
ಮಳೆಯಲ್ಲಿ (rain) ಮೈಚಳಿ ಬಿಟ್ಟು ಕುಣಿಯಲು ಎಲ್ಲರಿಗೂ ಇಷ್ಟ. ಸುರಿಯುವ ಮಳೆಯನ್ನು ಕಂಡಾಗ ದೊಡ್ಡವರು ಕೂಡ ಮಕ್ಕಳಂತೆ ವರ್ತಿಸುತ್ತಾರೆ. ಹೆಚ್ಚಿನವರಿಗೆ ಮಳೆಯಲ್ಲಿ ಒಮ್ಮೆಯಾದ್ರು ನೆನೆಯಬೇಕು, ಮನಸ್ಸು ಬಿಚ್ಚಿ ಕುಣಿಯಬೇಕು ಎನ್ನುವ ಆಸೆ ಇರುತ್ತದೆ. ತುಂತುರು ಮಳೆಯಲ್ಲಿ ಕುಣಿಯೋದು ದೊಡ್ಡ ವಿಷಯವಲ್ಲ, ಈ ಮಳೆಯಲ್ಲಿ ನೆನೆದು ನೆಗಡಿಯಾದ್ರೆ ಅಮ್ಮ ಬೈತಾಳೆ ಎನ್ನುವ ಕಾರಣಕ್ಕೆ ಈ ಆಸೆಯೂ ಹಾಗೆಯೇ ಉಳಿದು ಬಿಡುತ್ತದೆ. ಆದರೆ ಇಲ್ಲೊಬ್ಬಳು ಪುಟ್ಟ ಹುಡುಗಿಯೂ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಮೈಚಳಿ ಬಿಟ್ಟು ಸಖತ್ ಆಗಿ ಡ್ಯಾನ್ಸ್ (dance) ಮಾಡಿದ್ದಾಳೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗುತ್ತಿದ್ದಂತೆ, ಈ ಪುಟಾಣಿಯ ಎಕ್ಸ್ಪ್ರೆಶನ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ivanshika-prathyush ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪುಟಾಣಿಯೊಬ್ಬಳು ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಿರುವುದನ್ನು ಕಾಣಬಹುದು. ಹಾಡಿಗೆ ತಕ್ಕಂತೆ ಸ್ಟೆಪ್ ಹಾಗೂ ಮುದ್ದಾದ ಎಕ್ಸ್ಪ್ರೆಶನ್‌ನೊಂದಿಗೆ ಮಳೆಯಲ್ಲಿ ಡ್ಯಾನ್ಸ್ ಮಾಡುವುದನ್ನು ಎಂಜಾಯ್ ಮಾಡುತ್ತಿದ್ದಾಳೆ. ಆಕೆಯಲ್ಲಿ ಆತ್ಮವಿಶ್ವಾಸವು ಎದ್ದು ಕಾಣುತ್ತಿದೆ.
ಇದನ್ನೂ ಓದಿ :ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು, ಊಟ ತಿಂಡಿಗಾಗಿ ಏನ್ ಮಾಡ್ತಾರೆ ಇಲ್ಲಿನ ಜನ ಗೊತ್ತಾ?
ಈ ವಿಡಿಯೋ 1.9 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಕ್ಲಿಪ್ ನೋಡಿ ಪುಟಾಣಿಯ ಡ್ಯಾನ್ಸ್‌ಗೆ ಫುಲ್ ಫಿದಾ ಆಗಿದ್ದಾರೆ. ಬಳಕೆದಾರರೊಬ್ಬರು, ನನಗೆ ಈ ದಿನವು ತುಂಬಾ ಆಯಾಸದಾಯಕವಾಗಿತ್ತು, ಆದರೆ ದಿನದ ಕೊನೆಯಲ್ಲಿ ಈ ಪುಟಾಣಿಯೂ ನನ್ನ ಮುಖದಲ್ಲಿ ನಗು ತರಿಸಿದ್ದಾಳೆ ಎಂದಿದ್ದಾರೆ. ಇನ್ನೊಬ್ಬರು, ಮಕ್ಕಳು ಈ ಪ್ರಪಂಚವೇ ಹಾಗೆ, ಎಲ್ಲವನ್ನು ಮರೆತು ಸದಾ ಲವಲವಿಕೆಯಿಂದ ಇರುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನು ಎಂಜಾಯ್ ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪೋಷಕರು ಮಕ್ಕಳನ್ನು ಹೀಗೆ ಮಳೆಯಲ್ಲಿ ನೆನೆಯಲು ಬಿಡಬೇಕು ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ