AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಹಸಿವಿಲ್ಲದಿದ್ರೂ ಅಮ್ಮ ಮಾಡಿದ ಅಡುಗೆಯನ್ನು ಕಷ್ಟಪಟ್ಟು ತಿನ್ನುತ್ತಿರುವ ಪುಟಾಣಿ

ಅಮ್ಮನ ಕೈ ರುಚಿಯ ಬೆಲೆ ಗೊತ್ತಾಗೋದು ತಾವೇ ಕಷ್ಟ ಪಟ್ಟು ಮಾಡಿ ತಿನ್ನುವಾಗ ಮಾತ್ರ. ಹೌದು, ಕೆಲಸಕ್ಕೆಂದು ದೂರದ ಊರಿಗೆ ಹೋದಾಗ ತಾವೇ ಅಡುಗೆ ಮಾಡಿಕೊಳ್ಳುವಾಗ ಅಮ್ಮ ಇದ್ದಿದ್ರೆ ಎಲ್ಲಾ ಮಾಡಿ ಕೊಡುತ್ತಿದ್ದಳು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತೇವೆ. ಆದರೆ ಪುಟ್ಟ ಮಗುವೊಂದು ಅಮ್ಮನ ಕೈರುಚಿಯನ್ನು ಹಾಡಿ ಹೊಗಳಿದೆ. ನನ್ನ ಅಮ್ಮ ನನಗಾಗಿ ಪ್ರೀತಿಯಿಂದ ಆಹಾರ ತಯಾರಿಸಿದ್ದಾಳೆ, ನಾನು ತಿನ್ನಬೇಕು ಎನ್ನುವ ಈ ಪುಟಾಣಿಯ ಮಾತು ಎಂತಹವರ ಹೃದಯವನ್ನು ಮುಟ್ಟುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

Video : ಹಸಿವಿಲ್ಲದಿದ್ರೂ ಅಮ್ಮ ಮಾಡಿದ ಅಡುಗೆಯನ್ನು ಕಷ್ಟಪಟ್ಟು ತಿನ್ನುತ್ತಿರುವ ಪುಟಾಣಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 07, 2025 | 10:45 AM

Share

ಕೆಲವು ಹೆಣ್ಣು ಮಕ್ಕಳು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಗಂಡ, ಮನೆಮಕ್ಕಳು ಎಂದು ತನ್ನ ಜೀವಮಾನವನ್ನು ಮುಡಿಪಾಗಿಡುತ್ತಾರೆ. ರುಚಿ ರುಚಿಯಾಗಿ ಅಡುಗೆ (cooking) ಮಾಡಿ ಬಡಿಸಿ ಅವರ ಖುಷಿಯಲ್ಲೇ ತಮ್ಮ ಖುಷಿ ಕಾಣುವ ಈ ಗೃಹಿಣಿಯರಿಗೆ ಒಂದು ಪ್ರೀತಿಯ ಮೆಚ್ಚುಗೆಯ ಮಾತುಗಳು ಸಿಕ್ಕರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಅಡುಗೆ ಚೆನ್ನಾಗಿ ಮಾಡ್ತಿಯಾ, ಇವತ್ತು ಮಾಡಿದ ಸಾಂಬಾರ್ ಚೆನ್ನಾಗಿದೆ ಎಂದರೆ ಸಾಕು, ಈ ಮಾತುಗಳೇ ತನ್ನ ಇಡೀ ದಿನವನ್ನು ಖುಷಿಯಾಗಿಸುತ್ತದೆ. ಆದರೆ ಈ ಪುಟಾಣಿಯೂ ಹೊಟ್ಟೆ ತುಂಬಿದ್ದರೂ ತನ್ನ ತಾಯಿ ಕಷ್ಟಪಟ್ಟು ಅಡುಗೆ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಆಹಾರ ಸವಿಸುತ್ತಾ ಅಡುಗೆಯನ್ನು ಮೆಚ್ಚಿಕೊಳ್ಳುವ ಮೂಲಕ ತಾಯಿಯ ಮುಖದಲ್ಲಿ ನಗು ಮೂಡಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗುತ್ತಿದ್ದಂತೆ ಈ ಪುಟಾಣಿಯ ಮುದ್ದು ಮುದ್ದಾದ ಮಾತಿಗೆ ಫಿದಾ ಆಗಿದ್ದಾರೆ.

anaira doomra ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ದಾಲ್ ಮಖಾನಿ ಹಾಗೂ ರೊಟ್ಟಿಯಿರುವ ಪ್ಲೇಟ್ ಹಿಡಿದು ಕುಳಿತುಕೊಂಡಿದ್ದಾಳೆ. ನನಗೆ ಹಸಿವಿಲ್ಲ, ಆದ್ರೂ ನಾನು ಇದನ್ನು ತಿನ್ನಬೇಕು, ನನ್ನ ಅಮ್ಮ ಇದನ್ನು ಕಷ್ಟಪಟ್ಟು ಮಾಡಿದ್ದಾರೆ ಎನ್ನುವುದನ್ನು ನೋಡಬಹುದು. ಹೀಗೆನ್ನುತ್ತಿದ್ದಂತೆ ತಿನ್ನಲು ಇಷ್ಟವಿಲ್ಲದಿದ್ದರೆ ಬಿಡು ಕಂದ ಎನ್ನುವಾಗ ನೀನು ಕಷ್ಟ ಪಟ್ಟು ಮಾಡಿದ್ದೀಯಾ, ಆದರಿಂದ ನಾನು ತಿನ್ನಲೇಬೇಕು ಎನ್ನುವ ಮುದ್ದಾಗಿ ಹೇಳುತ್ತಾಳೆ.

ಇದನ್ನೂ ಓದಿ
Image
ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?
Image
ಈ ಬುಡಕಟ್ಟಿನ ಹೆಣ್ಣು ಮಕ್ಕಳು ತುಟಿಯನ್ನೇ ತೂತು ಮಾಡ್ತಾರೆ? ಯಾಕೆ ಗೊತ್ತಾ?
Image
ಕಂದಮ್ಮನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಬೆಕ್ಕು
Image
ಚಾಟ್ ಜಿಪಿಟಿ ಸಲಹೆ ಪಡೆದು 30 ದಿನಗಳಲ್ಲಿ ಹತ್ತು ಲಕ್ಷ ಸಾಲ ತೀರಿಸಿದ ಮಹಿಳೆ

ಇದನ್ನೂ ಓದಿ : ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?

ಆದರೆ ತಾಯಿ ಬಲವಂತವಾಗಿ ತಿನ್ನಬೇಡ ಎಂದು ಹೇಳಿದರೂ, ಈ ಪುಟಾಣಿ ಮಾತ್ರ ನೀನು ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ್ದೀಯಾ, ನಾನು ಊಟ ಬಿಟ್ಟರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾಳೆ. ನಿನಗೆ ತಿನ್ನಲು ಮನಸ್ಸಿಲ್ಲವೇ ಎಂದು ತಾಯಿಯೂ ಪ್ರಶ್ನಿಸಿದಾಗ ಇಲ್ಲ ಎಂದು ತಲೆ ಅಲ್ಲಾಡಿಸುತ್ತ ತಿನ್ನುವುದನ್ನು ಮಾತ್ರ ಮುಂದುವರೆಸುವುದನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋದ ಕೊನೆಯಲ್ಲಿ ತಟ್ಟೆ ಬಹುತೇಕ ಖಾಲಿಯಾಗಿರುತ್ತದೆ, ತಾಯಿ ಮಾತ್ರ ಹೇ, ನಿಲ್ಲಿಸು ತಿನ್ನಬೇಡ ಎಂದು ಬಲವಂತ ಹೇಳಿದರೂ, ನಾನು ತಿನ್ನಬೇಕು, ಇದು ಕಷ್ಟದ ಕೆಲಸ ಎಂದು ಮತ್ತೆ ಅದೇ ರೀತಿ ಪುಟಾಣಿಯೂ ಉತ್ತರಿಸುತ್ತಾಳೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈವರೆಗೆ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ತನ್ನ ತಾಯಿ ಎಷ್ಟು ಕಷ್ಟ ಪಟ್ಟು ಅಡುಗೆ ತಯಾರಿಸುತ್ತಾಳೆ ಎಂಬುದನ್ನು ಮಗುವು ಚೆನ್ನಾಗಿ ಅರ್ಥ ಮಾಡಿಕೊಂಡಿದೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಸಣ್ಣ ಸಣ್ಣ ವಿಷಯಗಳು ಹೆಣ್ಣು ಮಕ್ಕಳನ್ನು ಖುಷಿ ಪಡಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ತಾಯಿಗೆ ಮಗುವು ಬಲವಂತವಾಗಿ ತಿನ್ನುವುದನ್ನು ನೋಡಲು ಇಷ್ಟವಿಲ್ಲ, ಮಗಳಿಗೆ ತಾಯಿ ಪ್ರೀತಿಯಿಂದ ಮಾಡಿದ ಅಡುಗೆಯನ್ನು ಬೇಡ ಎನ್ನಲು ಇಷ್ಟವಿಲ್ಲ, ಎಂತಹ ಅದ್ಭುತ ವಿಡಿಯೋ ಎಂದು ಬರೆದುಕೊಂಡಿದ್ದಾರೆ. ಎನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 am, Mon, 7 July 25

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು