗೆ ರೈಲನ್ನು ನೋಡಿದಾಗ ಕಣ್ಣರಳಿಸಿ ಅಚ್ಚರಿ ವ್ಯಕ್ತಪಡಿಸಿದ ಬಗೆಯನ್ನು ಚಿತ್ರೀಕರಿಸಲ್ಪಟ್ಟ ವಿಡಿಯೋ ಅಗಾಧ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. Brian Roemmele ಎಂಬ ಟ್ವಿಟರ್ ಖಾತೆಯಲ್ಲಿ ಕಾಣಿಸಿಕೊಂಡ ವಿಡಿಯೋವನ್ನು ಎಂಟೂವರೆ ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದು, ಒಂದೂವರೆ ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿದೆ.

ಈ ವಿಡಿಯೋವನ್ನು ನೋಡಿದ ಹಲವರು ಮತ್ತೆ ತಮ್ಮ ಬಾಲ್ಯವನ್ನು ಸ್ಮರಿಸಿಕೊಂಡಿದ್ದು, ಪುಟಾಣಿಯ ಮುಖದಲ್ಲಿನ ಅಚ್ಚರಿ ನೋಡುತ್ತಿದ್ದರೆ ನಾನು ಅದರಲ್ಲೇ ಕಳೆದು ಹೋಗುತ್ತೇನೆ. ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಾ ಬಾಲ್ಯದ ದಿನಗಳಿಗೆ ಹೋಗುತ್ತಿದ್ದೇನೆ. ಇದೊಂದು ಯಾವುದೇ ಕಲ್ಮಶವಿಲ್ಲದ ಮುಗ್ಧತೆ ಎಂದೆಲ್ಲಾ ಬಣ್ಣಿಸಿದ್ದಾರೆ.

ರೈಲು ದೂರದಿಂದ ಆಗಮಿಸುತ್ತಿರುವುದನ್ನು ನೋಡುತ್ತಾ ಖುಷಿಗೊಳ್ಳುತ್ತಿದ್ದ ಪುಟಾಣಿ ಅದು ತನಗೆ ಸಮೀಪವಾಗುವುದನ್ನೇ ಕಾಯುತ್ತಾ ಕುತೂಹಲದಿಂದ ಅತ್ತ ದೃಷ್ಟಿ ನೆಟ್ಟ ವಿಡಿಯೋದಲ್ಲಿ ಬಾಲ್ಯದ ಸುಂದರ ಪ್ರಪಂಚ ಅನಾವರಣವಾಗಿದೆ. ಪ್ರತಿಯೊಬ್ಬರೂ ತಮ್ಮ ಬಾಲ್ಯದಲ್ಲಿ ಅದೆಷ್ಟು ಕೌತುಕವನ್ನು ಹೊಂದಿರುತ್ತಾರೆ. ಹೊಸ ವಿಷಯಗಳತ್ತ ಹೇಗೆ ಆಕರ್ಷಿತರಾಗುತ್ತಾರೆ ಎಂಬುದನ್ನು ಸಶಕ್ತವಾಗಿ ಕಟ್ಟಿಕೊಟ್ಟಿರುವ ಈ ವಿಡಿಯೋ ಎಲ್ಲರ ಮನಗೆದ್ದಿದೆ.

ಇದನ್ನೂ ಓದಿ: Viral Video: ಹಿಮಪಾತವನ್ನು ಕಂಡು ಬೆರಗಾದ ಬೆಕ್ಕುಗಳು; ಪುಟಾಣಿ ಮಾರ್ಜಾಲಗಳ ಮುಗ್ಧತೆಗೆ ಮಾರುಹೋದ ಜನರು

Viral Video: ಹೆಬ್ಬಾವನ್ನೇ‌ ನುಂಗಿದ ಬೃಹತ್ ಕಾಳಿಂಗ ಸರ್ಪ! ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ಘಟನೆ

( A Innocent child reaction when she saw train for the first time Video goes Viral)

ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?