Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ

| Updated By: ಶ್ರೀದೇವಿ ಕಳಸದ

Updated on: May 18, 2023 | 2:42 PM

Rapido : ಮಹಿಳೆಯೊಬ್ಬರು ಹೀಗೆ ಟ್ರಾಫಿಕ್​ನಲ್ಲಿಯೇ ಲ್ಯಾಪ್​ಟಾಪ್​ ತೆರೆದು ಕೆಲಸದಲ್ಲಿ ಮುಳುಗಿದ್ದಾರೆ. ಮಹಾನಗರಗಳ ಸಂಚಾರ ದಟ್ಟಣೆ, ಕಂಪೆನಿಗಳ​ ಕಾರ್ಯಒತ್ತಡ, ಇದೆಲ್ಲ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತದೆಯೋ...

Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ
ರ್‍ಯಾಪಿಡೋ ಬೈಕ್ ಸವಾರನ ಹಿಂದೆ ಕುಳಿತು ಕೆಲಸ ಮಾಡುತ್ತಿರುವ ಮಹಿಳೆ
Follow us on

Traffic : ವರ್ಕ್​ ಫ್ರಂ ಹೋಂ, ವರ್ಕ್​ ಫ್ರಂ ರೆಸ್ಟೋರೆಂಟ್​, ವರ್ಕ್​ ಫ್ರಂ ಬಾರ್​, ವರ್ಕ್​ ಫ್ರಂ ಎನಿವೇರ್​! ಎಲ್ಲಿಂದ ಕೆಲಸ ಮಾಡುತ್ತೀರಿ ಎನ್ನುವುದು ನಮಗೆ ಮುಖ್ಯ ಅಲ್ಲವೇ ಅಲ್ಲ. ಕೆಲಸ ಮಾತ್ರ ಮುಖ್ಯ ಎನ್ನುವುದು ಈಗಿನ ಕಾರ್ಪೋರೇಟ್​ ಕಂಪೆನಿಗಳ ನಿರೀಕ್ಷೆ. ಹಾಗಾಗಿ ಯಾರು ಎಲ್ಲೆಲ್ಲಿಂದ ಕೆಲಸ ಮಾಡುತ್ತಾರೆ ಎನ್ನುವುದು ಅವರವರಿಗೆ ಗೊತ್ತಿರಲು ಸಾಕು. ಈಗಿಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹೆಣ್ಣುಮಗಳೊಬ್ಬಳು ರ್‍ಯಾಪಿಡೋ ಬೈಕ್​ ಹಿಂದೆ ಕುಳಿತು ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿನ ಟ್ರಾಫಿಕ್​ ಬಗ್ಗೆ ತಲೆ ಕೆಡುವುದಂತೂ ಗ್ಯಾರಂಟಿ. ಆದರೆ ಸ್ವಲ್ಪ ತಾಳ್ಮೆಯಿಂದ ಇದ್ದರೆ ಈ ಟ್ರಾಫಿಕ್​ನ ಸದುಪಯೋಗವನ್ನೂ ಪಡೆದುಕೊಳ್ಳಬಹುದು. ಅನೇಕರು ಬಸ್ಸಿನೊಳಗೆ, ಕಾರಿನೊಳಗೆ ಕುಳಿತು ಕೆಲಸ ಮಾಡುವುದನ್ನು ನೋಡಿದ್ದೀರಿ. ಆದರೆ ಬೈಕಿನ ಮೇಲೆ? ಹೌದು ಈ ಮಹಿಳೆಯ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಕೋರಮಂಗಲ ಔಟರ್​ ರಿಂಗ್​ರೋಡ್​ನ ಟ್ರಾಫಿಕ್​ನಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ನಿಹಾರ್ ಲೋಹಿಯಾ ಎನ್ನುವವರು ಇದನ್ನು ಟ್ವೀಟ್ ಮಾಡಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ

ಕೋರಮಂಗಲದ ಔಟರ್​ ರಿಂಗ್​ರೋಡ್​​ನ ಇಬ್ಬಲೂರು ಸರ್ವೀಸ್​ ರಸ್ತೆಯ ಮಿಲಿಟರಿ ಗೇಟ್​ ಬಳಿ ಮರ ಬಿದ್ದಿದ್ದರಿಂದ ಈ ರಸ್ತೆಯಲ್ಲಿ ಸಂಚಾರದಟ್ಟಣೆ ಉಂಟಾಗಿದೆ ಎಂದು ಪೊಲೀಸ್ ಉಪ ಕಮಿಷನರ್​ ಸುಜೀತಾ ಸಲ್ಮಾನ್​ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಪರ್ಯಾಯ ಮಾರ್ಗದಲ್ಲಿ ಚಲಿಸುವಂತೆ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ : Viral: ಕಾಗದದ ವಿಮಾನದೊಂದಿಗೆ​ ಆಡುತ್ತಿರುವ ಬಾಲಕ ಈ ಉದ್ಯಾನದಲ್ಲಿ ಎಲ್ಲಿದ್ದಾನೆ?

ಪಾಪ ಈ ಮಹಿಳೆ ಬೈಕ್​ ಮೇಲೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರೆ ಆಕೆಯ ಕೆಲಸದ ಒತ್ತಡ ಎಷ್ಟಿರಬಹುದು ಯೋಚಿಸಿ ಎಂದಿದ್ದಾರೆ ಒಬ್ಬರು. ದಿನಕ್ಕೆ ನೀವು 10 ಗಂಟೆಗಳ ಕಾಲ ಕೆಲಸ ಮಾಡುತ್ತೀರಾದರೆ ನಿಮ್ಮ ಊರಿನಲ್ಲಿ ನೀವೇ ಕಳೆದುಹೋಗಿರುತ್ತೀರಿ. ಅಂಥಾ ಒತ್ತಡ, ತಿರಸ್ಕಾರ, ನಿರಾಸೆ ಎಲ್ಲವೂ ನಿಮ್ಮನ್ನು ಆವರಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:26 pm, Thu, 18 May 23