Giraffe : ಪ್ರಾಣಿಸಂಗ್ರಹಾಲಯಕ್ಕೆ ಹೋದಾಗ ಕೋತಿ ಕಂಡರೆ ಬಾಳೆಹಣ್ಣು, ಕೊಬ್ಬರಿ, ಕಡಲೆಕಾಯಿ, ಬಿಸ್ಕೆಟ್, ಚಿಪ್ಸ್ ಹೀಗೆ… ತಮ್ಮ ಬಳಿ ಇದ್ದ ತಿನಿಸನ್ನೆಲ್ಲ ಧಾರೆ ಎರೆದುಬಿಡುತ್ತವೆ ಮಕ್ಕಳು. ಅದೇ ಮೊಲ ಕಂಡರೆ ಕ್ಯಾರೆಟ್, ಸೊಪ್ಪು, ಕ್ಯಾಬೇಜ್ ಅನ್ನು ಕೊಡುತ್ತವೆ. ಪಕ್ಷಿಗಳು (Birds) ಕಂಡರೆ ಕಾಳುಗಳನ್ನು ಹಾಕುತ್ತವೆ. ಜಿರಾಫೆ ಕಂಡರೆ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ತಮ್ಮ ಮಗನನ್ನು ಪ್ರಾಣಿಸಂಗ್ರಹಾಲಯಕ್ಕೆ ಕರೆದೊಯ್ದಿದ್ದಾರೆ ಈ ದಂಪತಿ. ಜಿರಾಫೆ ನೋಡಲು ಹೋದಾಗ ಒಂದು ದೊಡ್ಡ ಎಲೆಯನ್ನು ತಿನ್ನಿಸಲು ಮಗು ಹತ್ತಿರ ಹೋಗಿದೆ. ಆದರೆ ಆ ಜಿರಾಫೆ ಎಲೆಸಮೇತ ಆ ಮಗುವನ್ನು ಮೇಲಕ್ಕೆತ್ತಿಬಿಟ್ಟಿದೆ!
ಇದನ್ನೂ ಓದಿ : Viral Video: ಪರ್ಸ್, ಬ್ಯಾಗ್, ಇಟ್ಟಿಗೆ, ಚೆಂಡು ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವ ಇಸ್ತಾನ್ಬುಲ್ ಮಹಿಳೆ
ತಕ್ಷಣವೇ ಗಂಡ ಹೆಂಡತಿ ಮಗುವನ್ನು ರಕ್ಷಿಸುತ್ತಾರೆ. ಆ ಮಗು ಕೈಲಿದ್ದ ಎಲೆಯನ್ನು ಬಿಟ್ಟುಬಿಡುತ್ತಾನೆ. ಜಿರಾಫೆ ತನ್ನ ಪಾಡಿಗೆ ತಾನು ಎಲೆಯನ್ನು ಮೆಲ್ಲತೊಡಗುತ್ತದೆ. ಓಡಿಬಂದ ಅಮ್ಮ, ವಿಡಿಯೋ ಮಾಡಲು ಇಟ್ಟಿದ್ದ ಕ್ಯಾಮೆರಾ ಬಟನ್ ಆಫ್ ಮಾಡುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಅಬ್ಬಾ ಆ ಎಲೆ ಎಂಥಾ ಗಟ್ಟಿ ಇರಬೇಕು ಎಂದು ತಮಾಷೆ ಮಾಡುತ್ತಿದ್ದಾರೆ. ಅಕಸ್ಮಾತ್ ಅಲ್ಲಿ ಅಪ್ಪ ಅಮ್ಮ ಇಲ್ಲದಿದ್ದರೆ!?
ಎಲ್ಲವೂ ಸೆಕೆಂಡುಗಳ ಲೆಕ್ಕದಲ್ಲಿ ಮುಗಿಯುತ್ತದೆ! ನೋಡಿ ಈ ವಿಡಿಯೋ
ಈತನಕ ಈ ವಿಡಿಯೋ ಅನ್ನು 10 ಮಿಲಿಯನ್ ಜನರು ನೋಡಿದ್ದಾರೆ. 2 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಬ್ಬಾ ಎಂಥ ಅನಾಹುತವಾಗುತ್ತಿತ್ತು ಎಂದಿದ್ದಾರೆ ಅನೇಕರು. ಆ ಜಿರಾಫೆಯ ದವಡೆ ಎಷ್ಟು ಗಟ್ಟಿ ಇರಬೇಡ ಎಂದಿದ್ದಾರೆ ಒಬ್ಬರು. ಆದರೆ ಆ ಮಗು ಅದೆಷ್ಟು ಗಟ್ಟಿಯಾಗಿ ಆ ಎಲೆಯನ್ನು ಹಿಡಿದುಕೊಂಡಿತ್ತಲ್ಲ ಎಂದಿದ್ದಾರೆ ಇನ್ನೊಬ್ಬರು. ಆ ಎಲೆ ತುಂಡಾಗಲೇ ಇಲ್ಲವಲ್ಲ ಅದನ್ನು ಹೇಳಿ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಪ್ಯಾನ್ಕೇಕ್ ಅಲ್ಲ ದೋಸೆ! ಭಾರತೀಯರಿಗೆ ನೋವುಂಟು ಮಾಡಿದ ಈ ಫೇಸ್ಬುಕ್ ಪುಟ ಡಿಲೀಟ್ ಆಗಬೇಕು
ಅಪ್ಪಅಮ್ಮನೇನೋ ಕೊನೆಗೆ ಖುಷಿಯಲ್ಲಿ ನಕ್ಕುಬಿಟ್ಟಿದ್ದಾರೆ, ಮಗುವನ್ನೂ ಅವರ ಕೈಗೆ ಸಿಗದಂತೆ ಬೀಸಿ ಒಗೆದಿದ್ದರೆ? ಎಂದು ಕೆಲವರು ಗಾಬರಿಗೆ ಒಳಗಾಗಿದ್ದಾರೆ. ನನಗನ್ನಿಸಿದಂತೆ ಆ ಮಗು ಅಮ್ಯೂಸ್ಮೆಂಟ್ ಪಾರ್ಕಿಗೆ ಹೋಗೋಣ ಎಂದು ಹಠ ಮಾಡಿರುತ್ತಾನೆ. ಆದರೆ ಅವನ ಪೋಷಕರು, ಅದೆಲ್ಲ ತುಂಬಾ ದುಬಾರಿ, ಪ್ರಾಣಿಸಂಗ್ರಹಾಲಯಕ್ಕೆ ಹೋಗೋಣ ಎಂದು ಕರೆದುಕೊಂಡು ಬಂದಿರುತ್ತಾರೆ. ಅಂತೂ ಮಗುವಿನ ಆಸೆಯೇ ಇಲ್ಲಿ ಫಲಿಸಿದೆ! ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ