ಚಿರತೆ ಜತೆ ವಾಕಿಂಗ್​ ಹೋದ ತೆಲಂಗಾಣ ರಾಜಕಾರಣಿ! ವಿಡಿಯೋ ವೈರಲ್

ತೆಲಂಗಾಣದ ನಾಗಾರ್ಜುನ ಸಾಗರ್​ ಉಪಚುನಾವಣೆಯಲ್ಲಿ ಟಿಆರ್​​ಎಸ್​ ಅಭ್ಯರ್ಥಿಯಾಗಿ ನೋಮುಲಾ ಭಗತ್ ಕುಮಾರ್ ಸ್ಪರ್ಧಿಸಿದ್ದಾರೆ. ಇವರು ಚಿರತೆ ಜತೆ ನಡೆದು ಹೋಗುತ್ತಿರುವ ವಿಡಿಯೋ ಒಂದು ಈಗ ವೈರಲ್​ ಆಗಿದೆ.

ಚಿರತೆ ಜತೆ ವಾಕಿಂಗ್​ ಹೋದ ತೆಲಂಗಾಣ ರಾಜಕಾರಣಿ! ವಿಡಿಯೋ ವೈರಲ್
ಚಿರತೆ ಜತೆ ವಾಕಿಂಗ್​ ಹೋದ ನೋಮುಲಾ ಭಗತ್
Follow us
ರಾಜೇಶ್ ದುಗ್ಗುಮನೆ
| Updated By: ganapathi bhat

Updated on: Apr 03, 2021 | 7:25 PM

ಶ್ವಾನಗಳನ್ನು ವಾಕಿಂಗ್​ಗೆ ಕರೆದುಕೊಂಡು ಹೋಗೋದು ಕಾಮನ್​. ಆದರೆ, ಎಲ್ಲಾದರೂ ಚಿರತೆಯನ್ನು ಕರೆದುಕೊಂಡು ವಾಕಿಂಗ್​ ಹೋಗಿದ್ದನ್ನು ನೀವು ನೋಡಿದ್ದೀರಾ? ತೆಲಂಗಾಣ ಟಿಆರ್​ಎಸ್ ನಾಯಕನೋರ್ವ ಚಿರತೆ ಜತೆ ನಡೆದು ಹೋಗಿರುವ ವಿಡಿಯೋ ಒಂದು ಈಗ ಸಾಕಷ್ಟು ವೈರಲ್​ ಆಗಿದೆ.

ತೆಲಂಗಾಣದ ನಾಗಾರ್ಜುನ ಸಾಗರ್​ ಉಪಚುನಾವಣೆಯಲ್ಲಿ ಟಿಆರ್​​ಎಸ್​ ಅಭ್ಯರ್ಥಿಯಾಗಿ ನೋಮುಲಾ ಭಗತ್ ಕುಮಾರ್ ಸ್ಪರ್ಧಿಸಿದ್ದಾರೆ. ಇವರು ಚಿರತೆ ಜತೆ ನಡೆದು ಹೋಗುತ್ತಿರುವ ವಿಡಿಯೋ ಒಂದು ಈಗ ವೈರಲ್​ ಆಗಿದೆ. ಶ್ವಾನವನ್ನು ನಡೆಸಿಕೊಂಡು ಹೋದಂತೆ ನೋಮುಲಾ ಭಗತ್ ಕುಮಾರ್ ಚಿರತೆಯನ್ನು ಕರೆದುಕೊಂಡು ಹೋಗಿರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ದೀರ್ಘಕಾಲದವರೆಗೆ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ನೋಮುಲಾ ನರಸಿಂಹಯ್ಯ ತೆಲಂಗಾಣ ರಾಜ್ಯ ರಚನೆಯ ನಂತರ ಟಿಆರ್​ಎಸ್ ಪಕ್ಷಕ್ಕೆ ಸೇರಿಕೊಂಡರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಅವರು ನಾಗಾರ್ಜುನ ಸಾಗರ್​​ನಿಂದ ಗೆದ್ದಿದ್ದರು. ಆದರೆ, ಅವರು ಮೃತಪಟ್ಟಿದ್ದರಿಂದ ಇಲ್ಲಿಗೆ ಉಪಚುನಾವಣೆ ನಡೆಯುತ್ತಿದೆ.

ನೋಮುಲಾ ನರಸಿಂಹಯ್ಯ ಪುತ್ರ ಭಗತ್ ಕುಮಾರ್ ಟಿಆರ್​ಎಸ್​ ಅಭ್ಯರ್ಥಿಯಾಗಿ ನಾಗಾರ್ಜುನ್​ ಸಾಗರ್​ ಅಖಾಡಕ್ಕೆ ಇಳಿದಿದ್ದಾರೆ. ಇವರು ಚುನಾವಣಾ ಪ್ರಚಾರ ಮಾಡುತ್ತಿದ್ದು, ಭಗತ್ ಹಳೆಯ ವಿಡಿಯೋ ವೈರಲ್ ಆಗಿದೆ. ಚಿರತೆಯೊಂದಿಗೆ ಭಗತ್ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಹಂಚಿಕೊಂಡಿದ್ದಾರೆ.

ಕೆಸಿಆರ್ ಹುಲಿ ಮತ್ತು ಕೆಟಿಆರ್ ಸಿಂಹ ಎಂದು ನಮಗೆ ಗೊತ್ತು. ಆದರೆ, ನೋಮುಲಾ ಭಗತ್ ಚಿರತೆಯನ್ನು ವಾಕ್ ಕರೆದೊಯ್ಯುತ್ತಿರುವ ವಿಡಿಯೋ ನನಗೆ ತುಂಬಾ ಇಷ್ಟವಾಯಿತು. ನಾಗಾರ್ಜುನ ಸಾಗರ್ ಉಪ ಚುನಾವಣೆಯಲ್ಲಿ ನನಗೆ ಮತ ಚಲಾಯಿಸಲು ಅವಕಾಶವಿದ್ದರೆ, ನಾನು ಅವರಿಗೆ ಮತ ಹಾಕುತ್ತಿದ್ದೆ ಎಂದು ಬರೆದಯಕೊಂಡಿದ್ದಾರೆ.

5 ವರ್ಷದ ಹಳೆಯ ವಿಡಿಯೋ .. ಚಿರತೆಯೊಂದಿಗೆ ನೋಮುಲಾ ಭಗತ್ ನಡೆದಿದ್ದು ನಿಜ ಎಂದು ಅವರ ಆಪ್ತರು ಹೇಳಿದ್ದಾರೆ. ಮೂಲಗಳ ಪ್ರಕಾರ, ಭಗತ್ ಐದು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಅವರು ಸಫಾರಿಗೆ ಹೋಗಿದ್ದಾಗ ಚಿರತೆ ಜತೆ ನಡೆದಿದ್ದರು ಎನ್ನಲಾಗಿದೆ.

ಚುನಾವಣಾ ಅಖಾಡ.. ತೆಲಂಗಾಣದ ನಲ್ಲಗೊಂಡ ಜಿಲ್ಲೆ ನಾಗಾರ್ಜುನ ಉಪಚುನಾವಣೆಗೆ ಒಟ್ಟು 77 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ವಿವಿಧ ಕಾರಣಗಳಿಗಾಗಿ 17 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಮೂರು ಅಭ್ಯರ್ಥಿಗಳು ಶುಕ್ರವಾರ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಪ್ರಸ್ತುತ 57 ಜನರು ಕಣದಲ್ಲಿದ್ದಾರೆ.

ಇದನ್ನೂ ಓದಿ: ಹಾವೇರಿ ಜನತೆಗೆ ಚಿರತೆ ಭೀತಿ; ಸೆರೆ ಹಿಡಿಯಲು ಬೋನ್ ಇಟ್ಟಿರುವ ಅರಣ್ಯ ಇಲಾಖೆ

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು